ಲಾಹೋರ್: ಪಾಕಿಸ್ಥಾನ ತನ್ನ ಏಕದಿನ ಇತಿಹಾಸದಲ್ಲೇ ಸರ್ವಾಧಿಕ ಮೊತ್ತವನ್ನು ಯಶಸ್ವಿಯಾಗಿ ಚೇಸ್ ಮಾಡಿ ಆಸ್ಟ್ರೇಲಿಯ ಎದುರಿನ ಸರಣಿಯನ್ನು ಸಮಬಲಗೊಳಿಸುವಲ್ಲಿ ಯಶಸ್ವಿಯಾಗಿದೆ.
ಲಾಹೋರ್‌ನಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯ 8 ವಿಕೆಟಿಗೆ 348 ರನ್ ಪೇರಿಸಿ ಸವಾ ಲೊಡ್ಡಿತು. ಆದರೆ ಪಾಕಿಸ್ಥಾನ 49 ಓವರ್‌ಗಳಲ್ಲಿ ನಾಲ್ಕೇ ವಿಕೆಟಿಗೆ 349 ರನ್ ಬಾರಿಸಿ ಜಯಭೇರಿ ಮೊಳಗಿಸಿತು.
ಈ ಪಂದ್ಯ 3 ಶತಕಗಳಿಗೆ ಸಾಕ್ಷಿ ಯಾಯಾಯಿತು. ಆಸ್ಟ್ರೇಲಿಯ ಪರ ಬೆನ್ ಮೆಕ್‌ಡರ್ಮಟ್ 104 ರನ್ ಬಾರಿಸಿದರು. ಇದು ಅವರ ಮೊದಲ ಏಕದಿನ ಶತಕವಾಗಿತ್ತು. ಆರಂಭ ಕಾರ ಟ್ರ್ಯಾವಿಸ್ ಹೆಡ್ 89 ರನ್ ಮಾಡಿದರು. ನಾಯಕ ಆರನ್ ಫಿಂಚ್ ಖಾತೆ ತೆರೆಯದೆ ವಾಪಸಾದ ಬಳಿಕ ಹೆಡ್- ಮೆಕ್‌ಡರ್ಮಟ್ 162 ರನ್ ಜತೆಯಾಟ ನಿಭಾಯಿಸಿದರು.
ಪಾಕಿಸ್ಥಾನ ಸರದಿಯಲ್ಲಿ ಇಮಾಮ್ ಉಲ್ ಹಕ್ 106, ನಾಯಕ ಬಾಬರ್ ಆಜಂ 114 ರನ್ ಬಾರಿಸಿ ಕಾಂಗರೂ ದಾಳಿಯನ್ನು ಧ್ವಂಸಗೈದರು. ಫಕಾರ್ ಜಮಾನ್ ಕೊಡುಗೆ 67 ರನ್. ಇಮಾಮ್ ಬಾರಿಸಿದ ಸತತ 2ನೇ ಶತಕ ಇದಾಗಿದೆ. ಮೊದಲ ಪಂದ್ಯದಲ್ಲಿ ಅವರು 103 ರನ್ ಬಾರಿಸಿದ್ದರು. ಆದರೆ ಪಾಕ್ 88 ರನ್ನುಗಳ ಸೋಲನುಭವಿಸಿತ್ತು. ಸರಣಿಯ ಅಂತಿಮ ಪಂದ್ಯ ಶನಿವಾರ ಇದೇ ಅಂಗಳದಲ್ಲಿ ನಡೆಯಲಿದೆ.
ಇದನ್ನೂ ಓದಿ:ಐಪಿಎಲ್: ಉಮೇಶ್, ರಸೆಲ್ ಹೊಡತಕ್ಕೆ ತತ್ತರಿಸಿದ ಪಂಜಾಬ್ ಕಿಂಗ್ಸ್
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯ-8 ವಿಕೆಟಿಗೆ 348 (ಮೆಕ್‌ಡರ್ಮಟ್ 104, ಹೆಡ್ 89, ಲಬುಶೇನ್ 59, ಅಫ್ರಿದಿ 63ಕ್ಕೆ 4, ಮೊಹಮ್ಮದ್ ವಾಸಿಮ್ ಜೂ. 56ಕ್ಕೆ 2). ಪಾಕಿಸ್ಥಾನ-49 ಓವರ್‌ಗಳಲ್ಲಿ 4 ವಿಕೆಟಿಗೆ 349 (ಬಾಬರ್ 114, ಇಮಾಮ್ 106, ಫಕಾರ್ 67, ಝಂಪ 71ಕ್ಕೆ 2).
ಪಂದ್ಯಶ್ರೇಷ್ಠ: ಬಾಬರ್ ಆಜಂ.