Advertisement

ಹರಿಯಾಣ ಹಿಂಸಾಚಾರ: ನುಹ್ ಹಿರಿಯ ಪೊಲೀಸ್ ಅಧಿಕಾರಿ ವರುಣ್ ಸಿಂಗ್ಲಾ ವರ್ಗಾವಣೆ

09:42 AM Aug 04, 2023 | Team Udayavani |

ಹರ್ಯಾಣ: ವಿಶ್ವ ಹಿಂದೂ ಪರಿಷತ್ ರ್ಯಾಲಿಯಲ್ಲಿ ಹಿಂಸಾತ್ಮಕ ಘರ್ಷಣೆಗಳು ಭುಗಿಲೆದ್ದ ಸಂದರ್ಭದಲ್ಲಿ ಹಿರಿಯ ಅಧಿಕಾರಿ ರಜೆಯಲ್ಲಿದ್ದರು ಎಂಬುದು ಬೆಳಕಿಗೆ ಬಂದ ಕೆಲವೇ ದಿನಗಳಲ್ಲಿ ಪೊಲೀಸ್ ವರಿಷ್ಠಾಧಿಕಾರಿ ವರುಣ್ ಸಿಂಗ್ಲಾ ಅವರನ್ನು ವರ್ಗಾವಣೆ ಮಾಡಲಾಗಿದೆ. ಗುರುವಾರ ತಡರಾತ್ರಿ ಬಿಡುಗಡೆಯಾದ ಆದೇಶ ಪ್ರತಿಯಲ್ಲಿ ಸಿಂಗ್ಲಾ ಅವರನ್ನು ಭಿವಾನಿಗೆ ಪೋಸ್ಟ್ ಮಾಡಲಾಗಿದೆ ಎಂದು ತಿಳಿಸಲಾಗಿದೆ.

Advertisement

ಐಪಿಎಸ್ ಅಧಿಕಾರಿ ನರೇಂದ್ರ ಬಿಜರ್ನಿಯಾ ಅವರಿಗೆ ನುಹ್ ನ ಹೆಚ್ಚುವರಿ ಉಸ್ತುವಾರಿಯನ್ನು ವಹಿಸಲಾಗಿದೆ.

ವರುಣ್ ಸಿಂಗ್ಲಾ ರಜೆಯಲ್ಲಿದ್ದ ಕಾರಣ ಪಲ್ವಾಲ್ ಎಸ್‌ಪಿ ಲೋಕೇಂದ್ರ ಸಿಂಗ್‌ಗೆ ರ್ಯಾಲಿಯ ಸಂದರ್ಭದ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ನುಹ್‌ನ ಹೆಚ್ಚುವರಿ ಜವಾಬ್ದಾರಿಯನ್ನು ನೀಡಲಾಯಿತು.

ನುಹ್‌ನಲ್ಲಿ ವಿಎಚ್‌ಪಿ ಮತ್ತು ಬಜರಂಗದಳ ನಡೆಸಿದ ಧಾರ್ಮಿಕ ಮೆರವಣಿಗೆಯಿಂದ ಹರಿಯಾಣದಲ್ಲಿ ಗಲಭೆ ಉಂಟಾಗಿದೆ. ಈ ಘಟನೆಯು ಗುರುಗ್ರಾಮ್, ಸೋಹ್ನಾ ಮತ್ತು ಇತರ ಪ್ರದೇಶಗಳಲ್ಲಿ ಕೋಮು ಜ್ವಾಲೆಯ ಸರಣಿಯನ್ನು ಪ್ರಾರಂಭಿಸಿತು.

ವಿಎಚ್‌ಪಿ ಮೆರವಣಿಗೆಯನ್ನು ತಡೆಯುವ ಯತ್ನದಲ್ಲಿ ನುಹ್‌ನಲ್ಲಿ ಭುಗಿಲೆದ್ದ ಘರ್ಷಣೆಯಲ್ಲಿ ಇಬ್ಬರು ಗೃಹ ರಕ್ಷಕರು ಮತ್ತು ಧರ್ಮಗುರು ಸೇರಿದಂತೆ ಆರು ಜನರು ಸಾವನ್ನಪ್ಪಿದ್ದಾರೆ. ಹಿಂಸಾಚಾರವು ಶೀಘ್ರದಲ್ಲೇ ಗುರುಗ್ರಾಮ್, ಸೋಹ್ನಾ, ಮಾನೇಸರ್ ಮತ್ತು ಇತರ ಜಿಲ್ಲೆಗಳಿಗೆ ಹರಡಿತು, ಗುಂಪು ಆಕ್ರೋಶಗೊಂಡು ವಿವಿಧ ಅಂಗಡಿಗಳು ಮತ್ತು ಸಂಸ್ಥೆಗಳನ್ನು ಸುಟ್ಟುಹಾಕಿತು. ಹಿಂಸಾಚಾರದಲ್ಲಿ ಪೊಲೀಸ್ ಕಾರುಗಳು ಸೇರಿದಂತೆ ಹಲವಾರು ಖಾಸಗಿ ವಾಹನಗಳು ಸುಟ್ಟು ಕರಕಲಾಗಿವೆ.

Advertisement

ಕೋಮು ಘರ್ಷಣೆಯ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿತು ಮತ್ತು ಹಲವಾರು ಪ್ರದೇಶಗಳಲ್ಲಿ ನಿಷೇಧಾಜ್ಞೆಗಳನ್ನು ವಿಧಿಸಿತು.

ಪೊಲೀಸರ ಪ್ರಕಾರ, ಹರಿಯಾಣದಲ್ಲಿ ನಡೆದ ಕೋಮು ಘರ್ಷಣೆಗೆ ಸಂಬಂಧಿಸಿದಂತೆ ಒಟ್ಟು 176 ಜನರನ್ನು ಬಂಧಿಸಲಾಗಿದೆ.

ಪೊಲೀಸ್ ಅಧಿಕಾರಿಯೊಬ್ಬರು ದಾಖಲಿಸಿದ ಎಫ್‌ಐಆರ್‌ನ ಪ್ರಕಾರ, ನಲ್ಹಾರ್‌ನಲ್ಲಿರುವ ಶಿವ ದೇವಾಲಯದಿಂದ ಹಿಂದೂ ರ್ಯಾಲಿ ಪ್ರಾರಂಭವಾದಾಗ ಸುಮಾರು 800-900 ಪುರುಷರ ಗುಂಪು ದಾಳಿ ನಡೆಸಿತು ಎಂದು ಇಂಡಿಯಾ ಟುಡೇ ತಿಳಿಸಿದೆ. ಪ್ರಬಲ ಗುಂಪು ‘ಪಾಕಿಸ್ತಾನ ಪರ ಘೋಷಣೆಗಳನ್ನು’ ಕೂಗಿತು ಮತ್ತು ‘ಕೊಲ್ಲುವ ಉದ್ದೇಶದಿಂದ’ ಕೋಲುಗಳು, ಕಲ್ಲುಗಳು ಮತ್ತು ಅಕ್ರಮ ಶಸ್ತ್ರಾಸ್ತ್ರಗಳೊಂದಿಗೆ ಮೆರವಣಿಗೆಯನ್ನು ತಡೆಯಲು ಪ್ರಯತ್ನಿಸಿತು ಎಂದು ಎಫ್‌ಐಆರ್ ಹೇಳಿದೆ.

ಮೂವರು ಸದಸ್ಯರ ಸಮಿತಿ ರಚನೆ
ಏತನ್ಮಧ್ಯೆ, ಹರ್ಯಾಣ ಸರ್ಕಾರವು ಕಾನೂನು ಮತ್ತು ಸುವ್ಯವಸ್ಥೆ ಮತ್ತು ಕೋಮು ಸೌಹಾರ್ದತೆಯನ್ನು ಕಾಪಾಡಲು ವೀಡಿಯೊಗಳು, ಛಾಯಾಚಿತ್ರಗಳು ಮತ್ತು ದ್ವೇಷದ ಭಾಷಣಗಳು ಸೇರಿದಂತೆ ಪ್ರಚೋದನಕಾರಿ ವಸ್ತುಗಳ ಪ್ರಸಾರವನ್ನು ತಡೆಯಲು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳನ್ನು ಮೇಲ್ವಿಚಾರಣೆ ಮಾಡುವ ಸಮಿತಿಯನ್ನು ರಚಿಸಿದೆ. ನುಹ್ ಹಿಂಸಾಚಾರಕ್ಕೆ ಉತ್ತೇಜನ ನೀಡುವಲ್ಲಿ ಸಾಮಾಜಿಕ ಮಾಧ್ಯಮ ಮಹತ್ವದ ಪಾತ್ರ ವಹಿಸಿದೆ ಎಂದು ಹರಿಯಾಣದ ಗೃಹ ಸಚಿವ ಅನಿಲ್ ವಿಜ್ ಬುಧವಾರ ಹೇಳಿದ್ದಾರೆ.

ಇದನ್ನೂ ಓದಿ: Survey Begins… ಬಿಗಿ ಭದ್ರತೆಯೊಂದಿಗೆ ಜ್ಞಾನವಾಪಿ ಆವರಣದಲ್ಲಿ ವೈಜ್ಞಾನಿಕ ಸಮೀಕ್ಷೆ ಆರಂಭ

Advertisement

Udayavani is now on Telegram. Click here to join our channel and stay updated with the latest news.

Next