Advertisement

UN report; 2050ಕ್ಕೆ ಭಾರತದಲ್ಲಿ ವಯೋವೃದ್ಧರ ಸಂಖ್ಯೆ ದ್ವಿಗುಣ

01:11 AM Jul 22, 2024 | Team Udayavani |

ಹೊಸದಿಲ್ಲಿ: ವಿಶ್ವದ ಅತೀಹೆಚ್ಚು ಜನ ಸಂಖ್ಯೆ ಹೊಂದಿ ರುವ ದೇಶ ಭಾರತದಲ್ಲಿ 2050ಕ್ಕೆ ವಯೋವೃದ್ಧರ ಸಂಖ್ಯೆ ದ್ವಿಗುಣ ಆಗಲಿದೆ ಎಂದು UNFTA (ವಿಶ್ವಸಂಸ್ಥೆಯು ಕುಟುಂಬ ಕಲ್ಯಾಣ ಏಜೆನ್ಸಿ) ಅಂದಾಜಿಸಿದೆ. ಇದರಿಂದ ಆರೋಗ್ಯ, ಗೃಹ ಮತ್ತು ಪಿಂಚಣಿ ವಲಯದಲ್ಲಿ ಹೆಚ್ಚಿನ ಹೂಡಿಕೆ ಮಾಡುವ ಒತ್ತಡ ಸೃಷ್ಟಿಯಾಗಲಿದೆ. ವಿಶೇಷವಾಗಿ ವಯಸ್ಸಾದ ಮಹಿಳೆಯರು ಏಕಾಂಗಿಯಾಗಿ ಬದುಕುವ, ಬಡತನ ಮುಂತಾದ ಸಮಸ್ಯೆಗಳನ್ನು ಎದುರಿಸುವ ಪರಿಸ್ಥಿತಿ ಎದುರಾಗಬಹುದೆಂದು ಹೇಳಿದೆ. ದೇಶದಲ್ಲಿ 2050ಕ್ಕೆ 60 ಮತ್ತು ಅದಕ್ಕಿಂತ ಹೆಚ್ಚು ವಯಸ್ಸಾದವರ ಸಂಖ್ಯೆ 34.6 ಕೋಟಿಗೆ ಏರಿಕೆಯಾಗುವ ಅಂದಾಜಿದೆ. ಇದೇ ವೇಳೆ ಭಾರತ ಅಗತ್ಯ ಯುವ ಜನತೆಯನ್ನೂ ಹೊಂದಿರಲಿದ್ದು, 10 ರಿಂದ 19 ವರ್ಷದಗೊಳಗಿನವರ ಜನಸಂಖ್ಯೆ 25.2 ಕೋಟಿ ಇರಲಿದೆ ಎಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next