Advertisement

ಮೀನುಗಾರಿಕೆ ರಫ್ತು ವೃದ್ಧಿಗೆ ಒಡಿಶಾ ಸರಕಾರ –ನಿಟ್ಟೆ ವಿ.ವಿ. ಒಪ್ಪಂದ

04:46 PM Jun 23, 2017 | Team Udayavani |

ಉಳ್ಳಾಲ: ಒಡಿಶಾ ಸರಕಾರವು ಮುಂದಿನ ಐದು ವರ್ಷಗಳಲ್ಲಿ ಮೀನುಗಾರಿಕಾ ಉತ್ಪನ್ನಗಳ ರಫ್ತುನ್ನು ಹತ್ತು ಪಟ್ಟು ಹೆಚ್ಚುಗೊಳಿಸಲು ರೂಪುರೇಖೆ ತಯಾರಿಸಲು ಮತ್ತು ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ತಮ್ಮ ಒಂದು ಕೋಟಿ ರೂಪಾಯಿಗಳ ಸಲಹಾ ಒಪ್ಪಂದವನ್ನು ನಿಟ್ಟೆ ವಿಶ್ವ ವಿದ್ಯಾನಿಲಯಕ್ಕೆ ನೀಡಿದ್ದು, ಒಡಿಶಾ ಸರಕಾರದ ಮೀನುಗಾರಿಕಾ ಮತ್ತು ಪ್ರಾಣಿ ಸಂಪನ್ಮೂಲ ಖಾತೆಯ ಕಾರ್ಯಾ ಲಯದಲ್ಲಿ ಸಹಿ ಹಾಕಲಾಯಿತು.

Advertisement

ಒಡಿಶಾ ಸರಕಾರದ ಕೃಷಿ, ರೈತ ಸಶಕ್ತೀ ಕರಣ, ಮೀನುಗಾರಿಕೆ ಮತ್ತು ಪ್ರಾಣಿ ಸಂಪನ್ಮೂಲ ಮತ್ತು ಸಾರ್ವಜನಿಕ ಉದ್ಯಮಗಳ ಖಾತೆಯ ಸಚಿವರಾದ ಡಾ| ದಾಮೋದರ ರಾವತ್‌ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಒಡಿಶಾ ಸರಕಾರದ ಮೀನುಗಾರಿಕಾ ನಿರ್ದೇಶಕ ಡಾ| ಬಿಜೋಯ್‌ ಉಪಾಧ್ಯಾಯ ಮತ್ತು ನಿಟ್ಟೆ ವಿ.ವಿ.ಯ ಅಂತಾರಾಷ್ಟ್ರೀಯ ಸಂಬಂಧಗಳ ಹಿರಿಯ ನಿರ್ದೇಶಕರಾದ ಡಾ| ಇಡ್ಡಾ$Â ಕರುಣಾಸಾಗರ್‌ ಅವರು ಒಪ್ಪಂದಕ್ಕೆ ಸಹಿ ಹಾಕಿರುವ ಒಡಂಬಡಿಕೆ ಪತ್ರವನ್ನು ವಿನಿಮಯಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಒಡಿಶಾದ ಮೀನುಗಾರಿಕಾ ಆಯುಕ್ತರಾದ ವಿಶಾಲ್‌ ಗಗನ್‌, ನಿಟ್ಟೆ ವಿ.ವಿ. ಕುಲಪತಿ ಡಾ| ಎಸ್‌. ರಮಾನಂದ ಶೆಟ್ಟಿ ಉಪಸ್ಥಿತರಿದ್ದರು.

ಸಚಿವ ಡಾ| ದಾಮೋದರ ರಾವುತ್‌ ಮಾತನಾಡಿ, ಒಡಿಶಾದ ಶ್ರೀಮಂತ ಜಲಸಂಪನ್ಮೂಲ ಸಾಗರೋತ್ಪನ್ನ ಕೈಗಾರಿಕೆಯನ್ನು ಅಭಿವೃದ್ಧಿಗೊಳಿಸಲು ಪೂರಕವಾಗಿವೆ. ಆದರೆ ಅದಕ್ಕೆ ತಾಂತ್ರಿಕ ಅಡೆತಡೆಗಳಿವೆ. ಈ ಅಡೆತಡೆಯನ್ನು ನಿವಾರಿಸಲು ಪರಿಣತ ತಜ್ಞರಾದ ಡಾ| ಇಡ್ಯಾ ಕರುಣಾಸಾಗರ್‌ ಅವರ ಜತೆ ವಿಷ್ಣು ಭಟ್‌, ನಿವೃತ್ತ ಮೀನುಗಾರಿಕಾ ಅಭಿವೃದ್ಧಿ ಆಯುಕ್ತರು, ಡಾ| ಶ್ರೀಜಿತ್‌ ಮಿಶ್ರಾ, ನಭ ಕೃಷ್ಣ ಚೌಧರಿ ಶಿಕ್ಷಣಾಭಿವೃದ್ಧಿ ಸಂಸ್ಥೆ, ಭುವನೇಶ್ವರ್‌, ಡಾ| ಗಂಗೇಶ್‌ ವರ್ಮಾ, ವರ್ಮಾ ಸಾಗರ ಸಂಪನ್ಮೂಲಗಳ ನಿರ್ದೇಶಕರು ಮತ್ತು ಡಾ| ರಾಮಚಂದ್ರ ಭಟ್‌ ಅವರನ್ನು ಒಳಗೊಂಡ ನಿಯೋಗವು ಈ ಒಪ್ಪಂದವನ್ನು ಕಾರ್ಯರೂಪಕ್ಕೆ ತರಲು ಶ್ರಮಿಸಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next