Advertisement

UCC ಅಭಿಪ್ರಾಯ ಮರುಸಂಗ್ರಹಕ್ಕೆ ಆಕ್ಷೇಪ: ಕಾನೂನು ಆಯೋಗದ ಕ್ರಮಕ್ಕೆ ಕಾಂಗ್ರೆಸ್‌, JDU ಟೀಕೆ

10:26 PM Jun 15, 2023 | Team Udayavani |

ನವದೆಹಲಿ: ಸಮಾನ ನಾಗರಿಕ ಸಂಹಿತೆ ಜಾರಿ ಮಾಡಬೇಕೇ, ಬೇಡವೇ ಎಂಬ ಕುರಿತು ಮತ್ತೂಮ್ಮೆ ಸಾರ್ವಜನಿಕರು, ಧಾರ್ಮಿಕ ಸಂಘ ಸಂಸ್ಥೆಗಳ ಅಭಿಪ್ರಾಯ ಸಂಗ್ರಹಿಸಲು ಕಾನೂನು ಆಯೋಗ ಮುಂದಾಗಿರುವಂತೆಯೇ, ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ.

Advertisement

ಆಯೋಗದ ನಿರ್ಧಾರವು, ಧ್ರುವೀಕರಣ ಮತ್ತು ತಮ್ಮ ವೈಫ‌ಲ್ಯಗಳಿಂದ ಜನರ ಹಾದಿ ತಪ್ಪಿಸಲು ನರೇಂದ್ರ ಮೋದಿ ನೇತೃತ್ವದ ಸರ್ಕಾರ ತನ್ನ ಹತಾಶ ಪ್ರಯತ್ನವನ್ನು ಮುಂದುವರಿಸಿರುವುದಕ್ಕೆ ಸಾಕ್ಷಿ ಎಂದು ಕಾಂಗ್ರೆಸ್‌ ಆರೋಪಿಸಿದೆ. 2018ರ ಆಗಸ್ಟ್‌ನಲ್ಲೇ 21ನೇ ಕಾನೂನೂ ಆಯೋಗವು ಸಮಾಲೋಚನಾ ಪತ್ರವನ್ನು ಪ್ರಕಟಿಸಿದ್ದರೂ, ಈಗ ಕಾನೂನು ಆಯೋಗ ಮತ್ತೂಮ್ಮೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿರುವುದು ಅಚ್ಚರಿಯ ವಿಚಾರ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ(ಸಂವಹನ) ಜೈರಾಂ ರಮೇಶ್‌ ಹೇಳಿದ್ದಾರೆ. ಅಲ್ಲದೆ, ಮತ್ತೂಮ್ಮೆ ಸಲಹೆ ಸಂಗ್ರಹಿಸಲು ಕಾರಣವೇನು ಎಂದೂ ಆಯೋಗ ತಿಳಿಸಿಲ್ಲ ಎಂದಿದ್ದಾರೆ.

ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಿ:

ಇನ್ನೊಂದೆಡೆ,  ಯುಸಿಸಿ ವಿಚಾರದಲ್ಲಿ ಸರ್ಕಾರವು ಸರ್ವ ಸಮ್ಮತವನ್ನು ಪಡೆಯಲು ಯತ್ನಿಸಬೇಕು ಎಂದು ಹೇಳಿರುವ ಜೆಡಿಯು, ಆಯೋಗವು ಈ ವಿಚಾರದಲ್ಲಿ ವಿವಿಧ ಧರ್ಮಗಳು ಮತ್ತು ಸಮುದಾಯಗಳ ಸದಸ್ಯರು ಸೇರಿದಂತೆ ಸಂಬಂಧಪಟ್ಟ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next