Advertisement

ಚಿತ್ರದ ಹೆಸರೇ ಎನ್‌ಟಿಆರ್‌: ಇದು ಕನ್ನಡ ಸಿನಿಮಾ!

11:57 AM Dec 19, 2021 | Team Udayavani |

“ಎನ್‌ಟಿಆರ್‌’- ಹೀಗೊಂದು ಹೆಸರಿನ ಸಿನಿಮಾ ತಯಾರಾಗುತ್ತಿದ್ದು, ಇತ್ತೀಚೆಗೆ ಈ ಚಿತ್ರದ ಟೈಟಲ್‌ ರಿಲೀಸ್‌ ಆಗಿದೆ.ಕೆಂಪೇಗೌಡ ನಾಯಕರಾಗಿ ನಟಿಸುತ್ತಿರುವ ಈ ಸಿನಿಮಾವನ್ನು ಜಾಕಿ ನಿರ್ದೇಶಿಸುತ್ತಿದ್ದು, ಭರತ್‌ ಗೌಡ ನಿರ್ಮಿಸುತ್ತಿದ್ದಾರೆ. ನಟ ಪ್ರಜ್ವಲ್‌ ದೇವರಾಜ್‌ ಚಿತ್ರದ ಟೈಟಲ್‌ ರಿಲೀಸ್‌ ಮಾಡಿ, ಶುಭ ಕೋರಿದರು.

Advertisement

“ಕೆಂಪೇಗೌಡ ಅವರ ಜೊತೆ ನಾನು ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ಅವರು ಈಗ ಎನ್‌ ಟಿ ಅರ್‌ ಚಿತ್ರದ ಮೂಲಕ ನಾಯಕನಾಗುತ್ತಿದ್ದಾರೆ. ಕೆಂಪೇಗೌಡ ಅವರು ದೊಡ್ಡ ನಟರೊಬ್ಬರ ಹೆಸರಿನ ಚಿತ್ರದಲ್ಲಿ ಅವರು ಅಭಿನಯಿಸುತ್ತಿದ್ದು, ಅವರಷ್ಟೇ ಕೀರ್ತಿಶಾಲಿಯಾಗಲಿ ಎಂದರು.

ಇದನ್ನೂ ಓದಿ:ಚೆನ್ನೈ ತಂಡಕ್ಕೆ ಧೋನಿ ಮೊದಲ ಆಯ್ಕೆಯ ನಾಯಕನಾಗಿರಲಿಲ್ಲ: ಬದ್ರಿನಾಥ್

ನಿರ್ಮಾಪಕ ಸಾ.ರಾ.ಗೋವಿಂದುಕೂಡಾ ಚಿತ್ರಕ್ಕೆ ಶುಭಕೋರಿದರು. ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಜಾಕಿ, “ನನ್ನ ನಿರ್ದೇಶನದ ಎರಡನೇ ಚಿತ್ರವಿದು. ಮೊದಲ ನಿರ್ದೇಶನದ ಶೋಕಿವಾಲ ಚಿತ್ರ ಬಿಡುಗಡೆಯ ಹಂತದಲ್ಲಿದೆ. ಆಗಲೇ ಈ ಚಿತ್ರ ನಿರ್ದೇಶನದದ ಅವಕಾಶ ಸಿಕ್ಕಿದೆ. ಎನ್‌ ಟಿ ಆರ್‌ ಅಂದರೆ ನಮ್ಮ ತಾಲೂಕಿನ ರೂಲರ್‌ ಎಂದು. ಇದೊಂದು ಪಕ್ಕಾ ಹಳ್ಳಿ ಸೊಗಡಿರುವ ಮನೋರಂಜನಾ ಚಿತ್ರ. ಹಳ್ಳಿಯಲ್ಲಿ ನಡೆಯುವ ಜಾತ್ರೆ ಸುತ್ತಮುತ್ತಲಿನ ಕಥೆಯಾಗಿರುತ್ತದೆ. ಫೆಬ್ರವರಿ ಮೊದಲ ವಾರದಲ್ಲಿ ಚಿತ್ರೀಕರಣ ಆರಂಭವಾಗಲಿದೆ’ ಎಂದರು.

ನಾಯಕಕೆಂಪೇಗೌಡ ಕೂಡಾ ತಮ್ಮ ಸಿನಿಮಾದಕುರಿತು ಮಾತನಾಡಿದರು. ಇದೊಂದು ಪಕ್ಕ ಹಳ್ಳಿ ವಾತಾವರಣದ ಸಿನಿಮಾ. ಅಧ್ಯಕ್ಷ, ಕಿರಾತಕ ಚಿತ್ರಗಳ ಹಾಗೆ. ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದೇನೆ ಎಂದರು

Advertisement
Advertisement

Udayavani is now on Telegram. Click here to join our channel and stay updated with the latest news.

Next