Advertisement

ODI; ಬಾಂಗ್ಲಾದೇಶ ತಂಡದೆದುರು ಶ್ರೀಲಂಕಾಕ್ಕೆ 3 ವಿಕೆಟ್‌ ಗೆಲುವು

11:44 PM Mar 16, 2024 | Team Udayavani |

ಚಿತ್ತಗ್ರಾಮ್‌: ಆರಂಭಿಕ ಆಟಗಾರ ಪಥುಮ್‌ ನಿಸ್ಸಂಕ ಅವರ ಶತಕದ ನೆರವಿನಿಂದ ಶ್ರೀಲಂಕಾ ತಂಡವು ಬಾಂಗ್ಲಾದೇಶ ತಂಡದೆದುರು ಶುಕ್ರವಾರ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ 3 ವಿಕೆಟ್‌ಗಳ ಜಯ ಸಾಧಿಸಿತು. ಈ ಗೆಲುವಿನಿಂದ ಶ್ರೀಲಂಕಾ ಮೂರು ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ. ಸರಣಿಯ ನಿರ್ಣಾಯಕ ಪಂದ್ಯ ಇದೇ ಮೈದಾನದಲ್ಲಿ ಮಾ. 18ರಂದು ನಡೆಯಲಿದೆ.

Advertisement

ಮೊದಲ ಪಂದ್ಯ ಜಯಿಸಿದ್ದ ಬಾಂಗ್ಲಾದೇಶವು ಮೊದಲು ಬ್ಯಾಟಿಂಗ್‌ ನಡೆಸಿದ್ದು 7 ವಿಕೆಟಿಗೆ 286 ರನ್ನುಗಳ ಉತ್ತಮ ಮೊತ್ತ ಪೇರಿಸಿತು. ತೌಹಿದ್‌ ಹೃದಯ್‌ 96, ಸೌಮ್ಯ ಸರ್ಕಾರ್‌ 68, ನಜ್ಮುಲ್‌ ಹೊಸೇನ್‌ 40 ರನ್‌ ಹೊಡೆದರು. ಬಿಗು ದಾಳಿ ಸಂಘಟಿಸಿದ ವನಿಂದು ಹಸರಂಗ ಅವರು 45ಕ್ಕೆ 4 ವಿಕೆಟ್‌ ಉರುಳಿಸಿದರು.

ಗೆಲ್ಲಲು ಕಠಿನ ಗುರಿ ಪಡೆದ ಶ್ರೀಲಂಕಾ ತಂಡ ಆರಂಭದಲ್ಲಿಯೇ ಕುಸಿಯಿತು. 43 ರನ್ನಿಗೆ ಮೂರು ವಿಕೆಟ್‌ ಕಳೆದುಕೊಂಡಿದ್ದ ತಂಡವನ್ನು ನಿಸ್ಸಂಕ ಮತ್ತು ಚರಿತ ಅಸಲಂಕ ಆಧರಿಸಿದರು. ನಾಲ್ಕನೇ ವಿಕೆಟಿಗೆ 185 ರನ್ನುಗಳ ಜತೆಯಾಟ ನಡೆಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಅವರಿಬ್ಬರ ಉತ್ತಮ ಆಟದಿಂದಾಗಿ ಶ್ರೀಲಂಕಾ ತಂಡವು 47.1 ಓವರ್‌ಗಳಲ್ಲಿ 7 ವಿಕೆಟಿಗೆ 287 ರನ್‌ ಗಳಿಸಿ ಜಯ ಸಾಧಿಸಿತು. ನಿಸ್ಸಂಕ 114 ರನ್‌ ಗಳಿಸಿದ್ದರೆ ಅಸಲಂಕ 91 ರನ್‌ ಹೊಡೆದರು.

Advertisement

Udayavani is now on Telegram. Click here to join our channel and stay updated with the latest news.

Next