Advertisement

ನವೆಂಬರ್‌ನಲ್ಲಿ ನುಗ್ಗೇಕಾಯಿ

10:24 AM Oct 10, 2017 | |

ಕಾಮಿಡಿ ಹಿನ್ನೆಲೆಯ ನುಗ್ಗೇಕಾಯಿ ಚಿತ್ರ ನವೆಂಬರ್‌ನಲ್ಲಿ ತೆರೆಕಾಣುತ್ತಿದೆ. ಪ್ರೀತಂ ಎಸ್‌ ಹೆಗಡೆ ಕಥೆ, ಚಿತ್ರಕಥೆ ಬರೆದು ನಿರ್ಮಿಸಿರುವ ಈ ಚಿತ್ರಕ್ಕೆ ಎ.ವೇಣುಗೋಪಾಲ್‌ ಆಕ್ಷ್ಯನ್‌ ಕಟ್‌ ಹೇಳಿದ್ದಾರೆ. ಸೋಶಿಯಲ್‌ ಮೀಡಿಯಾಗಳ ಪ್ರಬಾವಕ್ಕೊಳಗಾಗಿ ಈಗಿನ ಯುವಕ-ಯುವತಿಯರು ಹೇಗೆ ಹಾಳಾಗುತ್ತಿದ್ದಾರೆ ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗಿದೆ. 

Advertisement

ಮಧುಸೂದನ್‌, ಎಸ್ತರ್‌ ನರೋನಾ, ಕ್ರಿಸ್ಟಿನಾ ಜಾಯ್, ಪ್ರಮುಖ  ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಸೂರ್ಯಕಾಂತ್‌ ಹೊನ್ನಾಳಿ ಛಾಯಾಗ್ರಹಣ, ಸುರೇಶ್‌ ಬಿ.ಎಸ್‌.ವಿ ಸಾಹಿತ್ಯ ಮತ್ತು ಸಂಗೀತ, ಶಿವಪ್ರಸಾದ್‌ ಯಾದವ್‌ ಸಂಕಲನ, ಮಾದೇಶ್‌ ಮುತ್ತಪ್ಪ ಸಂಭಾಷಣೆ ಹಾಗೂ ಸಹನಿರ್ದೇಶನ, ಹೈಟ್‌ ಮಂಜು, ಮದನ್‌ ಹರಿಣಿ, ಮಹುತ್‌ ಅದ್ವಾನಿ ನ್ಯತ್ಯ ನಿರ್ದೇಶನ, ಬಾಬುಖಾನ್‌ ಕಲಾ ನಿರ್ದೇಶನವಿದೆ.

ಮಧುಸೂಧನ್‌, ಎಸ್ತರ್‌ ನರೋನಾ, ಸುಚೇಂದ್ರ ಪ್ರಸಾದ್‌, ಕ್ರಿಸ್ಟಿನ್‌ ಜಾಯ್, ಉದಿತ್‌, ಮುಕುಂದ, ಬ್ಯಾಂಕ್‌ ಜನಾರ್ಧನ್‌, ಬಿರಾದರ್‌, ನಯನ, ಜನಿಪರ್‌ ಆಂಟೋನಿ, ಶಿಲ್ಪ, ಅನುಶ್ರೀ, ಸಹನ, ಮುಂತಾದವರ ತಾರಾಬಳಗವಿದೆ.  

Advertisement

Udayavani is now on Telegram. Click here to join our channel and stay updated with the latest news.

Next