Advertisement
ಶಾ ಅವರು ಕೇರಳದಲ್ಲಿ ಬಿಜೆಪಿ ಹಮ್ಮಿಕೊಂಡಿರುವ 1 ವಾರ ಅವಧಿಯ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಸಂದರ್ಭ ಜಿಲ್ಲೆಗೆ ಭೇಟಿ ನೀಡಲಿದ್ದಾರೆ ಎಂದು ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಅ. 2ರಂದು ಸಂಜೆ 6 ಗಂಟೆಗೆ ಶಾ ಮಂಗಳೂರಿಗೆ ಆಗಮಿಸಲಿದ್ದಾರೆ ವಿಮಾನ ನಿಲ್ದಾಣದಿಂದ ಸುಮಾರು 250-300ರಷ್ಟು
ವಾಹನಗಳ ಮೆರವಣಿಗೆಯಲ್ಲಿ ಅವರನ್ನು ತಲಪಾಡಿ ತನಕ ಕರೆದೊಯ್ದು ಅಲ್ಲಿ ಕೇರಳದ ಬಿಜೆಪಿ ನಾಯಕರು ಸ್ವಾಗತಿಸುವ ಸ್ಥಳದಲ್ಲಿ ಬೀಳ್ಕೊಡುವರು. ಅ. 3ರಂದು ಸಂಜೆ ಮಂಗಳೂರಿಗೆ ವಾಪಸಾಗಿ ವಾಸ್ತವ್ಯ ಮಾಡುವರು.
ಅ. 4ರಂದು ಬೆಳಗ್ಗೆ 10 ಗಂಟೆಗೆ ಕೊಡಿಯಾಲ್‌ಬೈಲ್‌ನ ಓಶಿಯನ್ ಪರ್ಲ್ ಹೊಟೇಲ್‌ನಲ್ಲಿ ರಾಜ್ಯ ಬಿಜೆಪಿ ನಾಯಕರು ಮತ್ತು ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸುವರು. ಸಂಜೆ 5 ಗಂಟೆಗೆ ಎಂ.ಜಿ. ರಸ್ತೆಯ ಡಾ| ಟಿ.ಎಂ.ಎ. ಪೈ ಕನ್ವೆನ್ಶನ್ ಸೆಂಟರ್‌ನಲ್ಲಿ ಜಿಲ್ಲಾ ಬಿಜೆಪಿ ಪ್ರಬುದ್ಧರ ಸಭೆಯಲ್ಲಿ ಪಾಲ್ಗೊಳ್ಳುವರು. ಕಾರ್ಯಕರ್ತರಿಗೆ ಪ್ರೇರಣೆ
ಮಂಗಳೂರು ಭೇಟಿಯ ಸಂದರ್ಭದಲ್ಲಿ ಶಾ ಅವರು ದ.ಕ. ಜಿಲ್ಲೆಯಲ್ಲಿ ಕಳೆದ 2- 3 ತಿಂಗಳಲ್ಲಿ ನಡೆದ ಘಟನೆಗಳ ಬಗ್ಗೆ ಚರ್ಚೆ ನಡೆಸುವರು ಹಾಗೂ ಕಾರ್ಯಕರ್ತರಿಗೆ ಪ್ರೇರಣೆ ನೀಡಲಿದ್ದಾರೆ. ಅ. 5 ರಂದು ಬೆಳಗ್ಗೆ ದಿಲ್ಲಿಗೆ ನಿರ್ಗಮಿಸುವರು.
Related Articles
ಪುತ್ತೂರಿನ ಪಡುಮಲೆಯಲ್ಲಿ ದೇಯಿ ಬೈದ್ಯೆತಿ ಮೂರ್ತಿ ಅವಮಾನ ಪ್ರಕರಣ ಖಂಡಿಸಿ ಬಿಜೆಪಿ ವತಿಯಿಂದ ಅ. 2ರಂದು ಪುತ್ತೂರಿನಲ್ಲಿ ನಡೆಸಲು ಉದ್ದೇಶಿಸಿದ್ದ ಪಾದಯಾತ್ರೆಯನ್ನು ಅ. 10ಕ್ಕೆ ಮುಂದೂಡಲಾಗಿದೆ. ಪಕ್ಷಾಧ್ಯಕ್ಷ ಶಾ ಅವರ ಜಿಲ್ಲಾ ಭೇಟಿ ಪ್ರಯುಕ್ತ ಈ ಕ್ರಮ ಕೈಗೊಳ್ಳಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಾಯಕರಾದ ಕೆ. ಮೋನಪ್ಪ ಭಂಡಾರಿ, ಜಿತೇಂದ್ರ ಕೊಟ್ಟಾರಿ, ಪ್ರಭಾ ಮಾಲಿನಿ, ಪೂಜಾ ಪೈ, ಸಂಜಯ ಪ್ರಭು, ಕಿಶೋರ್ ರೈ, ಬೃಜೇಶ್ ಚೌಟ, ವೇದವ್ಯಾಸ ಕಾಮತ್, ಸುದರ್ಶನ್ ಉಪಸ್ಥಿತರಿದ್ದರು.
Advertisement