Advertisement
ಹ್ಯಾಮಿಲ್ಟನ್ನಲ್ಲಿ ನಡೆದ 3ನೇ ಟೆಸ್ಟ್ ಪಂದ್ಯವನ್ನು ಬರೋಬ್ಬರಿ 423 ರನ್ನುಗಳ ಅಗಾಧ ಅಂತರದಿಂದ ಗೆದ್ದಿರುವ ಕಿವೀಸ್, ವೇಗಿ ಟಿಮ್ ಸೌಥಿಗೆ ಶುಭ ವಿದಾಯವೊಂದನ್ನು ಹೇಳಿತು. ಜತೆಗೆ ವೈಟ್ವಾಶ್ ಸಂಕಟದಿಂದಲೂ ಪಾರಾಯಿತು. ಆದರೆ ಇಂಗ್ಲೆಂಡ್ 2-1 ಅಂತರದಿಂದ ಸರಣಿ ಗೆದ್ದು “ಕ್ರೋವ್-ಥೋರ್ಪ್ ಟ್ರೋಫಿ’ಯನ್ನು ತನ್ನದಾಗಿಸಿಕೊಂಡಿತು.
Related Articles
ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ನೊಂದಿಗೆ ನ್ಯೂಜಿಲೆಂಡ್ನ 36 ವರ್ಷದ ಬೌಲರ್ ಟಿಮ್ ಸೌಥಿ, ತಮ್ಮ 17 ವರ್ಷಗಳ ಕ್ರಿಕೆಟ್ ವೃತ್ತಿ ಬದುಕಿಗೆ ಅಂತ್ಯ ಹಾಡಿದರು. ಕಿವೀಸ್ ಪರ 107 ಟೆಸ್ಟ್ ಪಂದ್ಯಗಳಲ್ಲಿ 391 ವಿಕೆಟ್, 161 ಏಕದಿನ ಪಂದ್ಯಗಳಲ್ಲಿ 221 ವಿಕೆಟ್ ಮತ್ತು 125 ಅಂತಾರಾಷ್ಟ್ರೀಯ ಟಿ20ಯಲ್ಲಿ 164 ವಿಕೆಟ್ ಸಾಧನೆ ಸೌಥಿ ಹೆಸರಿನಲ್ಲಿದೆ.
Advertisement
ಸಂಕ್ಷಿಪ್ತ ಸ್ಕೋರ್:ನ್ಯೂಜಿಲೆಂಡ್-347 ಮತ್ತು 453. ಇಂಗ್ಲೆಂಡ್-143 ಮತ್ತು 234 (ಬೆಥೆಲ್ 76, ರೂಟ್ 54, ಸ್ಯಾಂಟ್ನರ್ 85ಕ್ಕೆ 4, ಸೌಥಿ 34ಕ್ಕೆ 2). ಪಂದ್ಯಶ್ರೇಷ್ಠ: ಮಿಚೆಲ್ ಸ್ಯಾಂಟ್ನರ್ ಸರಣಿಶ್ರೇಷ್ಠ: ಹ್ಯಾರಿ ಬ್ರೂಕ್