ಬುಧವಾರ ಪರ್ತ್‌ನಲ್ಲಿ ನಡೆದ ಪಂದ್ಯವನ್ನು ಆಸ್ಟ್ರೇಲಿಯ 83 ರನ್ನುಗಳ ಅಂತರದಿಂದ ಜಯಿಸಿತು. ಅನ್ನಾಬೆಲ್ ಸದರ್‌ಲ್ಯಾಂಡ್ ಅವರ ಆಕರ್ಷಕ ಶತಕ (110), ಆ್ಯಶ್ಲಿ ಗಾರ್ಡನರ್ (50) ಮತ್ತು ನಾಯಕಿ ಟಹ್ಲಿಯಾ ಮೆಕ್‌ಗ್ರಾತ್ (ಅಜೇಯ 56) ಅವರ ಅರ್ಧ ಶತಕದ ಸಾಹಸದಿಂದ ಆಸೀಸ್ 6 ವಿಕೆಟಿಗೆ 298 ರನ್ ಪೇರಿಸಿತು. ಭಾರತ 45.1 ಓವರ್‌ಗಳಲ್ಲಿ 215ಕ್ಕೆ ಸರ್ವಪತನ ಕಂಡಿತು.
Advertisement
ಮಂಧನಾ 9ನೇ ಶತಕಭಾರತದ ಸರದಿಯಲ್ಲಿ ಸ್ಮತಿ ಮಂಧನಾ ಅವರದು ಏಕಾಂಗಿ ಹೋರಾಟ ವಾಗಿತ್ತು. 36ನೇ ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡ ಮಂಧನಾ 105 ರನ್ನುಗಳ ಕೊಡುಗೆ ಸಲ್ಲಿಸಿದರು. 109 ಎಸೆತಗಳ ಈ ಬ್ಯಾಟಿಂಗ್ ವೇಳೆ 14 ಬೌಂಡರಿ, ಒಂದು ಸಿಕ್ಸರ್ ಸಿಡಿಸಿದರು. ಇದು ಅವರ 9ನೇ ಏಕದಿನ ಶತಕ.
ಮಂಧನಾ ಮತ್ತು ಹಲೀìನ್ ದೇವಲ್ (39) 2ನೇ ವಿಕೆಟಿಗೆ 118 ರನ್ ಪೇರಿಸಿ ಹೋರಾಟಕ್ಕೆ ಚಾಲನೆ ನೀಡಿದ್ದರು. ಅನಂತರ ಮಂಧನಾಗೆ ಇನ್ನೊಂದು ಕಡೆಯಿಂದ ಬೆಂಬಲ ಲಭಿಸ ಲಿಲ್ಲ. ಒಂದು ಹಂತದಲ್ಲಿ ಭಾರತ 2ಕ್ಕೆ 165 ರನ್ ಬಾರಿಸಿ ಗೆಲುವಿ ನತ್ತ ಮುಖ ಮಾಡಿತ್ತು. ಆದರೆ ಈ ಮೊತ್ತ ದಲ್ಲಿ ನಾಯಕಿ ಕೌರ್ (12) ವಿಕೆಟ್ ಬಿದ್ದೊಡನೆ ಪಂದ್ಯದ ಚಿತ್ರಣ ಒಮ್ಮೆಲೇ ಬದಲಾಯಿತು. ಸ್ಕೋರ್ 189ಕ್ಕೆ ಏರಿದಾಗ ಮಂಧನಾ ವಿಕೆಟ್ ಉರುಳಿತು. ಆ್ಯಶ್ಲಿ ಗಾರ್ಡನರ್ ಎಸೆತದಲ್ಲಿ ಬೌಲ್ಡ್ ಆದರು. ಅದೇ ಓವರ್ ನಲ್ಲಿ ದೀಪ್ತಿ ಶರ್ಮ (0) ಕೂಡ ಔಟಾ ದರು. ಮುಂದಿನ ಓವರ್‌ನಲ್ಲಿ ಜೆಮಿಮಾ ರೋಡ್ರಿಗಸ್ (16) ವಿಕೆಟ್ ಬಿತ್ತು. ಪಂದ್ಯ ಭಾರತದ ಕೈಯಿಂದ ಜಾರಿತು.
ಆಸ್ಟ್ರೇಲಿಯ 78ಕ್ಕೆ 4 ವಿಕೆಟ್ ಉರು ಳಿಸಿ ಕೊಂಡಾಗ ಅನ್ನಾಬೆಲ್ ಸದರ್ ಲ್ಯಾಂಡ್ ನೆರವಿಗೆ ನಿಂತರು. ಅವ ರಿಗೆ ಗಾರ್ಡನರ್ ಮತ್ತು ಮೆಕ್‌ಗ್ರಾತ್ ಅಮೋಘ ಬೆಂಬಲವಿತ್ತರು. ಆಸೀಸ್ ಮೊತ್ತ ಮುನ್ನೂರರ ಗಡಿ ಸಮೀಪಿಸಿತು.
Related Articles
Advertisement
ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ: ಅನ್ನಾಬೆಲ್ ಸದರ್‌ಲ್ಯಾಂಡ್.