ಹೈದರಾಬಾದ್ : ‘ಆರ್‌ಆರ್‌ಆರ್’ ಸ್ಟಾರ್ ಜೂನಿಯರ್ ಎನ್‌ಟಿಆರ್ ಅವ್ರು ಖ್ಯಾತ ನಿರ್ದೇಶಕ ಕೊರಟಾಲ ಶಿವ ಅವರ ಮುಂಬರುವ ಪ್ಯಾನ್-ಇಂಡಿಯಾ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ. ಅಭಿಮಾನಿಗಳೊಂದಿಗೆ ಹೊಸ ಚಿತ್ರದ ವಿಚಾರವನ್ನು ನಟ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
“ಕೊರಟಾಲ ಶಿವ ಅವರೊಂದಿಗೆ ಮತ್ತೆ ಸೆಟ್‌ಗೆ ಬಂದಿರುವುದು ಸಂತೋಷವಾಗಿದೆ!” ಎಂದು ಜೂನಿಯರ್ ಎನ್‌ಟಿಆರ್ ಅವರು ಚಿತ್ರದ ಸೆಟ್‌ಗೆ ಆಗಮಿಸಿದ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ.
ಹೆಸರಿಡದ ಚಲನಚಿತ್ರವು, ಭಾರತದ ಮರೆತುಹೋದ ಕರಾವಳಿಯಲ್ಲಿ ಹೈ-ಆಕ್ಟೇನ್ ಆಕ್ಷನ್ ಡ್ರಾಮಾವಾಗಿದೆ ಎಂದು ತಿಳಿದು ಬಂದಿದೆ. ಏಪ್ರಿಲ್ 5, 2024 ರಂದು ಬಿಡುಗಡೆಯಾಗಲಿದೆ.
ಈ ಚಿತ್ರ ಜಾನ್ವಿ ಕಪೂರ್ ಅವರ ದಕ್ಷಿಣ ಚಿತ್ರರಂಗದಲ್ಲಿ ಚೊಚ್ಚಲ ಚಿತ್ರವಾಗಿದೆ. ಎನ್‌ಟಿಆರ್ ಆರ್ಟ್ಸ್‌ನ ಹರಿಕೃಷ್ಣ ಕೆ ಮತ್ತು ಯುವಸುಧಾ ಆರ್ಟ್ಸ್‌ನ ಸುಧಾಕರ್ ಮಿಕ್ಕಿಲಿನೇನಿ ನಿರ್ಮಿಸಿರುವ ಈ ಚಿತ್ರ ಜೂನಿಯರ್ ಎನ್‌ಟಿಆರ್ ಅವರ 30 ನೇ ಚಿತ್ರ ಎನ್ನುವುದು ವಿಶೇಷ.