Advertisement
ಸರ್ಕಾರ ವಿಕಲಾಂಗರ ಸಬಲೀಕರಣಕ್ಕಾಗಿ ಪ್ರತ್ಯೇಕ ಮಂತ್ರಾಲಯ ಸ್ಥಾಪಿಸಿದ್ದು ಅನೇಕ ಯೋಜನೆ ಜಾರಿಗೊಳಿಸಿದೆ. ಇವುಗಳನ್ನು ಸಮರ್ಪಕ ಅನುಷ್ಠಾನಗೊಳಿಸಲು ಪ್ರತಿ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ಪ್ರತ್ಯೇಕ ಕಚೇರಿ ಸ್ಥಾಪಿಸಿದೆ. ಅಂದರೆ ವಿಕಲಾಂಗ ಪ್ರಮಾಣಪತ್ರ ನೀಡುವ ಕಚೇರಿ ಸ್ಥಾಪಿಸುವುದನ್ನು ಮರೆತು ಬಿಟ್ಟಿದೆ.
Related Articles
Advertisement
700 ಶ್ರವಣದೋಷ, 60 ಕುಷ್ಠರೋಗಿಗಳು, 900 ಬುದ್ಧಿಮಾಂದ್ಯರು, 650 ಅಂಧರು, 1250 ಬಹುವಿಧ ವಿಕಲಾಂಗರು, 2050 ದೈಹಿಕ ವಿಕಲರು ಸೇರಿ ತಾಲೂಕಿನಲ್ಲಿ 6 ಸಾವಿರಕ್ಕೂ ಹೆಚ್ಚು ನೋಂದಾಯಿತರಿದ್ದಾರೆ. 3000 ಜನ ಪ್ರಮಾಣಪತ್ರ ಪಡೆದಿದ್ದು ಉಳಿದವರು ಪಡೆಯಲು ಸಾಧ್ಯವಾಗಿಲ್ಲ. ಹೊಸದಾಗಿ ಸಾವಿರಕ್ಕೂ ಹೆಚ್ಚು ಅರ್ಜಿ ಬಂದಿವೆ ಎಂದು ತಾಪಂ ಎಂಆರ್ ಡಬ್ಯೂ ಮಾಳಪ್ಪ ಪೂಜಾರಿ ತಿಳಿಸಿದ್ದಾರೆ.
ತಾಲೂಕು ಕೇಂದ್ರಗಳಲ್ಲಿ ಕಚೇರಿ ಸ್ಥಾಪನೆಗೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದ್ದೇವೆ. ಸಚಿವರು, ಶಾಸಕರು, ಆಯುಕ್ತರಿಗೆ ಮನವಿ ಸಲ್ಲಿಸಿದ್ದೇವೆ. ಮನವಿಗಳೆಲ್ಲ ಕಸದ ಬುಟ್ಟಿ ಸೇರುತ್ತಿವೆ. ನಮ್ಮ ಬಗ್ಗೆ ಯಾರಿಗೂ ಕಾಳಜಿ ಇಲ್ಲ. –ಸಂಗನಗೌಡ ಧನರೆಡ್ಡಿ, ವಿಕಲಚೇತನರ ಸಂಘದ ಜಿಲ್ಲಾಧ್ಯಕ್ಷ
ಪ್ರಮಾಣಪತ್ರಕ್ಕಾಗಿ ರಾಯಚೂರು- ಯಾದಗಿರಿಗೆ ಒಂದು ವರ್ಷದಿಂದ ಅಲೆದಿದ್ದೇನೆ. ಆದರೂ ಪ್ರಮಾಣಪತ್ರ ಸಿಕ್ಕಿಲ್ಲ. ಖರ್ಚು ಮಾಡಿ ಅಲೆಯವುದು ಆಗುತ್ತಿಲ್ಲ. ಕಾನೂನು ಸೇವಾ ಸಮಿತಿಯವರು ಪ್ರಮಾಣಪತ್ರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ತಾಲೂಕು ಕೇಂದ್ರದಲ್ಲಿ ಕಚೇರಿ ಸ್ಥಾಪಿಸಿದರೆ ಬಡವರಿಗೆ ಅನುಕೂಲವಾಗುತ್ತದೆ. –ಬಲಭೀಮ ಬಾದ್ಯಾಪುರ, ವಿಕಲಚೇತನ
-ಸಿದ್ದಯ್ಯ ಪಾಟೀಲ