Advertisement
ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗದಂತೆ ತಡೆಯಲು ಬಿಬಿಎಂಪಿ ಸೋಮವಾರದಿಂದ ತೀವ್ರಗತಿಯಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದೆ. ಅದರಂತೆ ಸೋಮವಾರ ಮಹದೇವಪುರ ವಲಯ ವ್ಯಾಪ್ತಿಯಲ್ಲಿ 15 ಕಡೆ ತೆರವು ಕಾರ್ಯಾಚರಣೆ ನಡೆಸಿದ್ದ ಬಿಬಿಎಂಪಿ, ಮಂಗಳವಾರ ಮಹದೇವಪುರ ವಲಯದ ಜತೆಗೆ ಯಲಹಂಕ ವಲಯದಲ್ಲೂ ಕಾರ್ಯಾಚರಣೆ ನಡೆಸಿದೆ.
Related Articles
Advertisement
ಮತ್ತೆ ಕಾರ್ಯಾಚರಣೆ: ನಗರದಲ್ಲಿ 660 ಕಟ್ಟಡಗಳಿಂದ ಒತ್ತುವರಿಯಾಗಿರುವುದನ್ನು ಬಿಬಿಎಂಪಿ ಗುರುತಿಸಿದೆ. ಸೋಮವಾರ ಮತ್ತು ಮಂಗಳವಾರ ಸುಮಾರು 28 ಕಡೆಗಳಲ್ಲಿನ ಒತ್ತುವರಿ ತೆರವು ಮಡಲಾಗಿದೆ. ಬುಧವಾರವೂ ಕಾರ್ಯಾಚರಣೆ ಮುಂದುವರಿಯಲಿದ್ದು, ಈಗಾಗಲೆ ಗುರುತಿಸಿರುವ ಒತ್ತುವರಿ ಸಂಪೂರ್ಣವಾಗಿ ತೆರವು ಮಾಡುವವರೆಗೆ ಕಾರ್ಯಾಚರಣೆ ನಡೆಸಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಕಾಂಪೌಂಡ್ ತೆರವೇ ಹೆಚ್ಚುಸೆ. 1ರಿಂದ ಈವರೆಗೆ 64 ಕಡೆ ಒತ್ತುವರಿ ತೆರವು ಮಾಡಲಾಗಿದೆ. ಅದರಲ್ಲಿ 35ಕ್ಕೂ ಹೆಚ್ಚಿನ ಕಡೆ ಕಾಂಪೌಂಡ್ ಗೋಡೆಗಳನ್ನಷ್ಟೇ ತೆರವು ಮಾಡಿ, ಒತ್ತುವರಿ ತೆರವು ಮಾಡಲಾಗಿದೆ ಎಂದು ಬಿಬಿಎಂಪಿ ಹೇಳುತ್ತಿದೆ. ಆದರೆ, ಬೃಹತ್ ಕಟ್ಟಡಗಳು ನಿರ್ಮಾಣವಾದ ಸ್ಥಳದಲ್ಲಿ ಈ ಹಿಂದೆ ರಾಜಕಾಲುವೆ ಇತ್ತು ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ಮಾತ್ರ ಬೃಹತ್ ಕಟ್ಟಡಗಳತ್ತ ಜೆಸಿಬಿಯನ್ನು ನುಗ್ಗಿಸದೆ ಕಾಂಪೌಂಡ್ ಗೋಡೆಗಳನ್ನು, ಶೆಡ್‌ಗಳನ್ನು, ಖಾಲಿ ಜಾಗ ವಶಕ್ಕೆ ಪಡೆಯುವುದಕ್ಕೆ ಮಾತ್ರ ಕಾರ್ಯಾಚರಣೆ ಸೀಮಿತವಾಗಿಸಿದ್ದಾರೆ. ಭದ್ರತೆಯೊಂದಿಗೆ ಕಾರ್ಯಾಚರಣೆ
ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಕಟ್ಟಡ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಮಂಗಳವಾರ ಹೆಚ್ಚಿನ ಭದ್ರತೆಯೊಂದಿಗೆ ಕಾರ್ಯಾಚರಣೆ ಮಾಡಲಾಗಿದೆ. ಅದರ ಜತೆಗೆ 2 ಹಿಟಾಚಿ ಮತ್ತು 8 ಜೆಸಿಬಿ ಯಂತ್ರಗಳ ಮೂಲಕ ಒತ್ತುವರಿ ತೆರವು ಮಾಡಲಾಗಿದೆ. ರೈನ್‌ಬೋ ಡ್ರೈವ್ ಬಗ್ಗೆ ಮಾತಿಲ್ಲ
15 ದಿನಗಳ ಹಿಂದೆ ಸುರಿದ ಮಳೆಗೆ ರೈನ್‌ಬೋ ಡ್ರೈವ್ ಲೇಔಟ್ ಸಂಪೂರ್ಣ ಜಲಾವೃತವಾಗಿತ್ತು. ಈ ಲೇಔಟ್ ವ್ಯಾಪ್ತಿಯಲ್ಲಿನ ರಾಜಕಾಲುವೆ ಮುಚ್ಚಿ ವಿಲ್ಲಾಗಳನ್ನು ನಿರ್ಮಿಸಿದ್ದೇ ಪ್ರವಾಹಕ್ಕೆ ಕಾರಣ ಎಂದು ಬಿಬಿಎಂಪಿ ಅಧಿಕಾರಿಗಳೂ ತಿಳಿಸಿದ್ದರು. ಅಲ್ಲದೆ, ಕಳೆದ ಏಪ್ರಿಲ್‌ನಲ್ಲಿ ಕಂದಾಯ ಇಲಾಖೆಯಿಂದ 15 ವಿಲ್ಲಾಗಳಿಗೆ ರಾಜಕಾಲುವೆ ಒತ್ತುವರಿ ಕುರಿತಂತೆ ನೋಟಿಸ್ ಕೂಡ ನೀಡಲಾಗಿತ್ತು. ಅದಾದ ನಂತರ ರಾಜಕಾಲುವೆ ಒತ್ತುವರಿ ತೆರವು ಮಾಡುವುದಕ್ಕೆ ಕಂದಾಯ ಇಲಾಖೆ ಅಥವಾ ಬಿಬಿಎಂಪಿ ಮುಂದಾಗಿಲ್ಲ. ಈಗಲೂ ಪ್ರವಾಹ ಉಂಟಾಗಿ ಅವಾಂತರ ಸೃಷ್ಟಿಯಾಗಿದ್ದರೂ ರೈನ್‌ಬೋ ಡ್ರೈವ್‌ನಲ್ಲಿ ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿರುವ ವಿಲ್ಲಾಗಳ ತೆರವಿಗೆ ಬಿಬಿಎಂಪಿ ಮುಂದಾಗದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ನಲಪಾಡ್ ಅಕಾಡೆಮಿ ಸಿಬ್ಬಂದಿಯಿಂದ ಹಲ್ಲೆಗೆ ಯತ್ನ
ಚಲ್ಲಘಟ್ಟದಲ್ಲಿ ನಲಪಾಡ್ ಅಕಾಡೆಮಿಯಿಂದ ಒತ್ತುವರಿಯಾಗಿದ್ದ ಜಾಗ ತೆರವು ಮಾಡುವ ವೇಳೆ ಸಂಸ್ಥೆಯ ಸಿಬ್ಬಂದಿ ಹಾಗೂ ಬಿಬಿಎಂಪಿ ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು. ಈ ವೇಳೆ ಕಾರ್ಯಾಚರಣೆ ನಿಲ್ಲಿಸುವಂತೆ ಒತ್ತಡ ಹೇರಲಾಯಿತು. ಈ ವೇಳೆ ಬಿಬಿಎಂಪಿ ಅಧಿಕಾರಿಗಳ ಮೇಲೆ ಹಲ್ಲೆ ಮಾಡುವ ಹಂತಕ್ಕೆ ಘಟನೆ ನಡೆದಿದ್ದು, ಪೊಲೀಸರು ಅಧಿಕಾರಿಗಳ ರಕ್ಷಣೆಗೆ ಬರಲಿಲ್ಲ. ನಂತರ ಹಿರಿಯ ಅಧಿಕಾರಿಗಳಿಗೆ ಸ್ಥಳದಲ್ಲಿದ್ದ ಅಧಿಕಾರಿಗಳು ಮಾಹಿತಿ ನೀಡಿದರು. ಆಗ ಹಿರಿಯ ಅಧಿಕಾರಿಗಳು ಪೊಲೀಸರಿಗೆ ಸೂಚನೆ ನೀಡಿದ ನಂತರ ಭದ್ರತೆ ನೀಡಲಾಯಿತು. ಧಾರ್ಮಿಕ ಮಂದಿರ ನೆಲಸಮ
ಬೇಗೂರು ವಾರ್ಡ್‌ನ ಲವಕುಶ ನಗರ ಮುಖ್ಯ ರಸ್ತೆ ಬದಿಯ 11 ಎಕರೆ 18 ಗುಂಟೆ ಇರುವ ಕೆರೆಯ ಒಂದು ಭಾಗದಲ್ಲಿ ಧಾರ್ಮಿಕ ಮಂದಿರ ನಿರ್ಮಿಸಲಾಗಿತ್ತು. ಪಕ್ಕದಲ್ಲಿ ಕೆರೆಯ ಅತಿಕ್ರಮಣ ನಿಷೇಧಿಸಲಾಗಿದೆ ಎಂಬ ಫಲಕವಿದ್ದರೂ ಅನಧಿಕೃತವಾಗಿ ಮಂದಿರ (ದಿ ಗೇಟ್ ಆಫ್ ಸಾಲ್‌ವೇಷನ್ ಚರ್ಚ್) ಸ್ಥಾಪನೆಯ ಬಗ್ಗೆ ಸಾರ್ವಜನಿಕರಿಂದಲೂ ಬಿಬಿಎಂಪಿಗೆ ದೂರು ಬಂದಿದ್ದವು. ಸ್ಥಳ ಪರಿಶೀಲಿಸಿ ಮಂದಿರ ನಡೆಸುತ್ತಿದ್ದ ವ್ಯಕ್ತಿಗೆ ಬಿಬಿಎಂಪಿ ನೋಟಿಸ್ ನೀಡಲಾಗಿತ್ತು. ಸ್ವಯಂ ತೆರವು ಮಾಡದ ಹಿನ್ನೆಲೆಯಲ್ಲಿ ಬೊಮ್ಮನಹಳ್ಳಿ ವಲಯದ ಅಧಿಕಾರಿಗಳು ಒತ್ತುವರಿ ತೆರವು ಮಾಡಿದರು.