Advertisement
ಪ್ರತೀ ಬಾರಿ ಮೇ ತಿಂಗಳ ಆರಂಭ ದಲ್ಲಿ ರಸ ಹೀರುವ ಕೀಟಗಳು ಸಂತಾನಾಭಿವೃದ್ಧಿ ಮಾಡಿ ಎಳೆ ಅಡಿಕೆಯ ರಸ ಹೀರುತ್ತಿದ್ದವು.
ಇದು ಎಳೆ ಅಡಿಕೆಯ ರಸ ಹೀರುವ ಕೀಟ. ಇದಕ್ಕೆ ಉದ್ದನೆಯ ಚೂಪಾದ ಬಾಯಿಯ ಅಂಗವಿದ್ದು, ಎಳೆ ಅಡಿಕೆಯೊಳಕ್ಕೆ ತೂರಿಸಿ ರಸ ಹೀರುತ್ತದೆ. ಒಂದು ತಿಗಣೆಯು ಒಂದು ದಿನಕ್ಕೆ ಒಂದು ಎಳೆ ಅಡಿಕೆಯಿಂದ ಮಾತ್ರ ರಸ ಹೀರಬಲ್ಲುದು. ಇದರಿಂದ ಎಳೆ ಅಡಿಕೆ ಸತ್ವಹೀನವಾಗಿ 2-3 ದಿನಗಳಲ್ಲಿ ಉದುರುತ್ತದೆ. ಸಾಮಾನ್ಯವಾಗಿ ಮಾರ್ಚ್-ಆಗಸ್ಟ್ ತಿಂಗಳಲ್ಲಿ ಪೆಂಟಟೊಮಿಡ್ ತಿಗಣೆಯು ಹಾನಿ ಮಾಡುತ್ತದೆ.
Related Articles
Advertisement
ಕೀಟ ನಿಯಂತ್ರಣ ಕ್ರಮಈ ಬಾರಿ ಹಲವು ತೋಟಗಳಲ್ಲಿ ಈಗಾಗಲೇ ಪೆಂಟಟೊಮಿಡ್ ತಿಗಣೆ ಪಸರಿಸಿರುವುದು ಬೆಳಕಿಗೆ ಬಂದಿದೆ. ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿದರೆ ಉತ್ತಮ. ಮಳೆ ಹೆಚ್ಚಾದ ಬಳಿಕ ಈ ಕೀಟದ ಬಾಧೆ ಕಡಿಮೆಯಾಗುತ್ತದೆ. ಇದರ ನಿವಾರಣೆಗೆ ಬಳಸುವ ಕೀಟನಾಶಕದ ಪ್ರಮಾಣ ಹೆಚ್ಚಾಗಬಾರದು ಮತ್ತು ಸಿಂಪಡಣೆ ಮಾಡುವಾಗ ಜಾಗರೂಕರಾಗಿರಬೇಕು. ಎತ್ತರಕ್ಕೆ ಔಷಧ ಸಿಂಪಡಣೆ ಮಾಡುವುದರಿಂದ ನಮ್ಮ ದೇಹ ಮತ್ತು ನೀರಿನ ಮೂಲಗಳ ಮೇಲೆ ಬೀಳುವ ಸಾಧ್ಯತೆ ಹೆಚ್ಚು. ನಿರ್ವಹಣೆ ಅಗತ್ಯ
ಮುಂಗಾರು ಪೂರ್ವದಲ್ಲಿ ಬಿದ್ದ ಕಾಯಿಗಳನ್ನು ಗಮನಿಸುತ್ತಿರಬೇಕು. ಎಳೆ ಅಡಿಕೆ ಬಿದ್ದ ಮರ ಮತ್ತು ಸುತ್ತಮುತ್ತಲಿನ ಮರಗಳಿಗೆ ಸಿಂಪಡಣೆ ಮಾಡಿದರೆ ಪ್ರಾಥಮಿಕ ಹಂತದಲ್ಲಿಯೇ ಕೀಟಬಾಧೆಯನ್ನು ಹತೋಟಿಗೆ ತರಬಹುದು. ನಳ್ಳಿ ಉದುರಲು ಹಲವು ಕಾರಣಗಳು ಇರುವುದರಿಂದ ಬಿದ್ದ ನಳ್ಳಿಗಳ ಲಕ್ಷಣಗಳನ್ನು ನೋಡಿ ಪೆಂತಿ ಕೀಟದ ನಿರ್ವಹಣೆ ಮಾಡಬೇಕು. ಹಿಂದೆ ಪೆಂಟಟೋಮಿಡ್ ಕೀಟದ ಬಾಧೆ ಎಪ್ರಿಲ್ ತಿಂಗಳಲ್ಲಿ ಕಡಿಮೆ ಇದ್ದು, ಅನಂತರ ಹೆಚ್ಚಾಗುತ್ತಿತ್ತು. ಈ ವರ್ಷ ಎಪ್ರಿಲ್‌ನಲ್ಲಿಯೇ ಹೆಚ್ಚಿರುವ ಬಗ್ಗೆ ಬೆಳೆಗಾರರು ಮಾಹಿತಿ ನೀಡುತ್ತಿದ್ದಾರೆ. ಸಮಸ್ಯೆ ಕಂಡ ಕೂಡಲೇ ಬೇವಿನ ಎಣ್ಣೆ, ಸೋಪ್ ಅಥವಾ ನಿಂಬಿಸಿಡಿನ್ ಅನ್ನು ಒಂದು ಲೀ. ನೀರಿಗೆ 5 ಮಿ.ಲೀ.ನಂತೆ ಬೆರೆಸಿ ಸಿಂಪಡಿಸಬೇಕು. ಹೆಚ್ಚಿನ ಸಮಸ್ಯೆ ಇದ್ದರೆ ಮಾತ್ರ ಕ್ಲೊತಿಯನಿದಿನ್ (ಒಂದು ಲೀ. ನೀರಿಗೆ 0.25 ಗ್ರಾಂ) ಸಿಂಪಡಿಸಬಹುದು. ಪ್ರಾರಂಭಿಕ ಹಂತದಲ್ಲೇ ರಸ ಹೀರಿದ ಚಿಹ್ನೆ ಗಮನಿಸಿ, ಹಸುರು ನಳ್ಳಿ ಉದುರಿದ ಮತ್ತು ಸುತ್ತಲಿನ ಮರಗಳಿಗೆ ಔಷಧ ಸಿಂಪಡಿಸಬಹುದು. ಕೀಟವನ್ನು ನೈಸರ್ಗಿಕವಾಗಿ ನಿಯಂತ್ರಿಸುವ ಇತರ ಕೀಟಗಳು ಅಡಿಕೆ ಕೃಷಿ ಪ್ರದೇಶದಲ್ಲಿ ಇರುವ ಕಾರಣ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ರಾಸಾಯನಿಕ ಕೀಟನಾಶಕ ಬಳಸಬೇಕು. ಅವುಗಳಿಗೆ ತೊಂದರೆಯಾದರೆ ದೀರ್ಘಕಾಲದಲ್ಲಿ ಹೊಸ ಸಮಸ್ಯೆಗಳು ಹುಟ್ಟಿಕೊಳ್ಳಬಹುದು.
-ಡಾ| ಭವಿಷ್ಯ ವಿಜ್ಞಾನಿ, ಸಿಪಿಸಿಆರ್‌ಐ, ವಿಟ್ಲ