ಮೆಲ್ಬೋರ್ನ್: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಅವರು ವಿರಾಟ್ ಕೊಹ್ಲಿ-ಸ್ಯಾಮ್ ಕಾನ್ಸ್ಟಾಸ್ ಘಟನೆಯ ಕುರಿತು ಮೆಲ್ಬೋರ್ನ್ ಟೆಸ್ಟ್‌ನ ಮೊದಲ ದಿನದಂದು ತಮ್ಮ ತೀರ್ಪನ್ನು ಪ್ರಕಟಿಸಿರಬಹುದು ಆದರೆ ಆಸ್ಟ್ರೇಲಿಯಾದ ಮಾಧ್ಯಮಗಳು ಇನ್ನೂ ಬಿಟ್ಟಿಲ್ಲ.
ಮೆಲ್ಬೋರ್ನ್ ಪಂದ್ಯದ ಆರಂಭದಲ್ಲಿ ಕೊಹ್ಲಿ ಮತ್ತು ಕಾನ್ಸ್ಟಾಸ್ ಮಧ್ಯೆ ತುಸು ಘರ್ಷಣೆಯೊಂದು ನಡೆದಿದೆ. ಭಾರತದ ಸ್ಟಾರ್ ಆಟಗಾರ ವಿರಾಟ್ ಉದ್ದೇಶಪೂರ್ವಕವಾಗಿ ಆಸೀಸ್ ಆರಂಭಿಕ ಆಟಗಾರ ಕಾನ್ಸ್ಟಾಸ್ ನನ್ನು ಭುಜದಿಂದ ತಳ್ಳಿದರು. ಈ ಘಟನೆಯು ಮೈದಾನದಲ್ಲಿ ಮತ್ತು ಹೊರಗೆ ಸಾಕಷ್ಟು ಟೀಕೆಗೆ ಕಾರಣವಾಯಿತು, ಹಲವಾರು ಮಾಜಿ ಕ್ರಿಕೆಟಿಗರು ಈ ವಿಷಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಮ್ಯಾಚ್ ರೆಫರಿ ತನ್ನ ತೀರ್ಪನ್ನು ಪ್ರಕಟಿಸಿದ್ದು, ವಿರಾಟ್ ಕೊಹ್ಲಿ ಅವರಿಗೆ ಪಂದ್ಯ ಶುಲ್ಕದ ಶೇ.20ರಷ್ಟು ದಂಡ ವಿಧಿಸಲಾಗಿದೆ. ಆದರೆ ಆಸ್ಟ್ರೇಲಿಯಾದ ಮಾಧ್ಯಮವು ಇಷ್ಟಕ್ಕೆ ಬಿಡಲು ಒಪ್ಪಿಲ್ಲ. ವಿರಾಟ್ ಕೊಹ್ಲಿ ಅವರನ್ನು ಒಂದು ಪಂದ್ಯಕ್ಕೆ ಬ್ಯಾನ್ ಮಾಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಿಸಲಾಗಿತ್ತು. ಆಸೀಸ್ ಮಾಧ್ಯಮಗಳು ಒಂದು ಹೆಜ್ಜೆ ಮುಂದೆ ಹೋಗಿ ವಿರಾಟ್ ಕೊಹ್ಲಿ ಅವರನ್ನು ʼವಿದೂಷಕʼ ಎಂದು ಕರೆದು ಅವಮಾನ ಮಾಡಿವೆ.
‘ದಿ ವೆಸ್ಟ್ ಆಸ್ಟ್ರೇಲಿಯನ್’ ಭಾರತದ ಮಾಜಿ ನಾಯಕನನ್ನು ‘ವಿದೂಷಕ ಕೊಹ್ಲಿ’ ಎಂಬ ಶೀರ್ಷಿಕೆಯನ್ನು ಬಳಸಿಕೊಂಡು ಅವಮಾನಿಸಿದೆ. ಅವರ ಕೃತ್ಯದ ಬಗ್ಗೆ ಕೊಹ್ಲಿಯನ್ನು ಸೂಕ್ (ಅಳುವ ಮಗು ಅಥವಾ ಹೇಡಿ) ಎಂದೂ ಕರೆದಿದೆ.
ಪಂದ್ಯದ ಬಳಿಕ ಮಾತನಾಡಿದ ಕ್ಯಾನ್ಸ್ಟಾಸ್, “ನಾನು ನನ್ನ ಗ್ಲೌಸ್ ಗಳನ್ನು ಸರಿಹೊಂದಿಸುತ್ತಿದ್ದೆ. ಅವರು ಆಕಸ್ಮಿಕವಾಗಿ ನನಗೆ ಹೊಡೆದಿದ್ದಾರೆ ಎಂದು ನಾನು ಭಾವಿಸುತ್ತೇನೆ. ಆದರೆ ಅದು ಕೇವಲ ಕ್ರಿಕೆಟ್, ಕೇವಲ ಉದ್ವೇಗ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದರು.