Advertisement

ಅಣು ವಿದ್ಯುತ್‌ಶಕ್ತಿ ಹೆಚ್ಚು ಸೂಕ್ತ: ವಿಜ್ಞಾನಿ ನಾಗೇಶ್‌

04:10 PM May 20, 2018 | |

ಬೆಳ್ತಂಗಡಿ: ಸಾಂಪ್ರದಾಯಿಕ ವಿದ್ಯುತ್‌ಶಕ್ತಿ ಉತ್ಪಾದನೆಯಲ್ಲಿ ಅಧಿಕ ಪ್ರಮಾಣದ್ಲಲಿ ಕ್ಲಲಿದ್ದಲು, ತೈಲ ಹಾಗೂ ಅನಿಲಗಳ ಬಳಕೆ ಆಗುವುದರಿಂದ ಉತ್ಪಾದನ ವಚ್ಚವೂ ಅಧಿಕ ಹಾಗೂ ಇಂಧನಗಳ ಕೊರತೆಯೂ ಇರುವುದರಿಂದ ಆಣು ವಿದ್ಯುತ್‌ಶಕ್ತಿ ಹೆಚ್ಚು ಸೂಕ್ತ ಎಂದು ಕಲ್ಪಕಂ ಆಣು ಸಂಶೋಧನ ಕೇಂದ್ರದ ವಿಜ್ಞಾನಿ ನಾಗೇಶ್‌ ಆಟಿಕುಕ್ಕೆ ಹೇಳಿದರು. ಅವರು ರೋಟರಿ ಕ್ಲಬ್‌ನ ಸಾಪ್ತಾಹಿಕ ಸಭೆಯಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. 

Advertisement

ಪರಮಾಣು ಶಕ್ತಿ ಉತ್ಪಾದಕ ಅಭಿವೃದ್ಧಿಶೀಲ ರಾಷ್ಟ್ರಗಳಾದ ಅಮೇರಿಕಾ, ಫ್ರಾನ್ಸ್‌, ರಷ್ಯಾ, ಚೀನಾಗಳೊಂದಿಗೆ ಭಾರತವೂ ಗುರುತರವಾದ ಸ್ಥಾನಮಾನ ಗಳಿಸಿಕೊಂಡಿದೆ. ಭಾರತದಲ್ಲಿ ಒಟ್ಟು 7 ಪರಮಾಣು ಶಕ್ತಿ ಉತ್ಪಾದನ ಸ್ಥಾವರಗಳಿದ್ದು, ದೇಶದ ಉಷ್ಣ ವಿದ್ಯುತ್‌ ಸ್ಥಾವರವು ಜಲ ವಿದ್ಯುತ್‌ ಸ್ಥಾವರಗಳ ಅನಂತರ ಗರಿಷ್ಠ ಪ್ರಮಾಣದಲ್ಲಿ ವಿದ್ಯುತ್‌ಶಕ್ತಿ ಉತ್ಪಾದಿಸುವ ಜತೆಗೆ ಕೈಗಾರಿಕ, ಕ್ಷೇತ್ರ ವೈದ್ಯಕೀಯ ಕ್ಷೇತ್ರ ಹಾಗೂ ಯುದ್ಧ ಶಸ್ತ್ರಾಸ್ತ್ರಗಳಿಗಾಗಿ ಬಳಕೆಯಾಗುತ್ತಿದೆ ಎಂದು ಹೇಳಿದರು.

ರೋಟರಿ ಅಧ್ಯಕ್ಷ ಡಾ| ಸುಧೀರ್‌ ಪ್ರಭು ಸ್ವಾಗತಿಸಿ, ಡಾ| ಪ್ರದೀಪ್‌ ನಾವೂರು ವಂದಿಸಿದರು. ನಿಯೋಜಿತ ಅಧ್ಯಕ್ಷ ಜಗದೀಶ್‌ ಪ್ರಸಾದ್‌, ನಿಯೋಜಿತ ಕಾರ್ಯದರ್ಶಿ ರಾಜೇಂದ್ರ ಕಾಮತ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next