Advertisement

ಒಡಿಯಾ ನಟ ಮಿನಕೇತನ್‌ ದಾಸ್‌ ಇನ್ನಿಲ್ಲ

03:45 AM Jul 02, 2017 | Team Udayavani |

ಭುವನೇಶ್ವರ: ಒಡಿಯಾದ ಹೆಸರಾಂತ ನಟ ಮಿನಕೇತನ್‌ ದಾಸ್‌(56) ಶುಕ್ರವಾರ ರಾತ್ರಿ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದರು. ದೀರ್ಘ‌ಕಾಲೀನ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಮುಂಬಯಿಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಿನಕೇತನ್‌ ತಮ್ಮ ವೈವಿಧ್ಯಮಯ ಪಾತ್ರ ಪೋಷಣೆಯಿಂದಲೇ ಒಡಿಶಾದ ಜನರ ಮನ ಗೆದ್ದಿದ್ದರು. ಇವರು ಹೆಚ್ಚಾಗಿ ಖಳನಟನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಇವರ ನಿಧನಕ್ಕೆ ಒಡಿಶಾ ಸಿಎಂ ನವೀನ್‌ ಪಾಟ್ನಾಯಕ್‌ ಸೇರಿ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next