Advertisement

ಕೇರಳದಲ್ಲಿ ಭೂಮಿ ಕಬಳಿಸಿದ  ಸಾಗರ!

12:30 AM Jan 13, 2019 | Team Udayavani |

ಕೊಲ್ಲಂ: ನಾನಾ ಊರುಗಳಲ್ಲಿ, ಜಮೀನುಗಳಲ್ಲಿ ಪ್ರತಿಷ್ಠಿತ ವ್ಯಕ್ತಿಗಳು, ಸಂಸ್ಥೆಗಳು, ಬಿಲ್ಡರ್‌ಗಳು ಸರಕಾರಿ ಜಾಗವನ್ನು ಒತ್ತುವರಿ ಮಾಡುವ ಆರೋಪಗಳನ್ನು ಕೇಳಿದ್ದೇವೆ. ಈಗ ಕೇರಳದ ಸಮುದ್ರವೂ ಇದೇ ರೀತಿಯ ಭೂ ಕಬಳಿಕೆ ಆರೋಪಕ್ಕೆ ಒಳಗಾಗಿದೆ.
ಅಲ ಪ್ಪಾಡ್‌ ಎಂಬ ಸಾಗರ ತಡಿಯ ಈ ಗ್ರಾಮದ ಭೂಮಿಯನ್ನು ಇಷ್ಟಿಷ್ಟೇ ನುಂಗಿರುವ ಆರೋಪ ಇಲ್ಲಿನ ಅರಬ್ಬಿ ಸಮುದ್ರದ್ದು. ಅಷ್ಟಕ್ಕೂ ಇಲ್ಲಿ ಕಬಳಿಕೆಯಾಗಿರುವ ಭೂಮಿ ಎಷ್ಟು ಗೊತ್ತೇ? ಬರೋಬ್ಬರಿ 81.9 ಚದರ ಕಿ.ಮೀ. ವಿಸ್ತೀರ್ಣದ್ದು! ಆದರೆ, ಇದಾಗಿರುವುದು ತೀರಾ ಇತ್ತೀಚೆಗೇನಲ್ಲ. ಇದಕ್ಕೆ 62 ವರ್ಷಗಳ ಇತಿಹಾಸವಿದೆ. 1955ರ ಲಿಥೋ ಮ್ಯಾಪ್‌ನಲ್ಲಿ ಈ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 89.5 ಚದರ ಕಿ.ಮೀ. ಭೂಮಿಯಿತ್ತು. 2017ರ ಗೂಗಲ್‌ ಮ್ಯಾಪ್‌ ಪ್ರಕಾರ, ಇದು ಈಗ ಕೇವಲ 7.6 ಚದರ ಕಿ.ಮೀ.ಗಳಷ್ಟಿದೆ. 

Advertisement

ಕಾರಣವೇನು?: ಕರಾವಳಿ ನಿಯಂತ್ರಣ ವಲಯದ (ಸಿಆರ್‌ಝಡ್‌) ವ್ಯಾಪ್ತಿಗೆ ಬರುವ ಈ ಹಳ್ಳಿಯ ಸಮುದ್ರದ ದಂಡೆಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಇಲ್ಲಿನ ಗ್ರಾಮ ಪಂಚಾಯತ್‌ಗೆ ಇದನ್ನು ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ಇಲ್ಲಿನ ಜನ ದೂರುತ್ತಿದ್ದು, ಕಳೆದ 70 ದಿನಗಳಿಂದ ಗ್ರಾಮ ಉಳಿಸಲು ಆಗ್ರಹಿಸಿ ಧರಣಿ ಕುಳಿತಿದ್ದಾರೆ. 

ಸಮುದ್ರದಲ್ಲಿ ಮುಳುಗಡೆಯಾಗಿರುವ ಕೇರಳದ ಅಲಪ್ಪಾಡ್‌ ಗ್ರಾಮದ ಭೂಮಿ
ಕಳೆದ 62 ವರ್ಷಗಳಲ್ಲಿ ಮುಳುಗಡೆಯಾಗಿರುವ ಭೂಮಿಯ ಅಳತೆ 81.9 ಚ.ಕಿ.ಮೀ.  
1955ರಲ್ಲಿ 81.9 ಚದರ ಕಿ.ಮೀ.ನಷ್ಟಿದ್ದ ಭೂಮಿ ಈಗ ಕೇವಲ 7.6 ಚದರ ಕಿ.ಮೀ.ನಷ್ಟು ಮಾತ್ರ!

Advertisement

Udayavani is now on Telegram. Click here to join our channel and stay updated with the latest news.

Next