Advertisement

Actress: ಇಸ್ರೇಲ್‌ನಲ್ಲಿ ಸಿಲುಕಿಕೊಂಡಿದ್ದ ನಟಿ ನುಶ್ರತ್ ಕೊನೆಗೂ ಭಾರತದತ್ತ: ಆಗಿದ್ದೇನು?

11:08 AM Oct 08, 2023 | Team Udayavani |

ನವದೆಹಲಿ: ಯುದ್ಧಪೀಡಿತ ಇಸ್ರೇಲ್‌ ನಲ್ಲಿ ಸಿಲುಕಿಕೊಂಡಿದ್ದ ಬಾಲಿವುಡ್‌ ನಟಿ ನುಶ್ರತ್ ಭರುಚ್ಚಾ ಸುರಕ್ಷಿತವಾಗಿ ಭಾರತಕ್ಕೆ ಮರಳಲು ವಿಮಾನ ಹತ್ತಿದ್ದಾರೆ.

Advertisement

ಆಗಿದ್ದೇನು?:  ಬಾಲಿವುಡ್ ನಟಿ ನುಶ್ರತ್ ಭರುಚ್ಚಾ ಅವರು ಇಸ್ರೇಲ್‌ನಲ್ಲಿ ಸಿಲುಕಿಕೊಂಡಿದ್ದರ ಬಗ್ಗೆ ನಟಿಯ ಸದಸ್ಯರ ಹೇಳಿದ್ದರು. ನಟಿ ನುಶ್ರತ್‌ ಹೈಫಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಲು ಇಸ್ರೇಲ್‌ ತೆರಳಿದ್ದರು. ದುರದೃಷ್ಟವಶಾತ್ ಇಸ್ರೇಲ್‌ನಲ್ಲಿ ನುಶ್ರತ್ ಸಿಲುಕಿಕೊಂಡಿದ್ದಾರೆ. ಇವತ್ತು ಮಧ್ಯಾಹ್ನ( ಶನಿವಾರ, ಅ.7 ರಂದು) 12:30ರ ವೇಳೆಗೆ ಅವಳ ಬಳಿ ಕೊನೆಯ ಬಾರಿ ಮಾತನಾಡಿದ್ದೆ. ಆ ಬಳಿಕ ಅವರ ಸಂಪರ್ಕ ಸಾಧ್ಯವಾಗಿಲ್ಲ. ನಾನು ಕರೆ ಮಾಡಿದ್ದ ವೇಳೆ ಅವರು ಸುರಕ್ಷಿತ ಸ್ಥಳದಲ್ಲಿದ್ದರು. ಆ ಬಳಿಕ ಸಂಪರ್ಕ ಸಾಧ್ಯವಾಗಿಲ್ಲ. ನಾವು ನುಶ್ರತ್‌ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರುವ ಪ್ರಯತ್ನ ಮಾಡುತ್ತಿದ್ದೇವೆ. ಯಾವುದೇ ಅಪಾಯಕ್ಕೆ ಸಿಲುಕದೆ ಅವರು ಹಿಂತಿರುಗುತ್ತಾರೆ ಎಂದು ಭಾವಿಸುತ್ತೇವೆ” ಎಂದು ನಟಿಯ ತಂಡದ ಸದಸ್ಯ ಹೇಳಿದ್ದರು.

ಇದೀಗ ನಟಿ ನುಶ್ರತ್ ಭರುಚ್ಚ ಅವರ ಸಂಪರ್ಕಿಸಿದ್ದು, ನಟಿ ಇಸ್ರೇಲ್ ವಿಮಾನ ನಿಲ್ದಾಣವನ್ನು ತಲುಪಿದ್ದಾರೆ ಎಂದು ತಿಳಿದುಬಂದಿದೆ. ಅವರು ಶೀಘ್ರದಲ್ಲೇ ಭಾರತಕ್ಕೆ ಮರಳಲಿದ್ದಾರೆ

ಹಬ್ಬದ ಸಂದರ್ಭದಲ್ಲಿ ಹಮಾಸ್‌ ಬಂಡುಕೋರರು 5,000ಕ್ಕೂ ಅಧಿಕ ರಾಕೆಟ್‌ ದಾಳಿಯನ್ನು ಇಸ್ರೇಲ್‌ ಮೇಲೆ ನಡೆಸಿದ ಪರಿಣಾಮ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕಾರವಾಗಿ ಇಸ್ರೇಲ್‌ ಕೂಡ ಪ್ಯಾಲೆಸ್ತೇನ್‌ ಮೇಲೆ ದಾಳಿ ನಡೆಸಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next