Advertisement
ಒಡಿಶಾದಲ್ಲಿ ಬಿಸಿಹವೆಯ ಪ್ರಮಾಣ ಹೆಚ್ಚುತ್ತಲೇ ಇದೆ. ಶುಕ್ರವಾರದಿಂದ ಒಟ್ಟು 99 ಸೌರಾಘಾತದ ಸಾವುಗಳು ಸಂಭವಿಸಿವೆ ಎಂದು ಅಂದಾಜಿಸಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆ ಬಳಿಕ 20 ಮಂದಿ ಮಾತ್ರ ಸೌರಾಘಾತಕ್ಕೆ ಮೃತಪಟ್ಟಿದ್ದು, ಇನ್ನೆರಡು ಸಾವುಗಳು ಬೇರೆ ಕಾರಣದಿಂದಾಗಿರುವುದಾಗಿ ತಿಳಿದಿದೆ. ಇನ್ನುಳಿದ ಸಾವುಗಳಿಗೆ ಕಾರಣಗಳನ್ನು ತಿಳಿಯಲು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತ ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯಲ್ಲಿ ಮಿತಿಮೀರಿದ ತಾಪಮಾನದಿಂದ 24 ಬಾವಲಿಗಳು ಮೃತಪಟ್ಟಿವೆ ಎಂದು ಅರಣ್ಯ ಇಲಾಖೆ ಹೇಳಿದೆ. ಪಾಳಿ ಅರಣ್ಯ ವ್ಯಾಪ್ತಿಯ ಪರ್ಸಾದ ಗ್ರಾಮದ ಕೊಳವೊಂದರ ಬಳಿ ಬಾವಲಿಗಳ ಶವಗಳು ಪತ್ತೆಯಾಗಿವೆ. ಪ್ರಾಥಮಿಕವಾಗಿ ತಾಪ ಹೆಚ್ಚಳದಿಂದ ಪಕ್ಷಿಗಳು ಸತ್ತಿವೆ ಎನ್ನಲಾಗಿದ್ದು, ಉನ್ನತ ತನಿಖೆ ನಡೆಯುತ್ತಿದೆ. ಇದೇ ವೇಳೆ, ದಿಲ್ಲಿಯಲ್ಲೂ ಬಿಸಿ ಹವೆ ಮುಂದುವರಿದಿದ್ದು, ಸೋಮವಾರ 44.7 ಡಿ.ಸೆ. ತಾಪಮಾನ ದಾಖಲಾಗಿದೆ.