Advertisement

ಬಬಲೇಶ್ವರದಲ್ಲಿ ಬೀಜದುಂಡೆ ತಯಾರಿಕೆ

03:32 PM May 26, 2017 | Team Udayavani |

ಆಳಂದ: ಸಸ್ಯ, ಗಿಡ, ಮರ ಹಾಗೂ ಪರಿಸರದ ಕಾಳಜಿ ಹೊಂದಿ ಅರಣ್ಯ ಇಲಾಖೆಯೊಂದಿಗೆ ನಾಗರಿಕರು ಕೈಜೋಡಿಸಿದರೆ ಮಾತ್ರ ನೆಟ್ಟ ಮರ, ಗಿಡ, ಸಸ್ಯಗಳು ಉಳಿದು ಹೆಮ್ಮರವಾಗಿ ಪರಿಸರಕ್ಕೆ ಉಪಯೋಗವಾಗಿ ಜೀವ ಸಂಕುಲಕ್ಕೆ ಅನುಕೂಲವಾಗುತ್ತದೆ ಎಂದು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಸ್‌. ಹಿರೇಮಠ ಹೇಳಿದರು. 

Advertisement

ತಾಲೂಕಿನ ಬಬಲೇಶ್ವರ ಗ್ರಾಮದಲ್ಲಿನ  ಸಾಮಾಜಿಕ ವಲಯ ಅರಣ್ಯ ಇಲಾಖೆಯ ಸಸ್ಯ ಕ್ಷೇತ್ರದಲ್ಲಿನ ಕಾಮಗಾರಿ ಪರಿಶೀಲನೆ ಹಾಗೂ ಬೀಜದುಂಡೆ ತಯಾರಿಕೆ ಕಾರ್ಯ ವೀಕ್ಷಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲೇ ಆಳಂದ ತಾಲೂಕಿನಲ್ಲಿ ಉದ್ಯೋಗ ಖಾತ್ರಿ ಕಾಮಗಾರಿಯಲ್ಲಿ ಅರಣ್ಯಕಾಮಗಾರಿ ಉತ್ತಮವಾಗಿ ನಡೆದಿದೆ.

79 ಸಾವಿರ ಮಾನವ ದಿನಗಳ ಕೆಲಸ ನಡೆದಿದೆ. ನೆಟ್ಟ ಗಿಡಗಳಿಗೆ ಮಳೆಯಿಲ್ಲದ ಹೊತ್ತಿನಲ್ಲಿನ ನೀರುಣಿಸಲು ಹೈ. ಕ.ಪ್ರದೇಶ ಅಭಿವೃದ್ಧಿಯಿಂದ ಪ್ರತಿ ತಾಲೂಕಿಗೆ ಒಂದು ಟ್ಯಾಂಕರ್‌ ನೀಡುವಂತೆ ಪ್ರಸ್ತಾವನೆ ಕೋರಲಾಗಿದೆ. ಇಲ್ಲವಾದಲ್ಲಿ ಸಸ್ಯ ಕ್ಷೇತ್ರದಲ್ಲಿ ಆರೇಳು ಅಡಿ ಎತ್ತರ ಬೆಳೆಸಿದ ಸಸಿಗಳು ಹಾಳಾಗಿ ಹೋಗುತ್ತವೆ ಎಂದರು. 

ಜನರಲ್ಲಿ ಸಸ್ಯದ ಅರಿವು ಮತ್ತು ಕಾಳಜಿ ಅಗತ್ಯವಾಗಿದೆ. ಸುಮಾರು 8 ತಿಂಗಳ ಕಾಲ ಎತ್ತರವಾಗಿ ಬೆಳೆಸಿದ ಸಸಿ ನಾಗರಿಕರ ಕೈಗೆ ಕೊಟ್ಟ ಮೇಲೆ ಅವುಗಳನ್ನು ಬೆಳೆಯುವಂತೆ ಮಾಡಬೇಕು. ಒಣಗಿ ಹೋದರೆ ಇಲಾಖೆ ಶ್ರಮವೆಲ್ಲ ಹಾಳಾಗುತ್ತದೆ. ಪ್ರತಿ ಗ್ರಾಮಮಟ್ಟದಲ್ಲಿ ಪರಿಸರ ಸಮಿತಿ ರಚಿಸಿ ಮೇಲ್ವಿಚಾರಣೆ ಮಾಡುವ ಕುರಿತು ಜಾಗೃತಿ ಕಾರ್ಯ ಆಗಬೇಕಾಗಿದೆ.

ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ವಿವಿಧ ರೀತಿಯ ಬೀಜಗಳನ್ನು ಮಣ್ಣು ಮತ್ತು ತಿಪ್ಪೆಗೊಬ್ಬರ ಮಿಶ್ರಿತವಾಗಿ ಬೀಜದುಂಡೆ ತಯಾರಿಸಿ ಮಳೆಬಂದಾಗ ಬದುಗಳಲ್ಲಿ ಇಡಲಾಗುವುದು. ಇದರಿಂದ ಖರ್ಚಿನ ಉಳಿತಾಯ ಜೊತೆಗೆ ಶಾಲಾ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡುತ್ತದೆ ಎಂದರು. 

Advertisement

ಸಹಾಯಕ ಉಪ ಸಂರಕ್ಷಣಾಧಿಕಾರಿ ಆರ್‌. ಆರ್‌. ಯಾದವ್‌ ಮಾತನಾಡಿ, ಈಗಾಗಲೇ ಭೂಸನೂರ ಅರಣ್ಯ ಪ್ರದೇಶದಲ್ಲಿ ಉದ್ಯೋಗ ಖಾತ್ರಿ ಅಡಿ ತೆಗೆಯಲಾದ ಟ್ರಂಚ್‌ನಲ್ಲಿ ಬೀಜದುಂಡೆ ಇಡಲಾಗುವುದು. ಇಲ್ಲಿ ನೀರು ಇಂಗುತ್ತದೆ, ಮಣ್ಣು ಸರಂಕ್ಷಣೆ ಆಗುತ್ತದೆ, ಮತ್ತೆ ಮರ ಬೆಳೆದರೆ ನೆರಳು, ಹಣ್ಣು ಕೊಡುವ ಬೀಜಗಳನ್ನು ಬೀಜದುಂಡೆ ಮೂಲಕ ಆಯ್ಕೆ ಮಾಡಿದ ಜಾಗದಲ್ಲಿ ಕೃಷಿ ಮಾಡಲಾಗುತ್ತಿದೆ.

ಮುಂಗಾರು ಹಂಗಾಮಿನಲ್ಲಿ ಸಸ್ಯಗಳು ಮತ್ತು ಬೀಜದುಂಡೆಗಳನ್ನು ನಾಗರಿಕರಿಗೆ ಮತ್ತು ರೈತರಿಗೆ ವಿತರಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು. ಉದ್ಯೋಗ ಖಾತ್ರಿ ಯೋಜನೆ ಸಹಾಯಕ ಪ್ರಭಾರಿ ನಿರ್ದೇಶಕರು ಆಗಿರುವ ಸಾಮಾಜಿಕ ವಲಯ ಅರಣ್ಯಾಧಿಕಾರಿ ರೇವಣಸಿದ್ಧ ತಾವರಖೇಡ ಮಾತನಾಡಿ,

-ಬೀಜದುಂಡೆ ತಯಾರಿಕೆ ಮತ್ತು ಕ್ಷೇತ್ರದಲ್ಲಿ ಬೆಳೆಸಿದ ಸಸ್ಯಗಳ ಕುರಿತು ಮಾಹಿತಿ ನೀಡಿದರು. ಉದ್ಯೋಗ ಖಾತ್ರಿ ಜಿಲ್ಲಾ ಉಪ ನಿರ್ದೇಶಕ ಅಂಕುಶ ಪಾಂಡೆ, ಉಪವಲಯ ಅರಣ್ಯಾಧಿಕಾರಿ ವಿರೇಂದ್ರ ಯಳವಂತಗಿ, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಪೂಜಾರಿ ಹಾಜರಿದ್ದರು.   

Advertisement

Udayavani is now on Telegram. Click here to join our channel and stay updated with the latest news.

Next