Advertisement

ಒಡ್ಡೋಲಗ, ಪೂರ್ವರಂಗಗಳ ರಸರಂಗ ಪರ್ವ 

06:00 AM Jul 27, 2018 | Team Udayavani |

ಯಕ್ಷಗಾನದ ಪ್ರಸಂಗ ಪ್ರಾರಂಭವಾಗುವ ಪೂರ್ವಭಾಗದ ರಂಗ ವಿಧಿಗಳ ಸಾಂಪ್ರದಾಯಿಕ ವಿಭಾಗವೇ ರಂಸರಂಗ ಪರ್ವ ಅಥವಾ ಪೂರ್ವರಂಗ. ಯಕ್ಷದೇಗುಲದ ಪುಟ್ಟ, ಪುಟ್ಟ ಮಕ್ಕಳು ಬನಶಂಕರಿ 2ನೇ ಹಂತದಲ್ಲಿರುವ ಅವರ್‌ ಸ್ಕೂಲ್‌ ಸಭಾಂಗಣದಲ್ಲಿ ಧೀರ ವಯ್ನಾರೋ…ಬಹುಪರಾಕ್‌, ಕಸ್ತೂರಿ ಕೋಲಾಹಲೋ ….ಬಹುಪರಾಕ್‌, ಸ್ವಾಮಿಪರಾಕ್‌…. ದೇವ ಪರಾಕ್‌…ಹೀಗೆ ದೀವಟಿಗೆಯೊಂದಿಗೆ ಚೌಕಿಯಲ್ಲಿ ಗಣಪತಿ ಪೂಜೆ ಮುಗಿಸಿ, ಬಹು ಪರಾಕ್‌ ಹೇಳುತ್ತಾ ರಂಗದಲ್ಲಿ ದೀವಟಿಗೆ ಬೆಳಗಿಸುವುದರೊಂದಿಗೆ ಮಕ್ಕಳೇ ರಸರಂಗಪರ್ವದ ಉದ್ಘಾಟನೆಯನ್ನು ನೆರವೇರಿಸಿದರು. 

Advertisement

ಕೆ. ಮೋಹನ್‌, ಬಾಲಕೃಷ್ಣ ಭಟ್ಟರ ಸಾರಥ್ಯದಲ್ಲಿ ಪ್ರಿಯಾಂಕ ಕೆ. ಮೋಹನ್‌ ನಿರ್ದೇಶನದಲ್ಲಿ ಕೋಟ ಸುದರ್ಶನ ಉರಾಳ ಸಂಯೋಜನೆಯಲ್ಲಿ, ಡಾ| ಪ್ರೀತಿ ಕೆ.ಮೋಹನ್‌, ನವೀನ್‌ ಕೋಟ ಇವರ ನಿರೂಪಣೆಯೊಂದಿಗೆ, ಕೋಡಂಗಿ, ಬಾಲಗೋಪಾಲ, ಪೀಠಿಕಾ ಸ್ತ್ರೀವೇಷ, ರಾಜವೇಷದ ಒಡ್ಡೋಲಗ, ಪಾಂಡವರ ಒಡ್ಡೋಲಗ, ಶ್ರೀಕೃಷ್ಣನ ಒಡ್ಡೋಲಗ, ಬಣ್ಣದ ವೇಷದ ಒಡ್ಡೋಲಗ, ಯುದ್ಧಕುಣಿತ, ಪ್ರಯಾಣ ಕುಣಿತವನ್ನು ಲಂಬೋದರ ಹೆಗಡೆ, ಪ್ರಿಯಾಂಕ ಕೆ. ಮೋಹನ್‌, ಭಾಸ್ಕರ ಭಂಡಾರಿ, ಮಂಜುನಾಥ ನಾವಡರ ಹಿಮ್ಮೇಳದೊಂದಿಗೆ 30 ವಿದ್ಯಾರ್ಥಿಗಳು ಪ್ರದರ್ಶನ ನೀಡಿದರು. 

ಯಾವುದೇ ಪ್ರಸಂಗವಿಲ್ಲದ ಬರೇ ಯಕ್ಷಗಾನದ ಪೂರ್ವರಂಗ, ವಿವಿಧ ಒಡ್ಡೋಲಗಗಳ ಅಪರೂಪದ ಯಕ್ಷದೇಗುಲದ ಈ ಪ್ರದರ್ಶನವು ಪ್ರಥಮ ಬಾರಿಗೆ ಪ್ರದರ್ಶನವಾಗಿ ಯಶಸ್ವಿಯಾಯಿತು.

 ಕೋಟ ಸುದರ್ಶನ ಉರಾಳ 

Advertisement

Udayavani is now on Telegram. Click here to join our channel and stay updated with the latest news.

Next