Advertisement

ವೀರಯೋಧರಿಗೆ ನುಡಿನಮನ

10:02 AM Jun 22, 2020 | Suhan S |

ಯಲಬುರ್ಗಾ: ದೇಶದ ಗಡಿ ಭಾಗದಲ್ಲಿ ಹುತ್ಮಾತರಾದ ವೀರಯೋಧರಿಗೆ ಪಟ್ಟಣದ ಬ್ಲಾಕ್‌ ಕಾಂಗ್ರೆಸ್‌ ಕಚೇರಿಯಲ್ಲಿ ನುಡಿನಮನ ಸಲ್ಲಿಸಲಾಯಿತು.

Advertisement

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಮಾತನಾಡಿ, ದೇಶ ಸೇವೆಗೆ ಪ್ರಾಣ ಬಲಿದಾನಗೈದ ಯೋಧರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ಇದೇ ಸಂದರ್ಭದಲ್ಲಿ ಬಡವರಿಗೆ ದಿನಸಿ ಕಿಟ್‌ ವಿತರಿಸುವ ಮೂಲಕ ರಾಹುಲ್‌ ಗಾಂಧಿ ಅವರ ಜನ್ಮದಿನ ಆಚರಿಸಲಾಯಿತು. ಜಿಪಂ ಮಾಜಿ ಉಪಾಧ್ಯಕ್ಷ ಯಂಕಣ್ಣ ಯರಾಶಿ ಮಾತನಾಡಿದರು. ಜಿಪಂ ಮಾಜಿ ಸದಸ್ಯ ರಾಮಣ್ಣ ಸಾಲಭಾವಿ, ರೇವಣೆಪ್ಪ ಸಂಗಟಿ, ಕಳಕಪ್ಪ ಕಂಬಳಿ, ಡಾ| ನಂದಿತಾ ದಾನರಡ್ಡಿ, ಜಯಶ್ರೀ ಕಂದಕೂರು, ಬಸವರಾಜ ಹುಣಸಿಹಾಳ, ರಿಯಾಜ್‌ ಖಾಜಿ, ಶರಣಪ್ಪ ಗಾಂಜಿ, ಡಾ| ಶಿವನಗೌಡ ದಾನರಡ್ಡಿ, ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next