Advertisement

DC Order; ಅ.15ರಿಂದ ಶಿರಸಿ-ಕುಮಟಾ ರಸ್ತೆಯಲ್ಲಿ ಘನ ವಾಹನಗಳಿಗೆ ನಿಷೇಧ

08:19 PM Jun 25, 2024 | Team Udayavani |

ಶಿರಸಿ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದಿಂದ ಭಾರತ್ ಮಾಲಾ ಯೋಜನೆ ಅಡಿಯಲ್ಲಿ ಹೆದ್ದಾರಿ ಅಭಿವೃದ್ಧಿ ಕಾಮಾಗಾರಿ ನಡೆಯುತ್ತಿದ್ದು, ಬಾಕಿ ಉಳಿದ ರಸ್ತೆ ಅಭಿವೃದ್ಧಿ, ಸೇತುವೆಗಳ ಪುನರ್ ನಿರ್ಮಾಣ ಕಾಮಗಾರಿ ನಡೆಸಲು ಜಿಲ್ಲಾಡಳಿತವು ಅ. 15ರಿಂದ ಭಾರೀ ಗಾತ್ರದ ವಾಹನಗಳಿಗೆ ಸಂಚಾರ ನಿರ್ಬಂಧಿಸಲು ಆದೇಶ ಹೊರಡಿಸಿದ್ದಾರೆ.

Advertisement

ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಈ ಆದೇಶವನ್ನು ಮಾಡಿದ್ದು, 27.15 ಕಿಲೋ ಮೀಟರ್‌ ದಿಂದ 60ರ ವರೆಗಿನ ದೂರದಲ್ಲಿ ಅಭಿವೃದ್ಧಿ ಕಾಮಗಾರಿ ಆಗಬೇಕಿದೆ. ಈ ಹಿನ್ನಲೆಯಲ್ಲಿ ಭಾರೀ ಗಾತ್ರದ ವಾಹನಗಳಿಗೆ ಬದಲಿ ಮಾರ್ಗವನ್ನು ಬಳಸಿ ಕರಾವಳಿಯಿಂದ ಶಿರಸಿಗೆ ಪ್ರಯಾಣಿಸಲು ಸೂಚಿಸಿ ಆದೇಶ ಮಾಡಲಾಗಿದೆ.

ಪರ್ಯಾಯ ಮಾರ್ಗ
ಕುಮಟಾದಿಂದ ಶಿರಸಿಗೆ ತೆರಳುವ ಲಘು ವಾಹನಗಳು ರಾಷ್ಟ್ರೀಯ ಹೆದ್ದಾರಿ- 766E ಬಳಸಿ ತೆರಳಬಹುದು. ಭಾರೀ ಗಾತ್ರದ ವಾಹನಗಳು ಸಿದ್ದಾಪುರದ ರಾಜ್ಯ ಹೆದ್ದಾರಿ-69 ಮಾರ್ಗವಾಗಿ, ಅಂಕೋಲಾ ಕಡೆಯಿಂದ ಶಿರಸಿಗೆ ತೆರಳುವ ಯಲ್ಲಾಪುರ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ- 63 ಹಾಗೂ ರಾಜ್ಯ ಹೆದ್ದಾರಿ- 93 ಬಳಸಿ ತಲುಪಬಹುದು.

ಮಂಗಳೂರು, ಹೊನ್ನಾವರ ಕಡೆಯ ವಾಹನಗಳು ಮಾವಿನಗುಂಡಿ ಸಿದ್ದಾಪುರ ಮಾರ್ಗವಾಗಿ ಶಿರಸಿಗೆ ತೆರಳಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

2020ರಲ್ಲಿ ವಾಹನ ಸಂಚಾರ ನಿರ್ಬಂಧ ಮನವಿ ಇತ್ತಾದರೂ ಸಾರ್ವಜನಿಕರ ಬೇಡಿಕೆ ಅನ್ವಯ ವಾಹನಗಳ ಓಡಾಟ ಮುಂದುವರಿದಿತ್ತು. ಇದರಿಂದ ನಿಗದಿತ ಸಮಯಕ್ಕೆ ಕಾಮಗಾರಿ ಪೂರ್ಣಗೊಳಿಸಲಾಗಿರಲಿಲ್ಲ ಎಂದು ಹೆದ್ದಾರಿ ನಿಗಮದ ಅಧಿಕಾರಿಗಳು ಅಕ್ಟೋಬರ್ 15ರಿಂದ 2025ರ ಫೆ. 25ರ ತನಕ ಸಂಚಾರ ನಿರ್ಬಂಧಕ್ಕೆ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿದ್ದರು ಎಂಬುದು ಉಲ್ಲೇಖನೀಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next