Advertisement

ಐಪಿಎಲ್‌ ಪಂದ್ಯಾವಳಿಯನ್ನು ಅಕ್ಟೋಬರ್ 15ರ ವರೆಗೆ ವಿಸ್ತರಿಸಲು ಬಿಸಿಸಿಐ ಯೋಜನೆ

08:59 PM Jun 07, 2021 | Team Udayavani |

ನವದೆಹಲಿ: ಯುಎಇಯಲ್ಲಿ ಮುಂದುವರಿಯಲಿರುವ ಐಪಿಎಲ್‌ ಪಂದ್ಯಾವಳಿಯನ್ನು ಅ.15ರ ತನಕ ವಿಸ್ತರಿಸುವ ಯೋಜನೆಯೊಂದನ್ನು ಬಿಸಿಸಿಐ ಹಾಕಿಕೊಂಡಿದೆ. ಅರಬ್‌ ರಾಷ್ಟ್ರದಲ್ಲಿ ಸೆಪ್ಟಂಬರ್‌ ತಿಂಗಳ ವಿಪರೀತ ಬಿಸಿಲಿನ ವಾತಾವರಣದಲ್ಲಿ ಮಧ್ಯಾಹ್ನದ ಪಂದ್ಯಗಳನ್ನು ಆಡುವುದು ಕಷ್ಟವಾದ್ದರಿಂದ ಇಂಥದೊಂದು ಪರಿವರ್ತನೆಯಾಗಲಿದೆ ಎಂದು ಮಂಡಳಿಯ ಉನ್ನತ ಮೂಲವೊಂದು ಪಿಟಿಐಗೆ ತಿಳಿಸಿದೆ.

Advertisement

ಇದರಂತೆ ಪ್ರಕಾರ 5 ದಿನಗಳ ಕಾಲ ಐಪಿಎಲ್‌ ಪಂದ್ಯಗಳನ್ನು ವಿಸ್ತರಿಸುವ ಸಾಧ್ಯತೆ ಇದೆ. ಇದರಿಂದ ಅಕ್ಟೋಬರ್‌ 10ರ ಬದಲು 15ರ ತನಕ ಪಂದ್ಯಾವಳಿ ನಡೆಯಲಿದೆ.

ಇದನ್ನೂ ಓದಿ :2020ರ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ತಂಡಕ್ಕೆ ಹಣ ಬಿಡುಗಡೆ ಮಾಡಿದ ಬಿಸಿಸಿಐ

ಡಬಲ್‌ ಹೆಡರ್ ಸಂಖ್ಯೆ ಕಡಿಮೆ
ಬಿಸಿಸಿಐ 10 ಡಬಲ್‌ ಹೆಡರ್’ (ಒಂದೇ ದಿನ ಎರಡು ಪಂದ್ಯ) ಯೋಜನೆಯಲ್ಲಿತ್ತು. ಆದರೆ ಸೆಪ್ಟಂಬರ್‌ 3, 4ನೇ ವಾರದಲ್ಲಿ 10 ಡಬಲ್‌ ಹೆಡರ್ ಆಯೋಜಿಸುವುದು ಕಷ್ಟ. ಸುಡು ಬಿಸಿಲು ಆಟಗಾರರಿಗೆ ಸಮಸ್ಯೆ ತಂದೊಡ್ಡಬಹುದು. ಹೀಗಾಗಿ ಕೂಟವನ್ನು ಅ. 15ರ ತನಕ ವಿಸ್ತರಿಸಿ, ಡಬಲ್‌ ಹೆಡರ್ ಸಂಖ್ಯೆಯನ್ನು 10ರಿಂದ 5 ಅಥವಾ 6ಕ್ಕೆ ಇಳಿಸುವಂತೆ ಎಮಿರೇಟ್ಸ್‌ ಕ್ರಿಕೆಟ್‌ ಬೋರ್ಡ್‌ ಸಲಹೆ ನೀಡಿದೆ.

ಶುಕ್ರವಾರ ಫೈನಲ್‌:
ಅ.15 ಶುಕ್ರವಾರ ಬರಲಿದೆ. ಅಂದು ಯುಎಇಯಲ್ಲಿ ವಾರದ ರಜಾ ದಿನ. ಹೆಚ್ಚಿನ ಸಂಖ್ಯೆಯ ಕ್ರೀಡಾಭಿಮಾನಿಗಳು ಆಗಮಿಸಲು ಅನುಕೂಲ ವಾಗಲಿದೆ. ಭಾರತದಲ್ಲೂ ಅಂದು ವಿಜಯದಶಮಿ ರಜೆ ಇರುತ್ತದೆ. ಫೈನಲ್‌ ಪಂದ್ಯವನ್ನು ಎಲ್ಲರೂ ಖುಷಿಯಿಂದ ಆಸ್ವಾದಿಸಬಹುದು ಎಂಬ ಲೆಕ್ಕಾಚಾರವೂ ಇಲ್ಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next