Advertisement

BJD: ಪಟ್ಟಿ ಬಿಡುಗಡೆ ಮಾಡಿದ ಬಿಜೆಡಿ… ಹಾಕಿ ತಾರೆ ದಿಲೀಪ್‌ ಟಿರ್ಕಿ ಲೋಕಸಭೆ ಅಭ್ಯರ್ಥಿ

09:36 PM Mar 27, 2024 | Team Udayavani |

ಭುವನೇಶ್ವರ್‌: ಲೋಕಸಭೆಗೆ 9 ಮತ್ತು ವಿಧಾನಸಭೆಗೆ 72 ಅಭ್ಯರ್ಥಿಗಳ ಪಟ್ಟಿಯನ್ನು ಬಿಜು ಜನತಾ ದಳ(ಬಿಜೆಡಿ) ನಾಯಕ ಹಾಗೂ ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಿಕ್‌ ಬುಧವಾರ ಬಿಡುಗಡೆ ಮಾಡಿದ್ದಾರೆ.

Advertisement

ಖ್ಯಾತ ಹಾಕಿ ಆಟಗಾರ ದಿಲೀಪ್‌ ಟಿರ್ಕಿ ಅವರಿಗೆ ಸುರೇಂದ್ರಗಢ ಲೋಕಸಭಾ ಕ್ಷೇತ್ರದ ಟಿಕೆಟ್‌ ನೀಡಲಾಗಿದೆ. 1995ರಿಂದ 2010ರ ವರೆಗೆ ಅವರು, ಭಾರತೀಯ ಹಾಕಿ ತಂಡದಲ್ಲಿ ಪ್ರಮುಖ ಆಟಗಾರರಾಗಿದ್ದರು.

ಒಡಿಶಾದಲ್ಲಿ 21 ಲೋಕಸಭೆ ಹಾಗೂ 147 ವಿಧಾನಸಭಾ ಕ್ಷೇತ್ರಗಳಿದ್ದು, ಮೇ 13, 20, 25 ಮತ್ತು ಜೂ. 1ರಂದು ಚುನಾವಣೆ ನಡೆಯಲಿದೆ. ಸಿಎಂ ನವೀನ್‌ ಪಟ್ನಾಯಿಕ್‌ ಗಂಜಾಮ್‌ ಜಿಲ್ಲೆಯ ಹಿಂಜಿಲಿ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. 72 ಅಭ್ಯರ್ಥಿಗಳ ಪೈಕಿ 13 ಹೊಸ ಮುಖಗಳಿದ್ದು, 12 ಮಹಿಳಾ ಅಭ್ಯರ್ಥಿಗಳಿದ್ದಾರೆ. ಸಚಿವ ಸಂಪುಟದ ಬಹುತೇಕರು ಟಿಕೆಟ್‌ ಪಡೆದಿದ್ದಾರೆ. ಲೋಕಸಭೆ ಚುನಾವಣೆಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಣಬ್‌ ಪ್ರಕಾಶ್‌ ದಾಸ್‌ ಸಂಭಲ್ಪುರ್‌ನಲ್ಲಿ ಬಿಜೆಪಿಯ ಧರ್ಮೇಂದ್ರ ಪ್ರಧಾನ್‌ ವಿರುದ್ಧ ಕಣಕ್ಕಿಳಿಯಲಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next