Advertisement
ಪಟ್ಟಣದ 20 ನೇ ವಾರ್ಡ್ ಬೋವಿಕಾಲೋನಿಯಲ್ಲಿ ಪುರಸಭೆಗೆ ಸೇರಿದ ಖಾತಾ ನಂ 105/359 ನ 17 ಅಡಿ ಉದ್ದ 40 ಅಡಿ ಅಗಲದ ಜಾಗದಲ್ಲಿ ಗೋವಿಂದರಾಜು ಅತಿಕ್ರಮ ಪ್ರವೇಶಿಸಿ ಮನೆ ನಿರ್ಮಿಸಿದ್ದು, ಕಟ್ಟಡ ಮೋಲ್ಡ್ ಮಟ್ಟದವರಿಗೆ ಬಂದಿತು, ಈ ಸಂಬಂಧ ಪುರಸಭೆಯಿಂದ ಹಲವು ಭಾರಿ ಕಟ್ಟಡ ನಿರ್ಮಾಣ ಮಾಡಬಾರದೆಂದು ಗೋವಿಂದರಾಜು ಅವರಿಗೆ ತಿಳುವಳಿಕೆ ಹಾಗೂ ಎಚ್ಚರಿಕೆ ನೀಡಿದರು, ಇದ್ಯಾವುದನ್ನು ಲೆಕ್ಕಿಸದೇ ಕಟ್ಟಡ ಕಾಮಗಾರಿಯನ್ನು ಮುಂದುವರೆಸಿದರು, ಜೊತೆಗೆ ಗೃಹೋಪಯೋಗಿ ವಸ್ತುಗಳನ್ನು ಕಟ್ಟಡದಲ್ಲಿ ಇಟ್ಟುಕೊಂಡು ವಾಸ ಮಾಡುತ್ತಿದ್ದರು, ಪುರಸಭಾ ಮುಖ್ಯಾಧಿಕಾರಿ ಕೆ.ಪಿ.ರವಿಕುಮಾರ್, ಪರಿಸರ ಎಂಜಿನಿಯರ್ ಚಂದ್ರಶೇಖರ್ ನೇತೃತ್ವದ ಸಿಬ್ಬಂದಿಗಳು ಕಟ್ಟಡವನ್ನು ತೆರವುಗೊಳಿಸಿದರು.
Related Articles
Advertisement
ಈಗಾಗಲೇ ಸಾಕಷ್ಟು ಸಮಯ ನೀಡಲಾಗಿದೆ. ಯಾವುದೇ ಕಾರಣಕ್ಕೂ ಇನ್ನೂ ಅವಕಾಶ ಕೊಡಲು ಸಾಧ್ಯವಿಲ್ಲ ಎಂದು ಮುಖ್ಯಾಧಿಕಾರಿ ರವಿಕುಮಾರ್ ಸ್ಪಷ್ಟಪಡಿದರು. ಇದರಿಂದ ಆಕ್ರೋಶಗೊಂಡ ಗೋವಿಂದರಾಜು ಕಟ್ಟಡ ಕೆವಲು ಬಿಡುವುದಿಲ್ಲ ಎಂದು ತೆರವು ಕಾರ್ಯಚರಣೆಗೆ ಅಡ್ಡಿ ಪಡಿಸಿ ಬಾಗಿಲು ಬಳಿ ಮಲಗಿ ಪ್ರತಿಭಟಿಸಿದರು. ಈ ನಡುವೆ ಗೊವಿಂದರಾಜು ಹಾಗೂ ಪುರಸಭಾ ಅಧಿಕಾರಿಗಳ ನಡುವೆ ಬಿರುಸಿನ ಮಾತಿನ ಚಕಾಮಕಿ ನಡೆಯಿತು. ಪೊಲೀಸರು ಮಧ್ಯ ಪ್ರವೇಶಿಸಿ ಕಾರ್ಯಚರಣೆಗೆ ಅಡ್ಡಿ ಪಡಿಸಿದ ಗೋವಿಂದರಾಜುನನ್ನು ವಶಕ್ಕೆ ಪಡೆದು ಕಾರ್ಯಚರಣೆಗೆ ಅನುಕೂಲ ಮಾಡಿಕೊಟ್ಟರು,
ಪುರಸಭೆಗೆ ಸೇರಿರುವ ಸ್ವತ್ತಿನಲ್ಲಿ ಅಕ್ರಮ ಪ್ರವೇಶಿಸಿ ಯಾರೇ ಕಟ್ಟಡ ನಿರ್ಮಿಸಿದರೂ ಅದನ್ನು ವಿರೋಧಿಸುತ್ತೇನೆ, ಆದರೆ ಪಟ್ಟಣದ ಹಲವು ಭಾಗಗಳಲ್ಲಿ ಬಲಾಡ್ಯ ವ್ಯಕ್ತಿಗಳು, ಪುರಸಭೆ ಜಾಗದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಿಸಿಕೊಂಡಿದ್ದಾರೆ ಈ ಸಂಬಂಧ ಪುರಸಭೆ ಸಾಮಾನ್ಯ ಸಭೆಗಳಲ್ಲಿ ಆನೇಕ ಮಂದಿ ಸದಸ್ಯರು ಅಧಿಕಾರಿಗಳ ಗಮನಕ್ಕೆ ತಂದು ಕಟ್ಟಡ ತೆರವುಗೊಳಿಸುವಂತೆ ಸೂಚಿಸಲಾಗಿದೆ. ಆದರೆ ಆ ಕಟ್ಟಡಗಳನ್ನು ತೆರವುಗೊಳಿಸದ ಅಧಿಕಾರಿಗಳು ಪರಿಶಿಷ್ಟ ಜಾತಿಯ ಬೋವಿ ಸಮುದಾಯದ ಬಡ ಕುಟುಂಬವು ಕಟ್ಟಡ ಕಟ್ಟಿಕೊಂಡಿರುವುದನ್ನು ಏಕಾಏಕಿ ಕೆಡವಿ ಆ ಕುಟುಂಬವನ್ನು ಬೀದಿಗೆ ತಂದಿದ್ದಾರೆ. ತೆರವುಗೊಳಿಸಲು ಒಂದು ವಾರ ಅವಕಾಶ ನೀಡಿ ಎಂದು ಮನೆಯ ಮಾಲೀಕ ಗೋವಿಂದರಾಜು ಮನವಿ ಮಾಡಿದರು. ಇದನ್ನು ಗಣನೆಗೆ ತೆಗೆದುಕೊಳ್ಳದೇ ಕಟ್ಟಡವನ್ನು ತೆರವುಗೊಳಿಸಿದ ದರ್ಪ ತೋರಿಸಿದ್ದಾರೆ. – ಅನಂದ್‌ಕುಮಾರ್ 20 ನೇ ವಾರ್ಡ್ ಪುರಸಭಾ ಸದಸ್ಯ