Advertisement
ನ. 17ರಂದು 70 ಕ್ಷೇತ್ರಗಳಿಗೆ ಎರಡನೇ ಹಂತ ದಲ್ಲಿ ಮತದಾನ ನಡೆಯಲಿರುವ ಹಿನ್ನೆಲೆ ಯಲ್ಲಿ ಮುಂಗೇಲಿ ಮತ್ತು ಮಹಾಸಮುಂದ್‌ಗಳಲ್ಲಿ ಪ್ರಧಾನಿ ಬಿರುಸಿನ ಪ್ರಚಾರ ನಡೆಸಿದರು.
Related Articles
Advertisement
ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮತ್ತು ಡಿಸಿಎಂ ಟಿ.ಎಸ್.ಸಿಂಗ್ ದಿಯೋ ನಡುವೆ ಇರುವ ಅಧಿಕಾರ ಹಂಚಿಕೆಯ ಒಪ್ಪಂದವೇ ಹಾಸ್ಯಾಸ್ಪದ ಎಂದು ಪ್ರಧಾನಿ ಲೇವಡಿ ಮಾಡಿದ್ದಾರೆ. ಅದರ ಮೂಲ ಉದ್ದೇಶವೇ ಜಾರಿಯಾಗಿಲ್ಲ ಎಂದು ಛೇಡಿಸಿದ ಪ್ರಧಾನಿ, “ಹಿರಿಯ ನಾಯಕನಿಗೆ ಮೋಸ ಮಾಡುವ ಕಾಂಗ್ರೆಸ್, ರಾಜ್ಯದ ಜನರಿಗೆ ಮೋಸ ಮಾಡದೇ ಇರಲು ಸಾಧ್ಯವೇ’ ಎಂದು ಪ್ರಶ್ನಿಸಿದರು. ಹಾಲಿ ಚುನಾವಣೆಯಲ್ಲಿ ಮುಖ್ಯಮಂತ್ರಿಯೇ ಪಟಾನ್ ಕ್ಷೇತ್ರದಿಂದ ಸೋಲುವ ಸಾಧ್ಯತೆಗಳು ಇವೆ ಎಂದು ಹೊಸ ದಿಲ್ಲಿಯಲ್ಲಿನ ತಮ್ಮ ಕೆಲವು ಪತ್ರಕರ್ತ ಸ್ನೇಹಿತರು ಹೇಳಿದ್ದಾರೆ ಎಂದರು.
ರಾಜ್ಯವನ್ನು ಲೂಟಿ ಮಾಡುವುದೇ ಕಾಂಗ್ರೆಸ್‌ನ ಪ್ರಧಾನ ಧ್ಯೇಯವಾಗಿತ್ತು ಎಂದು ದೂರಿದ ಪ್ರಧಾನಿ, ಮುಖ್ಯಮಂತ್ರಿ ಭೂಪೇಶ್ ಬಘೇಲ್, ಅವರ ಪುತ್ರ ಮತ್ತು ಇತರ ಅಧಿಕಾರಿಗಳು ಸೂಪರ್ ಸಿಎಂ ಆಗುವ ಮೂಲಕ ಸಂಪತ್ತು ದೋಚಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೋದಿಯದ್ದೇ ಗ್ಯಾರಂಟಿ
ಮಧ್ಯಪ್ರದೇಶದ ಬರ್ವಾನಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ “ಬಿಜೆಪಿ ಅಧಿಕಾರ ಉಳಿಸಿಕೊಂಡಾಗ ಮೋದಿಯ ಹೆಸರಿನಲ್ಲಿ ನೀಡಿದ ಭರವಸೆಗಳೆಲ್ಲ ಜಾರಿಯಾಗಲಿವೆ’ ಎಂದರು. ಕೇಂದ್ರ ಸರ ಕಾ ರದ ಉಚಿತ ಪಡಿತರ ಯೋಜನೆ 80 ಕೋಟಿ ಮಂದಿಗೆ ಲಾಭವಾಗುತ್ತಿದೆ ಎಂದರು.
ದೇಶದ ಭ್ರಷ್ಟಾಚಾರದ ರಾಜಧಾನಿ ಮಧ್ಯಪ್ರದೇಶಮಧ್ಯಪ್ರದೇಶದ ದೇಶದ ಭ್ರಷ್ಟಾಚಾರದ ರಾಜಧಾನಿ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ. ಮಧ್ಯಪ್ರದೇಶ ನಿಮೂಚ್‌ನಲ್ಲಿ ಮಾತನಾಡಿದ ಅವರು, ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಸರ ಕಾರದ ಅವಧಿಯಲ್ಲಿ ಅಭಿವೃದ್ಧಿ ಕೆಲಸಗಳು ನಡೆಯದೇ, ಭ್ರಷ್ಟಾರ ನಡೆದದ್ದೇ ಹೆಚ್ಚು. ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ ಕಾರಅಧಿಕಾರಕ್ಕೆ ಬಂದರೆ ಜಾತಿ ಗಣತಿ ನಡೆಸಲಿದೆ ಎಂದರು.