ಬೆಂಗಳೂರು: ಪ್ರಸಕ್ತ ವರ್ಷದಿಂದ ಪ್ರೌಢಶಾಲೆಗಳಲ್ಲಿಯೂ ರಾಷ್ಟ್ರೀಯ ಸ್ವಯಂ ಸೇವಾ ಯೋಜನೆ (ಎನ್‌ಎಸ್‌ಎಸ್) ತರಬೇತಿ ಆರಂಭಿಸಲಾಗುವುದು ಎಂದು ಯುವಜನ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಸದ್ಯ ಪಿಯುಸಿಯಿಂದ ಸ್ನಾತಕೋತ್ತರ ಪದವಿ ಕಾಲೇಜುಗಳಲ್ಲಿ ನಡೆಯುತ್ತಿದ್ದ ಎನ್‌ಎಸ್‌ಎಸ್ ತರಬೇತಿಯನ್ನು ಈ ವರ್ಷ ಪ್ರೌಢಶಾಲೆಗಳಲ್ಲಿಯೂ ಆರಂಭಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ 1 ಕೋಟಿ ರೂ. ಅನುದಾನ ಮೀಸಲಿಡಲಾಗಿದು,ª ತರಬೇತಿ ಕಾರ್ಯಕ್ರಮಗಳ ರೂಪುರೇಷೆ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.
ಈ ಬಾರಿಯ ಬಜೆಟ್‌ನಲ್ಲಿ ಎನ್‌ಎಸ್‌ಎಸ್ ಕಾರ್ಯಕ್ರಮಗಳಿಗೆ ನಿಗದಿಯಾಗಿರುವ 13.65 ಕೋಟಿ ರೂ.ಗಳನ್ನು ಸಮರ್ಪಕವಾಗಿ ಬಳಸಿಕೊಂಡು ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ. 15 ರಾಷ್ಟ್ರೀಯ ಭಾವೈಕೈತ್ಯಾ ಶಿಬಿರಗಳನ್ನು ಏರ್ಪಡಿಸಲಾಗುತ್ತದೆ. ಜೊತೆಗೆ ಎನ್‌ಎಸ್‌ಎಸ್ ಸ್ವಯಂಸೇವಕರ ಸಂಖ್ಯೆಯನ್ನು 3 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸುವ ಗುರಿ ಹಾಕಿಕೊಳ್ಳಲಾಗಿದೆ. ಅಲ್ಲದೆ 1000 ಮಂದಿ ಸಂಯೋಜನಾ ಅಧಿಕಾರಿಗಳು ಹಾಗೂ 1 ಲಕ್ಷ ಸ್ವಯಂ ಸೇವಕರಿಗೆ ತರಬೇತಿ ನೀಡಲಾಗುತ್ತದೆ. ಅದೇ ರೀತಿ ನಿಮ್ಹಾನ್ಸ್ ಆಸ್ಪತ್ರೆ ಸಹಯೋಗದೊಂದಿಗೆ “ಯುವ ಸ್ಪಂದನ’ ಹೆಸರಿನಲ್ಲಿ ವಿಶೇಷ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.
ರಾಷ್ಟ್ರೀಯ ಸೇವಾ ಯೋಜನೆ ಪ್ರಶಸ್ತಿ ಪಡೆದ ಕಾಲೇಜುಗಳು: 1ನೇ ಸ್ಥಾನ – ಮೈಸೂರು ವಿಶ್ವವಿದ್ಯಾಲಯ, ಸಂಯೋಜನಾಧಿಕಾರಿ ಡಾ. ಕೆ. ಕಾಳಚೆನ್ನೇಗೌಡ, 2ನೇ ಸ್ಥಾನ -ಬೆಂಗಳೂರು ವಿ.ವಿ, ಡಾ. ಆರ್ ಶ್ರೀನಿವಾಸ್ ಅತ್ಯುತ್ತಮ ಎನ್‌ಎಸ್‌ಎಸ್ ಘಟಕ ಹಾಗೂ ಸಂಯೋಜನಾಧಿಕಾರಿಗಳು ( ಮಹಿಳಾ ವಿಭಾಗ): ಯೆನೋಪಾಯ ವಿ.ವಿ ಮಂಗಳೂರು- ಡಾ. ಅಶ್ವಿನಿ ಎಸ್ ಶೆಟ್ಟಿ, ಎಂಎಲ್‌ಎ ಅಕಾಡೆಮಿ ಆಫ್ ಹೈಯರ್ ಲರ್ನಿಂಗ್ ಮಲ್ಲೇಶ್ವರಂ – ದ್ರಾಕ್ಷಾಯಿಣಿ , ಸರ್ಕಾರಿ ಪದವಿ ಪೂರ್ವ ಕಾಲೇಜು ಬ್ರಹ್ಮಾವರ – ಸವಿತಾ ವೈ, ಕಾಲೇಜ್ ಆಫ್ ಫಾರ್ಮಸಿ ಕೆಎಲ್‌ಇ ವಿ.ವಿ ರಾಜಾಜಿನಗರ – ಡಾ. ಮಮತಾ ಎ, ಡಾ. ಎ.ವಿ ಬಾಳಿಗಾ ಕಲಾ ಮತ್ತು ವಿಜ್ಞಾನ ಕಾಲೇಜು ಕುಮಟಾ- ಡಾ. ರೇವತಿ ಆರ್ ನಾಯಕ್, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಕೊಪ್ಪಳ- ಲಲಿತಾ ಅಂಗಡಿ .
ಪುರುಷರ ವಿಭಾಗ: ವಿಶ್ವವಿದ್ಯಾಲಯ ಕಾಲೇಜು ಹಂಪನಕಟ್ಟೆ ಮಂಗಳೂರು – ಡಾ.ದಯಾನಂದ ನಾಯಕ್, ಸರ್ಕಾರಿ ಡಿಗ್ರಿ ಕಾಲೇಜು ಸಿಂಧನೂರು ರಾಯಚೂರು-ವೆಂಕಟನಾರಾಯಣ ಮಿರಿಯಮ್, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಬೆಳಗಾವಿ – ವಿಜಯ್‌ಕುಮಾರ್ ರಂಗಪ್ಪ ಬಡಿಗೇರ, ಕೊಂಗಾಡಿಯಪ್ಪ ಕಾಲೇಜು ದೊಡ್ಡಬಳ್ಳಾಪುರ- ಚಂದ್ರಪ್ಪ, ಜಿ.ಕೆ.ವಿ.ಕೆ ಬೆಂಗಳೂರು -ಡಾ. ಮುತ್ತುರಾಜು, ಆರ್, ಶ್ರೀ ಶಂಕರ ಕಲಾ ಮತ್ತು ವಾಣಿಜ್ಯ ಕಾಲೇಜು ನವಲಗುಂದ- ಪ್ರೊ.ರಮೇಶ್ ಪಿ. ಚವ್ಹಾಣ್.
ಸ್ವಯಂಸೇವಕಿಯರು: ಮೇಘನಾ ಎನ್- ಶ್ರೀ ಕೃಷ್ಣ ಡಿಗ್ರಿ ಕಾಲೇಜು ಬನಶಂಕರಿ, ಎನ್ ಎಸ್ ಮಾನಸಾ – ಪ್ರಾಂಶುಪಾಲರು ತೋಟಗಾರಿಕಾ ಕಾಲೇಜು ಬೀದರ್, ಸವಿತಾ ಕೆ. – ಸೆಂಟ್ ಅಗ್ನೇಸ್ ಕಾಲೇಜು ಮಂಗಳೂರು, ಟಿ.ಎಮ್ ನೀತು -ತೋಟಗಾರಿಕಾ ಕಾಲೇಜು, ಮುನಿರಾಬಾದ್ ಕೊಪ್ಪಳ, ಭಾನುಪ್ರಿಯ ಆರ್.ಎಂ- ಶ್ರೀ ನಟರಾಜ ರೆಸಿಡೆನ್ಷಿಯಲ್ ಪ್ರಥಮ ದರ್ಜೆ ಮಹಿಳಾ ಕಾಲೇಜು ಮೈಸೂರು, ನೇಹಾ ಎಂ . ಮಾಲಿ- ಕಾಲೇಜ್ ಆಫ್ ಫಾರ್ಮಸಿ, ಹುಬ್ಬಳ್ಳಿ.
ಸ್ವಯಂಸೇವಕರು: ತೇಜುಕುಮಾರ್ ಬಿ.ಕೆ – ತೋಟಗಾರಿಕಾ ಕಾಲೇಜು ,ಬಾಗಲಕೋಟೆ, ಮನು ಎಸ್.ಎಮ್ – ಜಿ.ಕೆ.ವಿ.ಕೆ ಬೆಂಗಳೂರು, ಈಶ್ವರ್ ಸಿ ರಾಮಗೇರಿ – ಕೃಷಿ ಕಾಲೇಜು ವಿಜಯಪುರ, ಫಣೀಂದ್ರ ಪ್ರಸಾದ್ ಡಿ – ಸುರಾನಾ ಪದವಿ ಕಾಲೇಜು ಬೆಂಗಳೂರು, ಶಶಾಂಕ್ ಶೆಟ್ಟಿ – ಕೆನರಾ ಕಾಲೇಜು, ಮಂಗಳೂರು, ಮಧುಸಿಂಗ್ ಜಿ.- ಮಹಾರಾಜ ಕಾಲೇಜು ಮೈಸೂರು.