Advertisement

ODI;ಮೊದಲ ಬಾರಿಗೆ ದಕ್ಷಿಣ ಆಫ್ರಿಕಾವನ್ನು ಸೋಲಿಸಿದ ಅಫ್ಘಾನಿಸ್ಥಾನ

11:44 PM Sep 19, 2024 | Team Udayavani |

ಶಾರ್ಜಾ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ಥಾನ ತಂಡವು ಆರು ವಿಕೆಟ್‌ಗಳ ಗೆಲುವು ಸಾಧಿಸಿ ಸಂಭ್ರಮಿಸಿದೆ. ಈ ಗೆಲುವಿನಿಂದ ಅಫ್ಘಾನಿಸ್ಥಾನ ತಂಡವು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಸರಣಿಯ ದ್ವಿತೀಯ ಪಂದ್ಯ ಶಾರ್ಜಾದಲ್ಲಿಯೇ ಸೆ. 20ರಂದು ನಡೆಯಲಿದೆ.

Advertisement

ಫ‌ಝಲ್ಲಾಕ್‌ ಫಾರೂಖಿ ಅವರ ಮಾರಕ ದಾಳಿಗೆ ಕುಸಿದ ದಕ್ಷಿಣ ಆಫ್ರಿಕಾವು 33.3 ಓವರ್‌ಗಳಲ್ಲಿ 106 ರನ್ನಿಗೆ ಆಲೌಟಾಯಿತು. ಇದಕ್ಕುತ್ತರವಾಗಿ ಅಘಾ^ನಿಸ್ಥಾನ ತಂಡವು 26 ಓವರ್‌ಗಳಲ್ಲಿ ನಾಲ್ಕು ವಿಕೆಟಿಗೆ 107 ರನ್‌ ಗಳಿಸಿ ಜಯಭೇರಿ ಬಾರಿಸಿತು. ಗುಲ್ಬಾದಿನ್‌ ನೈಬ್‌ 34 ರನ್‌ ಗಳಿಸಿ ಅಜೇಯರಾಗಿ ಉಳಿದರು. ಫಾರೂಖೀ 35 ರನ್ನಿಗೆ ನಾಲ್ಕು ವಿಕೆಟ್‌ ಕಿತ್ತರು.

ಅಫ್ಘಾನಿಸ್ಥಾನದ ಆರಂಭಿಕ ಬೌಲರ್‌ಗಳಾದ ಫ‌ಝಲ್ಲಾಕ್‌ ಫಾರೂಖೀ ಮತ್ತು ಘಾಜನ್‌ಫ‌ರ್‌ ಅವರ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾವು ಪವರ್‌ಪ್ಲೇ ವೇಳೆ 36 ರನ್ನಿಗೆ 7 ವಿಕೆಟ್‌ ಕಳೆದುಕೊಂಡು ಶೋಚನೀಯ ಸ್ಥಿತಿಗೆ ತಲುಪಿತ್ತು. ಇದು ಏಕದಿನ ಪಂದ್ಯದಲ್ಲಿ ತಂಡದ ಅತ್ಯಂತ ಕಳಪೆ ಆರಂಭವಾಗಿತ್ತು. ವಿಯಾನ್‌ ಮುಲ್ಡರ್‌ ಮತ್ತು ಬಿಜಾರ್ನ್ ಫೋರ್ತುನ್‌ ಅವರು 8ನೇ ವಿಕೆಟಿಗೆ 39 ರನ್ನುಗಳ ಜತೆಯಾಟ ನಡೆಸಿದ್ದರಿಂದ ತಂಡ ನಿಕೃಷ್ಟ ಮೊತ್ತಕ್ಕೆ ಆಲೌಟ್‌ ಆಗುವುದರಿಂದ ಪಾರಾಯಿತು. 69 ರನ್ನಿಗೆ ಆಲೌಟ್‌ ಆಗಿರುವುದು ತಂಡದ ನಿಕೃಷ್ಟ ಮೊತ್ತವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next