Advertisement
ಕೋಲಾರ ತಾಲೂಕಿನಲ್ಲಿ ಉಸಿರಾಟದ ತೊಂದರೆಯಿಂದ 60 ವರ್ಷದ ಮಹಿಳೆ, 70 ವರ್ಷದ ಪುರುಷ, 48 ವರ್ಷದ ಪುರುಷ, 45 ವರ್ಷದ ಪುರುಷ, ಪಿ.15409 ಸಂಪರ್ಕದಿಂದ 2 ವರ್ಷದ ಹೆಣ್ಣುಮಗು, 33 ವರ್ಷದ ಮಹಿಳೆ, ಪಿ.21656 ಸಂಪರ್ಕದಿಂದ 23 ವರ್ಷದ ಪುರುಷ, 45 ವರ್ಷದ ಪುರುಷ ಸೋಂಕಿತರಾಗಿದ್ದಾರೆ. ಹಾಗೆಯೇ ಪಿ.21657 ಸಂಪರ್ಕದಿಂದ 39 ವರ್ಷದ ಪುರುಷ, ಪಿ.21658 ಸಂಪರ್ಕದಿಂದ 55 ಮತ್ತು 50 ವರ್ಷದ ಪುರುಷರು ಸೋಂಕಿತರಾಗಿದ್ದಾರೆ.
Related Articles
ಬಂಗಾರಪೇಟೆ: ಕೋವಿಡ್ 19 ಸೋಂಕು ದೃಢ ವಾಗಿರುವ ವಿಷಯ ತಿಳಿದು ಆರೋಗ್ಯಾಧಿ ಕಾರಿಗಳಿಂದ ತಪ್ಪಿಸಿಕೊಂಡಿದ್ದ ವ್ಯಕ್ತಿ ಯೊಬ್ಬ ರನ್ನು ಪತ್ತೆ ಮಾಡಿ ಆಸ್ಪತ್ರೆಗೆ ದಾಖಲಿಸಿರುವ ಘಟನೆ ಬನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಇತ್ತೀಚಿಗೆ ಸೋಂಕು ತಗುಲಿತ್ತು. ಈ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದ ಇದೇ ಗ್ರಾಮದ ಗಾರೆ ಕೆಲಸ ಮಾಡುತ್ತಿರುವ ವ್ಯಕ್ತಿಗೂ ಸೋಂಕು ದೃಢ ವಾಗಿದೆ.
Advertisement
ಅವರನ್ನು ಕರೆತರಲು ಆರೋಗ್ಯ ನಿರೀಕ್ಷಕರಾದ ರವಿಕುಮಾರ್, ತಂಡ ಗ್ರಾಮಕ್ಕೆ ಹೋದಾಗ ಪರಾರಿಯಾಗಿದ್ದ. ರೋಗಿಯನ್ನು ಹುಡುಕಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಲೂಕಿನಲ್ಲಿ ಇದುವರೆಗೂ 23 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು 17 ಮಂದಿ ಗುಣಮುಖ ರಾಗಿದ್ದರು, 6 ಮಂದಿ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಡಾ.ವಿಜಯಕುಮಾರಿ ಹೇಳಿದರು.