Advertisement

ಪೌಷ್ಠಿಕ ಆಹಾರಕ್ಕೆ ಕನ್ನ : ಮಿಂಚಿನ ದಾಳಿ

04:44 PM Oct 07, 2021 | Team Udayavani |

ಜೇವರ್ಗಿ: ಕ್ಷೀರಭಾಗ್ಯ ಯೋಜನೆಯಡಿ ಅಂಗನವಾಡಿ ಮಕ್ಕಳಿಗೆ ನೀಡಲಾಗುತ್ತಿದ್ದ ಪೌಷ್ಟಿಕ ಆಹಾರಕ್ಕೆ ಕನ್ನ ಹಾಕಿ ಕಳ್ಳಸಾಗಣೆ ಮಾಡುತ್ತಿದ್ದ ವಾಹನವನ್ನು ಪೊಲೀಸರು ಜಪ್ತಿ ಮಾಡಿಕೊಂಡ ಘಟನೆ ಮಂಗಳವಾರ ತಡರಾತ್ರಿ ತಾಲೂಕಿನ ಸೊನ್ನ ಕ್ರಾಸ್‌ ಬಳಿ ನಡೆದಿದೆ.

Advertisement

ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಮಳಿಗೆಯೊಂದರಿಂದ ಮಹಾರಾಷ್ಟ್ರದ ಉಮರ್ಗಾಕ್ಕೆ ಸಾಗಿಸಲಾಗುತ್ತಿದ್ದ ಸುಮಾರು 7.13 ಲಕ್ಷ ರೂ. ಮೌಲ್ಯದ ಪೌಷ್ಟಿಕ ಆಹಾರ ಹಾಗೂ ವಾಹನ ವಶಪಡಿಸಿಕೊಳ್ಳಲಾಗಿದೆ. 2,300 ಅರ್ಧ ಕೆ.ಜಿ ಹಾಲಿನ ಪುಡಿ ಪಾಕೇಟ್‌ಗಳು, ಒಂದು ಕೆ.ಜಿಯ 200 ಪಾಕೇಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಖಚಿತ ಮಾಹಿತಿ ಮೇರೆಗೆ ನೆಲೋಗಿ ಪಿಎಸ್‌ಐ ರಾಜಕುಮಾರ ಜಾಮಗೊಂಡ, ಅಪರಾಧ ವಿಭಾಗದ ಪಿಎಸ್‌ಐ ಬಸವರಾಜ, ಎಎಸೈ ಗುರುಬಸ್ಸು, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಂಗನಗೌಡ ಪಾಟೀಲ ಗುಂದಗಿ ತಾಲೂಕಿನ ಸೊನ್ನ ಕ್ರಾಸ್‌ ಬಳಿ ಮಿಂಚಿನ ದಾಳಿ ನಡೆಸಿ, ಮಾಲು ಸಮೇತ ವಾಹನ ವಶಪಡಿಸಿಕೊಂಡಿದ್ದಾರೆ. ಸಿಡಿಪಿಒ ಸಂಗನಗೌಡ ಪಾಟೀಲ ದೂರಿನ ಮೇರೆಗೆ ನೆಲೋಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next