Advertisement
ಪ್ರತೀ ವರ್ಷ ಅಕ್ಟೋಬರ್ 29ರಂದು ವಿಶ್ವ ಪಾರ್ಶ್ವವಾಯು (ಸ್ಟ್ರೋಕ್) ದಿನಾಚರಣೆ ಎಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ದಿನವನ್ನು ಆಚರಿಸುವ ಮೂಲ ಉದ್ದೇಶ ಜನರಲ್ಲಿ ಜಾಗೃತಿ, ಅರಿವು ಮೂಡಿಸುವುದು. ನಮ್ಮ ಪ್ರಪಂಚದಾದ್ಯಂತ, ನಾವು ಗಮನಿಸಿದ ಹಾಗೆ ಪ್ರತೀ ನಾಲ್ವರಲ್ಲಿ ಒಬ್ಬರಿಗೆ ಈ ಸಮಸ್ಯೆ ಅವರ ಜೀವಮಾನದಲ್ಲಿ ಎದುರಾಗುತ್ತಿರುವ ಬಹು ದೊಡ್ಡ ಸಮಸ್ಯೆ. ಸರಿಸುಮಾರು 15 ದಶಲಕ್ಷಕ್ಕೂ ಹೆಚ್ಚು ಜನರು ಪ್ರತೀ ವರ್ಷ ಈ ಸಮಸ್ಯೆಗೆ ಗುರಿಯಾಗುತ್ತಿದ್ದಾರೆ. ಇದರಲ್ಲಿ ಅಂದಾಜು 6 ದಶಲಕ್ಷಕ್ಕೂ ಹೆಚ್ಚು ಜನರು ಈ ಪಾರ್ಶ್ವವಾಯು ಅಥವಾ ಸ್ಟ್ರೋಕ್‌ನಿಂದಾಗಿ ಸಾವಿಗೀಡಾಗುತ್ತಿದ್ದಾರೆ. ಹೀಗಾಗಿ ವಿಶ್ವದಾದ್ಯಂತ ಜನರ ಮೃತ್ಯುವಿಗೆ ಕಾರಣವಾಗುವ ಅನಾರೋಗ್ಯಗಳಲ್ಲಿ ಇದು ಎರಡನೇ ಸ್ಥಾನದಲ್ಲಿದೆ.
Related Articles
ಅವುಗಳೆಂದರೆ:
1. ದೇಹದ ಯಾವುದಾದರೂ ಒಂದು ಭಾಗದಲ್ಲಿ ಮರುಗಟ್ಟುವಿಕೆ ಇಲ್ಲವೇ ದುರ್ಬಲತೆ ಕಾಣಿಸಿಕೊಳ್ಳುವುದು.
2. ನಡೆದಾಡುವಾಗ ಗೊಂದಲವಾಗುವುದು ಅಥವಾ ತೊಂದರೆಯಾಗುವುದು.
3. ನೋಡುವುದರಲ್ಲಿ ಸಮಸ್ಯೆ.
4. ತಲೆ ಸುತ್ತುವುದು ಅಥವಾ ನಡೆಯುವಾಗ ಸಮಸ್ಯೆ.
5. ಅತಿಯಾದ ತಲೆನೋವು.
ಈ ರೀತಿಯಾದ ಸಮಸ್ಯೆ ನಿಮ್ಮ ಪ್ರೀತಿಪಾತ್ರ ರಲ್ಲಿ ಕಂಡು ಬಂದಲ್ಲಿ ನೀವು FAST ಆಗಿ ಪ್ರತಿಕ್ರಿಯಿಸಬೇಕು. ಅಂದರೆ;
F – Facial Weakness (ಮುಖದಲ್ಲಿ ದುರ್ಬಲತೆ)
A Arm Weakness (ಭುಜಗಳಲ್ಲಿ ದುರ್ಬಲತೆ)
S Speech Difficulty (ಮಾತನಾಡುವಾಗ ಸಮಸ್ಯೆ)
T - Time loss is brain loss (ಸಮಯ ಮೀರಿದಷ್ಟು ಮಿದುಳಿನ ಕ್ರಿಯೆ ನಿಷ್ಕ್ರಿಯವಾಗುವುದು.)
Advertisement
ಸ್ಟ್ರೋಕ್‌ಗೆ ಒಳಗಾದಾಗ ಭಾವನೆಗಳಿಗೆ ಸಂಬಂಧಪಟ್ಟ ಬದಲಾವಣೆಗಳನ್ನು ವ್ಯಕ್ತಿಯಲ್ಲಿ ಗಮನಿಸಬಹುದು. ಅವುಗಳೇನೆಂದರೆ:1. ಕೆಲಸ ಮಾಡಲು ಆಸಕ್ತಿ ಇಲ್ಲದೇ ಇರುವುದು.
2. ಖಿನ್ನತೆ
3. ಸಿಟ್ಟು , ದುಃಖ, ಸಿಡುಕುವುದು.
4. ಬದಲಾದ ಊಟ, ನಿದ್ದೆ, ಯೋಚನೆ
5. ಅಸಹಾಯಕತೆ ಹಾಗೂ ಹತಾಶರಾಗುವುದು. ಈ ರೀತಿಯ ಸಮಸ್ಯೆಗಳಿಗೆ ಒಳಗಾದಾಗ ಮುಖ್ಯವಾಗಿ ಬೇಕಾಗುವುದು rehabilitation,, ಅಂದರೆ ಪುನರ್ವಸತಿ ಅಭಿಯಾನ. ಇದರಲ್ಲಿ ಹಲವರು ಪಾತ್ರ ವಹಿಸುತ್ತಾರೆ.
1. Physcio Therapist -ವ್ಯಾಯಾಮ ಹಾಗೂ ದೈಹಿಕ ಚಿಕಿತ್ಸೆ ನೀಡುವವರು.
2. Occupational Therapist -ಉದ್ಯೋಗಕ್ಕೆ ಸಂಬಂಧಪಟ್ಟ ಚಲನವಲನ ಚಿಕಿತ್ಸೆ ನೀಡುವವರು.
3. Rehabicitation Nurse -ದಾದಿ.
4. Speech Therapist -ಮಾತಿಗೆ ಸಂಬಂಧಿಸಿದ ಚಿಕಿತ್ಸೆ ನೀಡುವವರು.
5. Recreational Therapist -ಮನೋರಂಜನಾ ವಿಚಾರವಾಗಿ ಚಿಕಿತ್ಸೆ ನೀಡುವವರು.
6. Psychiatrist (ಮನೋವೈದ್ಯರು)
7. Psychiatrist(ಮಾನಸಿಕ ತಜ್ಞರು)
8. Neurologist (ನರಶಾಸ್ತ್ರಜ್ಞರು)
ಈ ಎಲ್ಲ ಮಾಹಿತಿಗಳನ್ನು ತಿಳಿಸುವುದರೊಂದಿಗೆ ಪ್ರತಿಯೊಬ್ಬ ಓದುಗನಲ್ಲಿ ಕೇಳುವುದೇನೆಂದರೆ Stroke Rehabilitation Clinicನ ಪ್ರಯೋಜನ ಪಡೆಯಿರಿ. -ಡಾ| ಶ್ವೇತಾ ಟಿ.ಎಸ್.
ಸಹಾಯಕ ಪ್ರಾಧ್ಯಾಪಕರು, ಕ್ಲಿನಿಕಲ್ ಸೈಕಾಲಜಿ ವಿಭಾಗ, ಕೆಎಂಸಿ, ಮಣಿಪಾಲ