Advertisement

ನನ್ನ ಹತ್ಯೆ ಮಾಡಿ, ಆದರೆ ಮಕ್ಕಳನ್ನ ಕೊಲ್ಲದಿರಿ : ಯೋಧರ ಎದುರು ಗೋಗರೆದ ಕ್ರೈಸ್ತ ಸನ್ಯಾಸಿನಿ

06:02 PM Mar 10, 2021 | Team Udayavani |

ಮ್ಯಾನ್ಮಾರ್ : ನನ್ನ ಪ್ರಾಣ ತೆಗೆಯಿರಿ, ಆದರೆ ಮಕ್ಕಳ ಮಾರಣ ಹೋಮ ಮಾಡದಿರಿ ಎಂದು ಕ್ರೈಸ್ತ ಸನ್ಯಾಸಿನಿಯೋರ್ವಳು ಯೋಧರ ಎದುರು ಮಂಡಿಯೂರಿ ಅಂಗಲಾಚಿರುವ ಘಟನೆ ಉತ್ತರ ಮ್ಯಾನ್ಮಾರ್ ದಲ್ಲಿ ನಡೆದಿದೆ.

Advertisement

ದೇಶದ ಆಡಳಿತ ತನ್ನ ಕೈಗೆ ತೆಗೆದುಕೊಂಡಿರುವ ಸೇನೆಯ ವಿರುದ್ಧ ಮ್ಯಾನ್ಮಾರ್ ದಲ್ಲಿ ಹಿಂಸಾಚಾರ ಮುಗಿಲು ಮುಟ್ಟಿದೆ. ಪ್ರಜಾಪ್ರಭುತ್ವ ಉಳಿಸಲು ಬೀದಿಗಿಳಿದ ನಾಗರಿಕರ ಹೋರಾಟ ಹತ್ತಿಕ್ಕಲು ಸೇನೆ ಕಸರತ್ತು ನಡೆಸಿದೆ. ಸೇನೆಯ ವಿರುದ್ಧ ಪ್ರತಿಭಟಿಸುತ್ತಿರುವವರ ವಿರುದ್ಧ ಗುಂಡಿನ ದಾಳಿ ಕೂಡ ನಡೆಸಲಾಗುತ್ತಿದೆ.

ಸೋಮವಾರ ಬೀದಿಯೊಂದರಲ್ಲಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಯೋಧರು ದಾಳಿ ನಡೆಸಿದ್ದರು. ಪ್ರತಿಭಟನಾಕಾರರನ್ನು ತೆರವುಗೊಳಿಸಲು ಗುಂಡಿನ ಪ್ರಯೋಗ ನಡೆಸಿದ್ದರು. ಈ ವೇಳೆ ಸನ್ಯಾಸಿನಿ ಆನ್ ರೋಸ್  ತವಾಂಗ್ , ನನ್ನ ಮೇಲೆ ಬೇಕಾದರೆ ಗುಂಡು ಹಾರಿಸಿ, ಆದರೆ ಮಕ್ಕಳನ್ನು ಕೊಲ್ಲಬೇಡಿ ಎಂದು ಮಂಡಿಯೂರಿ ಮನವಿ ಮಾಡಿಕೊಂಡಿದ್ದಾರೆ.

ಘಟನೆ ಬಗ್ಗೆ ಮಾಧ್ಯಮವೊಂದಕ್ಕೆ ಮಾತಾಡಿರುವ ತವಾಂಗ್, ಕ್ಲಿನಿಕ್‍ನಿಂದ ಹೊರ ಬಂದ ನನಗೆ ಬೀದಿಯಲ್ಲಿ ರಕ್ತ ಚೆಲ್ಲಾಡಿದ್ದನ್ನು ನೋಡಿ ಆಘಾತವಾಯಿತು. ಕೈಯಲ್ಲಿ ಗನ್ ಹಿಡಿದು ಪ್ರತಿಭಟನಾಕಾರರತ್ತ ನುಗ್ಗುತ್ತಿದ್ದ ಸೇನೆ ಬಳಿ ಓಡಿ ಹೋಗಿ ಬೇಡಿಕೊಂಡೆ. ಬೇಕಾದರೆ ನನ್ನ ಹತ್ಯೆ ಮಾಡಿ, ಆದರೆ ಪುಟ್ಟ ಮಕ್ಕಳ ಪ್ರಾಣ ತೆಗೆಯಬೇಡಿ ಎಂದು ಅಂಗಲಾಚಿದೆ. ಸೇನೆಯ ಹಿರಿಯ ಅಧಿಕಾರಿಗಳು ಭರವಸೆ ನೀಡೋವರೆಗೆ ನಾ ಅಲ್ಲಿಯೇ ಮಂಡಿಯೂರಿ ಕುಳಿತುಕೊಂಡೆ ಎಂದರು.

ಸೋಮವಾರ ನಡೆದ ಹಿಂಸಾಚಾರದಲ್ಲಿ ಇಬ್ಬರು ಪ್ರತಿಭಟನಾಕಾರರು ಪ್ರಾಣ ಕಳೆದುಕೊಂಡಿದ್ದಾರೆ. ಯೋಧರ ಗುಂಡಿನ ಹೊಡೆತಕ್ಕೆ ಪುಟ್ಟ ಮಗುವಿನ ತಲೆ ಛಿದ್ರವಾಗಿ, ಪ್ರಾಣ ಪಕ್ಷಿ ಹಾರಿಹೋಯಿತು. ಗಾಯಗೊಂಡ ಕೆಲವರನ್ನು ತನ್ನ ಕ್ಲಿನಿಕ್‍ಗೆ ಕರೆತಂದು ಚಿಕಿತ್ಸೆ ನೀಡಿದ್ದಾಗಿ ತವಾಂಗ್ ಹೇಳಿದ್ದಾರೆ.

Advertisement

ಸನ್ಯಾಸಿನಿ ಯೋಧರನ್ನು ಬೇಡಿಕೊಳ್ಳುತ್ತಿರುವ ವಿಡಿಯೋ ಹಾಗೂ ಫೋಟೋ ಎಲ್ಲೆಡೆ ಹರಿದಾಡುತ್ತಿದ್ದು, ಅವರ ಕಳಕಳಿಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

A nun went down on her knees in front of policemen in a northern Myanmar town and pleaded with them to stop shooting protesters against last month’s coup https://t.co/k3TwNAB0DI 1/4 pic.twitter.com/9PASCUvTTo

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next