Advertisement
ಪ್ರತಿ ಹಳ್ಳಿಯ ಜನರೂ ಈ ನಮ್ಮನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ಇಮ್ಮಡಿಯಾಗಿದೆ ಎಂದು ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಚರಂತಿಮಠ ಹೇಳಿದರು.
Related Articles
Advertisement
ಮತದಾರರು ನೀಡುವ ಅಧಿಕಾರವನ್ನು ಸ್ವಾರ್ಥಕ್ಕೆ ಬಳಸಿಕೊಳ್ಳದೇ, ಜನರ ಸೇವೆ ಬಳಸಿಕೊಳ್ಳಬೇಕು ಎಂಬುದು ನನ್ನ ಅಭಿಲಾಸೆ. ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಗೆದ್ದುಬಂದಲ್ಲಿ ಐದು ವರ್ಷ ನಿಮ್ಮ ಸೇವಕನಾಗಿ ಕೆಲಸ ಮಾಡುವೆ. ಮತದಾರರ ಕಷ್ಟ-ನೋವು ಆಲಿಸಿ, ಸಾಂತ್ವನ ಹೇಳುವ ಜತೆಗೆ ಅವರಿಗೆ ಸ್ಪಂದಿಸುವ ಕಾರ್ಯ ಮಾಡಬೇಕು. ಅದಕ್ಕಾಗಿಯೇ ಮತದಾರರ, ಜನಪ್ರತಿನಿಧಿಯನ್ನು ಆಯ್ಕೆ ಮಾಡುತ್ತಾರೆ. ಈ ಪ್ರಜ್ಞೆಯೂ ಇಲ್ಲದವರು, ಜನರೊಂದಿಗೆ ದುರಂಹಕಾರದಿಂದ ವರ್ತಿಸಿ, ಜನರ ಮನಸ್ಸಿನಿಂದ ದೂರಾಗಿದ್ದಾರೆ ಎಂದರು.
ಮುಳುಗಡೆ ಕ್ಷೇತ್ರ ಬಾಗಲಕೋಟೆಯಲ್ಲಿ ಒಂದು ಕೈಗಾರಿಕೆ ಕೂಡ ಇಲ್ಲ. ಜನ ಉದ್ಯೋಗವಿಲ್ಲದೇಎದುರಿಸುತ್ತಿರುವ ಸಂಕಷ್ಟ ಅರಿತುಕೊಳ್ಳಲೂ ಯಾರೂ ಹೋಗಿಲ್ಲ. ಅಭಿವೃದ್ಧಿ ಎಂದರೆ ಕೇವಲ ರಸ್ತೆ, ಚರಂಡಿ ಸಹಿತ ಮೂಲಭೂತ ಸೌಲಭ್ಯ ಕಲ್ಪಿಸುವುದು ಅಷ್ಟೇ ಅಲ್ಲ. ಜನರ ಬದುಕು ಬದಲಾಗಬೇಕು, ನೆಮ್ಮದಿಯ ಜೀವನ ನಡೆಸಬೇಕು. ಅದಕ್ಕೆ ಬೇಕಾದ ಪೂರಕ ವಾತಾವರಣ
ಕ್ಷೇತ್ರದಲ್ಲಿ ನಿರ್ಮಿಸಬೇಕು. ಆಗ ಒಬ್ಬ ಜನಪ್ರತಿನಿಧಿ, ಜನ ನಾಯಕನಾಗಲು ಸಾಧ್ಯ ಎಂದು ಹೇಳಿದರು. ಮುಖಂಡರಾದ ಶಂಭುಗೌಡ ಪಾಟೀಲ, ಸಂಗನಗೌಡ ಗೌಡರ, ಸಂತೋಷ ಹೊಕ್ರಾಣಿ, ಗುರು ಅನಗಾವಡಿ,
ಬಸವರಾಜ ಸೊಕನಾದಗಿ, ಅರುಣ ಲೋಕಾಪುರ ಪಾಲ್ಗೊಂಡಿದ್ದರು. ವಿದ್ಯಾಗಿರಿಯಲ್ಲಿ ಬಿರುಸಿನ ಪ್ರಚಾರ: ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಚರಂತಿಮಠ ಮತ್ತು ಯುವ
ಮುಖಂಡ ಸಂತೋಷ ಹೊಕ್ರಾಣಿ ವಿದ್ಯಾಗಿರಿಯ 14ನೇ ಕ್ರಾಸ್‌ನಲ್ಲಿ ಪ್ರಚಾರ ನಡೆಸಿದರು. ಪ್ರತಿ ಮನೆ ಮನೆಗೂ
ತೆರಳಿ, ಬಾಗಲಕೋಟೆಯಲ್ಲಿ ಬದಲಾವಣೆಗೆ ಅವಕಾಶ ಕೊಡಿ ಎಂದು ಮನವಿ ಮಾಡಿದರು. ಹೆಸರಿಗೆ ಮಾತ್ರ ನಾನು ಅಭ್ಯರ್ಥಿ. ಆದರೆ, ಕ್ಷೇತ್ರದ ಪ್ರತಿಯೊಬ್ಬ ಸ್ವಾಭಿಮಾನಿ ಕಾರ್ಯಕರ್ತನೇ ನಿಜವಾದ ಅಭ್ಯರ್ಥಿ ಎಂದು ಭಾವಿಸಿ, ಎಲ್ಲೆಡೆ ಪ್ರಚಾರ ನಡೆಸಿದ್ದಾರೆ. ಈಗಾಗಲೇ ಕ್ಷೇತ್ರದ ಎಲ್ಲ ಹಳ್ಳಿಗಳಲ್ಲೂ ಪ್ರಚಾರ ಕೈಗೊಂಡು
ಜನರನ್ನು ಭೇಟಿ ಮಾಡಿದ್ದೇನೆ. ಎಲ್ಲ ಕಡೆಯೂ ನಮ್ಮ ನಿರೀಕ್ಷೆಗೂ ಮೀರಿ ಬೆಂಬಲ ಸಿಗುತ್ತಿದೆ.
-ಮಲ್ಲಿಕಾರ್ಜುನ ಚರಂತಿಮಠ,
ಪಕ್ಷೇತರ ಅಭ್ಯರ್ಥಿ