Advertisement
ಅದು 1854 ನೇ ಇಸವಿ, ಅಕ್ಟೋಬರ್ ತಿಂಗಳ 21ನೇ ದಿನ. ತನ್ನೊಂದಿಗೆ ತನ್ನಂತಹ ತ್ಯಾಗ ಮನೋ ಭಾವದ 38 ಜನ ಯುವತಿಯರೊಂದಿಗೆ ಇಟಲಿಯ ಕುಲೀನ, ಶ್ರೀಮಂತ ಮನೆತನದ ಯುವತಿಯೊಬ್ಬಳು ಯುದ್ಧಭೂಮಿಯೆಡೆಗೆ ಹೊರಟು ನಿಂತಿದ್ದಳು. ಮನೆಯ ವರ ಪ್ರತೀರೋಧದ ನಡುವೆಯೂ ಸುಖ, ಸಂತೋಷ, ಸೌಲಭ್ಯ, ಮದುವೆ, ವೈಯಕ್ತಿಕ ಬದುಕು ಎಲ್ಲವನ್ನೂ ತ್ಯಾಗ ಮಾಡಿ, ಶುಶ್ರೂಷಕಿಯಾಗಬೇಕೆಂದು ಆಕೆ ನಿರ್ಧರಿಸಿದ್ದಳು. ಆಕೆಯೇ ವೈದ್ಯಕೀಯ ಇತಿಹಾಸ ದಲ್ಲಿ ತನ್ನದೇ ಆದ ಶುಶ್ರೂಷಾ ಪದ್ಧತಿಗಳಿಂದ ಹೊಸ ಮಾರ್ಗೋಪಾಯಗಳನ್ನು ರೂಪಿಸಿದ ಮಹಾನ್ ಚೇತನ, “ದೀಪದ ಮಹಿಳೆ’ ಎಂದೇ ಪ್ರಸಿದ್ಧಿ ಪಡೆದು “ಫ್ಲೋರೆ®Õ… ನೈಟಿಂಗೇಲ್’. ಆಕೆಯೇ ವೈದ್ಯಕೀಯ ಕ್ಷೇತ್ರದ ಮೊದಲ ಶುಶ್ರೂಷಕಿ.
ಅಂಥದರಲ್ಲಿ ಸ್ಕಾಟಾರ್ ಎಂಬ ಸ್ಥಳದಲ್ಲಿ ಇದ್ದ ಗಾಯಾಳುಗಳ ಸೇವೆಗೆ ಸಿಡ್ನಿ ಹರ್ಬರ್ಟ್ ಎಂಬ ಬ್ರಿಟಿಷ್ ಅಧಿಕಾರಿ, “ಫ್ಲೋರೆನ್ಸ್ ನೈಟಿಂಗೆಲ್’ಳನ್ನು ಆಹ್ವಾನಿಸಿದ. ವಿಚಿತ್ರವೆಂದರೆ, ವೈದ್ಯಕೀಯ ಇತಿಹಾಸದಲ್ಲಿ ಅದೊಂದು ಮಹತ್ವದ ಬೆಳವಣಿಗೆಗೆ ದಾರಿ ಮಾಡಲಿದೆ ಎಂಬುದು ಆತನಿಗೂ ಗೊತ್ತಿರಲಿಲ್ಲ. ಹೀಗೆ ಯುದ್ಧ ಗಾಯಾಳುಗಳ ಸೇವೆಗೆ ಅವಳು ಹೊರಟು ನಿಂತಾಗ ತನ್ನ ಜೀವನದ ಗುರಿ ಏನೆಂಬುದನ್ನು ನಿರ್ಧರಿಬಿಟ್ಟಿದ್ದಳು. ಆಗ ಅವಳಿಗೆ 34 ವರ್ಷ( ಜನನ 1820). ತನಗೆ ತಿಳಿವಳಿಕೆ ಬಂದಾಗಿನಿಂದಲೂ ಮಾನವ ಕಲ್ಯಾಣಕ್ಕಾಗಿ ಏನನ್ನಾದರೂ ಮಾಡಬೇಕೆಂದು ಮನಸಿಟ್ಟು, ತಾನು ಕಲಿತ ಅಂಕಿ ಸಂಖ್ಯಾಶಾಸ್ತ್ರದ ತರಬೇತಿಯನ್ನು ಬಿಟ್ಟು ನರ್ಸಿಂಗ್ ಕಲಿಯಲು ಮುಂದಾಗಿದ್ದಳು. ಆಗಿನ ದಿನಗಳಲ್ಲಿ ಕುಲೀನ ಮಹಿಳೆಯರು ಶುಶ್ರೂಷಕಿಯರಾಗಲು ಸಾಮಾಜಿಕ ನಿರ್ಬಂಧವಿದ್ದರೂ ಅವಳು ಅದನ್ನೆಲ್ಲ ಧಿಕ್ಕರಿಸಿ ನರ್ಸಿಂಗ್ ತರಬೇತಿಗೆ ಹಾಜರಾದಳು. ನರ್ಸಿಂಗ್‌ನಲ್ಲಿ ಅಪಾರ ಶ್ರದ್ಧೆ ಹೊಂದಿದ ಅವಳು ಶಿಕ್ಷಕರ ಪ್ರೀತಿ ಪಾತ್ರ ವಿದ್ಯಾರ್ಥಿನಿಯಾಗುವುದು ಸುಲಭವಾಯಿತು. ಇದನ್ನು ಮೊದಲೇ ಅರಿತಿದ್ದ ಸಿಡ್ನಿ ಹರ್ಬರ್ಟ್ ಅವಳನ್ನು ಆಹ್ವಾನಿಸಿದ್ದ.
Related Articles
***
ಕೋವಿಡ್ ಹೆಮ್ಮಾರಿ ತನ್ನ ಎರಡನೆಯ ಅಲೆಯಿಂದ ಭಯಂಕರವಾಗಿ ಅಪ್ಪಳಿಸುತ್ತಿರುವ ಈ ದಿನಗಳಲ್ಲಿ ದಾದಿಯರ ಸೇವೆಯನ್ನು ನಾವಿಂದು ಮರುನೆನಪಿಸಲು ಈ ದಿನಕ್ಕಿಂತ ಇನ್ನೊಂದಿಲ್ಲ. ಆರೋಗ್ಯ ಸಹಾಯಕಿ ಯರಾಗಿ, ಸ್ಟಾಫ್ ನರ್ಸ್ ಗಳಾಗಿ ಅವರ ಸೇವೆ ಎಲೆಮ ರೆಯ ಕಾಯಂತೆ. ಒಂದೊಂದು ರೋಗಿಯೂ ಕೂಡ ಕೊರೊನಾವಾಹಕ ನಾಗಿರುವ ಈ ಸಂದರ್ಭದಲ್ಲಿ ಅವರ ಧೈರ್ಯ, ಸ್ಥೈರ್ಯ, ತ್ಯಾಗವನ್ನು ನಾವು ಮೆಚ್ಚ ಬೇಕಿದೆ. ರೋಗಿಗಳ ಶುಶ್ರೂಷೆಗಾಗಿ ತಮ್ಮ ಜೀವವನ್ನೇ ಮುಡಿಪಾಗಿಟ್ಟಿರುವ ಅವರಿಗೆ ನಾವೆಲ್ಲ ಕೃತಜ್ಞರಾಗಿ ರಬೇಕು. ತಮ್ಮ ಮೈಗಂಟಿದ ವೈರಸ್ ಮನೆಯವರಿಗೆ ಬರದಿರಲೆಂದು ಅನೇಕ ದಿನಗಳು ತಮ್ಮವರಿಂದ ದೂರ ಉಳಿದವರೆಷ್ಟೊ ಜನ ಶುಶ್ರೂಷಕ/ಶುಶ್ರೂಷಕಿಯರನ್ನು ನಾವು ಕಂಡಿದ್ದೇವೆ. ಬರೀ ಒಂದಿಷ್ಟು ಸಂಬಳಕ್ಕಾಗಿ ಕಣ್ಣಿಗೆ ಕಾಣದ ವೈರಿಯ ಜತೆ ಸೆಣಸುವ ಆವಶ್ಯಕತೆ ಇದೆಯೇ? ಮನಸು ಮಾಡಿದರೆ ಜೀವನೋಪಾಯಕ್ಕೆ ಬೇರೆ ಕೆಲಸ ಸಿಕ್ಕೀತು, ಆದರೆ ಗುಣವಾದ ರೋಗಿಯ ಮುಖದ ಮೇಲೆ ಮೂಡುವ ಸಂತಸದ ಕೃತಜ್ಞತೆಯ ಭಾವ ಕಾಣಬೇಕೆಂದರೆ ಶುಶ್ರೂಷೆಯಂತಹ ಉದಾತ್ತ ವೃತ್ತಿ ಇನ್ನೊಂದಿಲ್ಲ. ಅವರಿಲ್ಲದೆ ವೈದ್ಯಕೀಯವಿಲ್ಲ. ಅವರಿಲ್ಲದೆ ಆರೋಗ್ಯವಿಲ್ಲ. ಅವರು ಮಮತೆ ತುಂಬಿದ ಮಾತೆಯಂತೆ, ವಾತ್ಸಲ್ಯ ತುಂಬಿದ ಸೋದರಿಯಂತೆ… ಅದಕ್ಕೇ ಆಸ್ಪತ್ರೆಗಳಲ್ಲಿ ನಾವು ಅವರನ್ನು “ಸಿಸ್ಟರ್’ ಎಂದು ಸಂಬೋಧಿಸುವುದು. ಹಾಗೂ ನಾನಿಲ್ಲಿ “ದೀದಿ’ ಅಂದದ್ದು..!!
Advertisement
– ಡಾ| ಶಿವಾನಂದ ಕುಬಸದ