ಕೊಲಂಬೋ: ಭಾರತ ತಂಡ ಇಂದು ಶ್ರೀಲಂಕಾ ವಿರುದ್ಧ ಏಕದಿನ ಸರಣಿಯ ಮೊದಲ ಪಂದ್ಯವಾಡಲಿದೆ. ಭಾರತದ ಮೀಸಲು ತಂಡ ಇದಾಗಿದ್ದು, ಶಿಖರ್ ಧವನ್ ನೇತೃತ್ವದಲ್ಲಿ ಲಂಕಾ ಸರಣಿ ಆಡಲಿದೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಿಖರ್ ಧವನ್, ಈ ಸರಣಿಯಲ್ಲಿ ಎಲ್ಲಾ ಆಟಗಾರರಿಗೂ ಆಡುವ ಅವಕಾಶ ಸಿಗಬೇಕು ಎಂಬ ನಿಯಮವೇನು ಇಲ್ಲ ಎಂದಿದ್ದಾರೆ. ನಮಗೆ ಸರಣಿ ಗೆಲ್ಲುವುದು ಮುಖ್ಯ. ಸಂದರ್ಭಕ್ಕೆ ಉತ್ತಮ ಆಟಗಾರರೊಂದಿಗೆ ನಾವು ಆಡುತ್ತೇವೆ ಎಂದು ಹೇಳಿದರು.
ಲಂಕಾ ಸರಣಿಗೆ ಭಾರತ ತಂಡ ಮೀಸಲು ಪಡೆಯನ್ನು ಕಳುಹಿಸಿದೆ. ಕೆಲವು ಹೊಸ ಆಟಗಾರರು ಇದೇ ಮೊದಲ ಬಾರಿಗೆ ರಾಷ್ಟ್ರೀಯ ತಂಡದ ಕರೆ ಪಡೆದಿದ್ದಾರೆ. ಇವರೆಲ್ಲರಿಗೂ ಅವಕಾಶ ನೀಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಧವನ್ ಈ ರೀತಿ ಉತ್ತರಿಸಿದರು.
ಇದನ್ನೂ ಓದಿ:ಭಾರತದ ಮೀಸಲು ಸಾಮರ್ಥ್ಯಕ್ಕೊಂದು ವೇದಿಕೆ : ದ್ರಾವಿಡ್ ಮಾರ್ಗದರ್ಶನ, ಧವನ್ ಸಾರಥ್ಯ
ಟಿ20 ವಿಶ್ವಕಪ್ ಗೆ ಮೊದಲು ಇದು ಕೊನೆಯ ಸರಣಿಯಾದ ಕಾರಣ ವಿಶ್ವಕಪ್ ನಲ್ಲಿ ಆಡಬೇಕಾದ ಆಟಗಾರರ ಮೇಲೂ ಭಾರತ ತಂಡ ಕಣ್ಣಿಟ್ಟಿದೆ. ಲಂಕಾದಲ್ಲಿ ಉತ್ತಮ ಪ್ರದರ್ಶನ ತೋರಿದ ಆಟಗಾರರ ವಿಶ್ವಕಪ್ ತಂಡದಲ್ಲೂ ಸ್ಥಾನ ಪಡೆಯಬಹುದು. ಈ ಬಗ್ಗೆ ಮಾತನಾಡಿದ ಧವನ್, ನಾಯಕ ವಿರಾಟ್ ಮತ್ತು ಕೋಚ್ ರವಿ ಶಾಸ್ತ್ರೀ ವಿಶ್ವಕಪ್ ಆಧರಿಸಿ ಯಾವುದೇ ಆಟಗಾರನ ಮೇಲೆ ಕಣ್ಣಿಟ್ಟಿರಬಹುದು. ಅವರು ಆ ವಿಚಾರವನ್ನು ರಾಹುಲ್ ದ್ರಾವಿಡ್ ಗೆ ತಿಳಿಸಿರಬಹುದು. ಆ ಆಟಗಾರನಿಗೆ ಹೆಚ್ಚಿನ ಅವಕಾಶ ಕೊಡುತ್ತೇವೆ ಎಂದರು.