Advertisement

World Cup 2023 Qualifier ಕೂಟದ ತಂಡ ಪ್ರಕಟಿಸಿದ ಐಸಿಸಿ; ಸೋತ ಜಿಂಬಾಬ್ವೆಯ ಮೂವರಿಗೆ ಸ್ಥಾನ

12:08 PM Jul 11, 2023 | Team Udayavani |

ಹರಾರೆ: ವಿಶ್ವಕಪ್ ಅರ್ಹತಾ ಕೂಟವು ಕೆಲವೇ ದಿನಗಳ ಹಿಂದೆ ಅಂತ್ಯವಾಗಿದೆ. ದಾಸುನ್ ಶನಕಾ ನೇತೃತ್ವದ ಶ್ರೀಲಂಕಾ ತಂಡವು ಫೈನಲ್ ಪಂದ್ಯದಲ್ಲಿ ನೆದರ್ಲ್ಯಾಂಡ್ ತಂಡವನ್ನು ಸೋಲಿಸಿ ಟ್ರೋಫಿ ಗೆದ್ದಿದೆ. ಅಕ್ಟೋಬರ್ ಮತ್ತು ನವೆಂಬರ್ ನಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಕೂಟಕ್ಕೆ ಶ್ರೀಲಂಕಾ ಮತ್ತು ನೆದರ್ಲ್ಯಾಂಡ್ ತಂಡಗಳು ಅರ್ಹತೆ ಪಡೆದಿವೆ.

Advertisement

ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಕೂಟದ ತಂಡವನ್ನು ಪ್ರಕಟಿಸಿದೆ. ಇದರಲ್ಲಿ ಶ್ರೀಲಂಕಾದ ಮೂವರು, ಜಿಂಬಾಬ್ವೆಯ ಮೂವರು, ನೆದರ್ಲ್ಯಾಂಡ್ ನ ಮೂವರು, ಸ್ಕಾಟ್ಲೆಂಡ್ ನ ಇಬ್ಬರು ಸ್ಥಾನ ಪಡೆದಿದ್ದಾರೆ.

ವಿಶ್ವಕಪ್ ಅರ್ಹತಾ ಕೂಟದ ತಂಡ

ಪತ್ತುಮ್ ನಿಸ್ಸಾಂಕಾ (ಶ್ರೀಲಂಕಾ) 417 ರನ್

ವಿಕ್ರಮ್ ಜಿತ್ ಸಿಂಗ್ (ನೆದರ್ಲ್ಯಾಂಡ್) 326 ರನ್ ಮತ್ತು ಆರು ವಿಕೆಟ್

Advertisement

ಬ್ರಾಂಡನ್ ಮೆಕ್ ಮುಲನ್ (ಸ್ಕಾಟ್ಲೆಂಡ್) 364 ರನ್ ಮತ್ತು ಮೂರು ವಿಕೆಟ್

ಸೀನ್ ವಿಲಿಯಮ್ಸ್ (ಜಿಂಬಾಬ್ವೆ) 600 ರನ್ ಮತ್ತು ಮೂರು ವಿಕೆಟ್

ಬಾಸ್ ಡಿ ಲೀಡ್ (ನೆದರ್ಲ್ಯಾಂಡ್) 285 ರನ್ ಮತ್ತು 15 ವಿಕೆಟ್

ಸಿಕಂದರ್ ರಜಾ (ಜಿಂಬಾಬ್ವೆ) 325 ರನ್ ಮತ್ತು ಒಂಬತ್ತು ವಿಕೆಟ್

ಸ್ಕಾಟ್ ಎಡ್ವರ್ಡ್ಸ್ (ನೆದರ್ಲ್ಯಾಂಡ್) 314 ರನ್

ವಾನಿಂದು ಹಸರಂಗ (ಶ್ರೀಲಂಕಾ) 22 ವಿಕೆಟ್

ಮಹೀಶ ತೀಕ್ಷಣಾ (ಶ್ರೀಲಂಕಾ) 21 ವಿಕೆಟ್

ಕ್ರಿಸ್ ಸೋಲ್ (ಸ್ಕಾಟ್ಲೆಂಡ್) 11 ವಿಕೆಟ್

ರಿಚರ್ಡ್ ಎನ್ ಗ್ವರಾ (ಜಿಂಬಾಬ್ವೆ) 14 ವಿಕೆಟ್

Advertisement

Udayavani is now on Telegram. Click here to join our channel and stay updated with the latest news.

Next