Advertisement

ODI; ದಕ್ಷಿಣ ಆಫ್ರಿಕಾ ಎದುರು ಸರಣಿ ಗೆಲುವಿಗೆ ಭಾರತ ತಂತ್ರ

11:39 PM Dec 18, 2023 | Team Udayavani |

 ಕೆಬೆರಾ: ಆತಿಥೇಯ ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿಯಲ್ಲಿ ನಿರೀಕ್ಷೆಗೂ ಮಿಗಿಲಾದ ಆರಂಭ ಪಡೆದ ಭಾರತವೀಗ ಸರಣಿ ಗೆಲುವಿಗೆ ಕಾರ್ಯತಂತ್ರ ರೂಪಿಸುತ್ತಿದೆ. ದ್ವಿತೀಯ ಮುಖಾಮುಖಿ ಮಂಗಳವಾರ ಇಲ್ಲಿ ನಡೆಯಲಿದ್ದು, ಇದನ್ನೂ ಗೆದ್ದು ಸರಣಿ ವಶಪಡಿಸಿಕೊಳ್ಳುವುದು ಯಂಗ್‌ ಇಂಡಿಯಾದ ಯೋಜನೆ. ಇದ ರೊಂದಿಗೆ 2022ರಲ್ಲಿ ಕೆ.ಎಲ್‌. ರಾಹುಲ್‌ ನಾಯಕತ್ವದಲ್ಲೇ ಅನುಭ ವಿಸಿದ 3-0 ವೈಟ್‌ವಾಶ್‌ಗೆ ಸೇಡನ್ನೂ ತೀರಿಸಿಕೊಂಡಂತಾಗುತ್ತದೆ.

Advertisement

ಜೊಹಾನ್ಸ್‌ಬರ್ಗ್‌ ಪಂದ್ಯದಲ್ಲಿ ಬಲಿಷ್ಠ ಬ್ಯಾಟಿಂಗ್‌ ಸರದಿ ಹೊಂದಿದ್ದ ದ. ಆಫ್ರಿಕಾವನ್ನು ಭಾರತ ಒಂದೇ ಕೈಯಲ್ಲಿ ಎಂಬಂತೆ ಹೊಡೆದು ರುಳಿಸಿತ್ತು. ಸಾಮಾನ್ಯ ಎಂದು ಭಾವಿಸ ಲಾಗಿದ್ದ ಭಾರತದ ಬೌಲಿಂಗ್‌ ಪಡೆ ಅಸಾಧಾರಣ ಪರಾಕ್ರಮ ಮೆರೆದಿತ್ತು. ವಾಂಡರರ್ ಟ್ರ್ಯಾಕ್‌ನ ಸಂಪೂರ್ಣ ಲಾಭವೆತ್ತಿದ ಅರ್ಷದೀಪ್‌ ಸಿಂಗ್‌ ಮತ್ತು ಮುಕೇಶ್‌ ಕುಮಾರ್‌ ಸೇರಿ ಕೊಂಡು ಹರಿಣಗಳ ಮೇಲೆ ಮುಗಿಬಿದ್ದ ರೀತಿಗೆ ಎಲ್ಲರೂ ದಂಗಾಗಿದ್ದರು.

ಅರ್ಷದೀಪ್‌ 5 ವಿಕೆಟ್‌, ಆವೇಶ್‌ ಖಾನ್‌ 4 ವಿಕೆಟ್‌ ಉಡಾ ಯಿಸಿ ದಕ್ಷಿಣ ಆಫ್ರಿಕಾವನ್ನು 27 ಚಿಲ್ಲರೆ ಓವರ್‌ಗಳಲ್ಲಿ 116ಕ್ಕೆ ನಿಯಂತ್ರಿಸಿ ದ್ದರು. “ಈ ದಕ್ಷಿಣ ಆಫ್ರಿಕಾ 400 ರನ್‌ ಬಾರಿಸುವ ಸಾಮರ್ಥ್ಯ ಹೊಂದಿ ರುವ ತಂಡವಾಗಿತ್ತು, ಇವರನ್ನು ತಡೆಯುವುದು ಹೇಗೆಂದು ಯೋಚಿಸು ತ್ತಿದ್ದೆವು’ ಎಂಬುದಾಗಿ ಪಂದ್ಯದ ಬಳಿಕ ಅರ್ಷದೀಪ್‌ ಹೇಳಿದ್ದನ್ನು ಉಲ್ಲೇಖೀಸದೆ ಇರುವಂತಿಲ್ಲ. ಅಷ್ಟೊಂದು ಬಲಾಡ್ಯ ವಾಗಿತ್ತು ಸೌತ್‌ ಆಫ್ರಿಕಾ ಬ್ಯಾಟಿಂಗ್‌ ಲೈನ್‌ಆಪ್‌.

ಇದು ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ ಅನುಭವಿಸಿದ ಸತತ 2ನೇ ಬ್ಯಾಟಿಂಗ್‌ ವೈಫ‌ಲ್ಯ. ಕೋಲ್ಕತಾದ ವಿಶ್ವಕಪ್‌ ಲೀಗ್‌ ಮುಖಾಮುಖೀಯಲ್ಲಿ ಅದು 83 ರನ್ನಿಗೆ ಸರ್ವಪತನ ಕಂಡಿತ್ತು. ಇದನ್ನು ಸತತ 3ನೇ ಪಂದ್ಯಕ್ಕೆ ವಿಸ್ತರಿಸದಂತೆ ನೋಡಿಕೊಂಡು, ತವರಲ್ಲೇ ಮುಖಭಂಗ ತಪ್ಪಿಸಬೇಕಾದ ಭಾರೀ ಒತ್ತಡ ಮಾರ್ಕ್‌ರಮ್‌ ಪಡೆಯ ಮೇಲಿದೆ.

ಅಯ್ಯರ್‌ ಸ್ಥಾನ ಯಾರಿಗೆ?
ಮೊದಲ ಪಂದ್ಯದಲ್ಲಿ ಅರ್ಧ ಶತಕ ಬಾರಿಸಿ ಮಿಂಚಿದ ಶ್ರೇಯಸ್‌ ಅಯ್ಯರ್‌ ಏಕದಿನ ಸರಣಿಯಿಂದ ಬೇರ್ಪಟ್ಟು ಟೆಸ್ಟ್‌ ತಂಡವನ್ನು ಕೂಡಿಕೊಂಡಿದ್ದಾರೆ. ಇವರ ಸ್ಥಾನಕ್ಕೆ ಮೂವರ ಪೈಪೋಟಿ ಇದೆ-ರಜತ್‌ ಪಾಟಿದಾರ್‌, ರಿಂಕು ಸಿಂಗ್‌ ಮತ್ತ ಸಂಜು ಸ್ಯಾಮ್ಸನ್‌. ಟಿ20 ಯಶಸ್ಸನ್ನು ಮಾನದಂಡ ವಾಗಿ ಇರಿಸಿಕೊಂಡರೆ ಎಡಗೈ ಬ್ಯಾಟರ್‌ ರಿಂಕು ಸಿಂಗ್‌ ಅವಕಾಶ ಪಡೆಯ ಬಹುದು. ಆಗ, ತಾನು ಕೇವಲ ಟಿ20ಗೆ ಸೀಮಿತವಲ್ಲ ಎಂಬುದನ್ನು ರಿಂಕು ರೂಪಿಸಬೇಕಾಗುತ್ತದೆ. ಆದರೆ ರಿಂಕು ಈಗಾಗಲೇ 5ನೇ ಕ್ರಮಾಂಕಕ್ಕೆ ಫಿಟ್‌ ಎಂಬುದು ಸಾಬೀತಾಗಿದೆ. ಜತೆಗೆ ಮ್ಯಾಚ್‌ ಫಿನಿಶರ್‌ ಕೂಡ ಆಗಿದ್ದಾರೆ. ಬಲಗೈ ಬ್ಯಾಟರ್‌ ಪಾಟಿದಾರ್‌ ಅಗ್ರ ಕ್ರಮಾಂಕದಲ್ಲಿ ಯಶಸ್ಸು ಕಂಡ ಆಟಗಾರ. ಆರ್‌ಸಿಬಿ ಪರ ಶತಕವನ್ನೂ ಬಾರಿಸಿದ್ದಾರೆ. ಸ್ಯಾಮ್ಸನ್‌ ಎಲ್ಲ ಕ್ರಮಾಂಕಕ್ಕೂ ಸಲ್ಲುವ ಬ್ಯಾಟರ್‌.

Advertisement

ಆರಂಭ: ಸಂಜೆ 4.30
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

Advertisement

Udayavani is now on Telegram. Click here to join our channel and stay updated with the latest news.

Next