Advertisement

ಎನ್‌ಎಸ್‌ಡಿ 3 ವರ್ಷಗಳಿಂದ ಬಾಡಿಗೆಯನ್ನೇ ಕಟ್ಟಿಲ್ಲ: ಅಗರ್‌ವಾಲ್‌

07:15 AM Aug 18, 2017 | Team Udayavani |

ಬೆಂಗಳೂರು: ರಾಷ್ಟ್ರೀಯ ನಾಟಕ ಶಾಲೆ(ಎನ್‌ಎಸ್‌ಡಿ) ಕಳೆದ ಮೂರು ವರ್ಷಗಳಿಂದ 20.45 ಲಕ್ಷ ರೂ.ಗಳ ಬಾಡಿಗೆ ಪಾವತಿಸದೆ, ಅನೇಕ ಕಾನೂನುಗಳನ್ನು ಉಲ್ಲಂ ಸಿರುವ ಹಿನ್ನೆಲೆಯಲ್ಲಿ ಗುರುನಾನಕ್‌ ಭವನವನ್ನು ಇಲಾಖೆ ಸುಪರ್ದಿಗೆ ಪಡೆಯಲಾಗಿದೆ ಎಂದು ಯುವಜನ ಸಬಲೀಕರಣ ಇಲಾಖೆ ನಿರ್ದೇಶಕ ಅನುಪಮ್‌ ಅಗರ್‌ವಾಲ್‌ ಸ್ಪಷ್ಟಪಡಿಸಿದ್ದಾರೆ.

Advertisement

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2007ರಲ್ಲಿ ನಾಟಕ ಶಾಲೆ ಆರಂಭಿಸಿದಾಗ, ಕಲಾಗ್ರಾಮದಲ್ಲಿ ಕಟ್ಟಡ ನಿರ್ಮಿಸಿಕೊಳ್ಳುವ ತನಕ ತಾತ್ಕಾಲಿಕವಾಗಿ ಶಾಲೆ ಆರಂಭಿಸಲು ಗುರುನಾನಕ್‌ ಭವನದಲ್ಲಿ ಅನುಮತಿ ನೀಡಲಾಗಿತ್ತು. ನಂತರ ಮೂರು ಬಾರಿ ಅವಧಿ ವಿಸ್ತರಿಸಲಾಗಿದೆ. ಆದರೆ, ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರದ ಮೂಲಸೌಕರ್ಯ ಸ್ಥಾಪನೆಗೆ ಸಾಕಷ್ಟು ಸಮಯ ನೀಡಿಲ್ಲ ಎಂದು ಆರೋಪಿಸುತ್ತಿದೆ.

ಇದು ಸತ್ಯಕ್ಕೆ ದೂರವಾದ ಸಂಗತಿ. ಕಟ್ಟಡ ತೆರವುಗೊಳಿಸುವಂತೆ 2015ರಿಂದ ಐದು ಬಾರಿ ನೋಟಿಸ್‌ ನೀಡಿದರೂ, ಪ್ರತಿಕ್ರಿಯೆ ನೀಡಿಲ್ಲ. ಗುರುವಾರ ಮುಂಜಾನೆ ದೂರವಾಣಿ ಮೂಲಕ ಮಾಹಿತಿ ನೀಡಿದರೂ ಪ್ರತಿಕ್ರಿಯೆ ನೀಡಲಿಲ್ಲ. ಇದರಿಂದ ಪೊಲೀಸರ ಉಪಸ್ಥಿತಿಯಲ್ಲಿ ಕಾನೂನು ಬದ್ಧವಾಗಿ ಕಟ್ಟಡವನ್ನು ಯುವಜನ ಇಲಾಖೆ ಸುಪರ್ದಿಗೆ ಪಡೆಯಲಾಗಿದೆ ಎಂದು ಸ್ಪಷ್ಟಪಡಿಸಿದರು.

2017-18ನೇ ಸಾಲಿನ ನಾಟಕ ಶಾಲೆಯ ಪರಿಚಯ ಪತ್ರದಲ್ಲಿ ಒಂದು ವರ್ಷದ ತರಬೇತಿಯನ್ನು ಕಲಾಗ್ರಾಮದಲ್ಲಿ
ಆಯೋಜಿಸುತ್ತಿರುವುದಾಗಿ ವಿವರ ಒದಗಿಸಲಾಗಿದ್ದು, ಗುರುನಾನಕ್‌ ಭವನವನ್ನು ಸಿಟಿ ಕ್ಯಾಂಪಸ್‌ ಎಂದು ತೋರಿಸಲಾಗಿದೆ. ಆದರೆ, ಕಲಾಗ್ರಾಮದ ಕ್ಯಾಂಪಸ್‌ ಸಿದಟಛಿವಾಗಿಲ್ಲ ಎಂದು ಎನ್‌ಎಸ್‌ಡಿ ನಿರ್ದೇಶಕರು ಸುಳ್ಳು ಹೇಳುತ್ತಿದ್ದಾರೆ ಎಂದು ಅನುಪಮ್‌ ಅಗರ್‌ವಾಲ್‌ ದಾಖಲೆ ಪ್ರದರ್ಶಿಸಿದರು.

ಜಾಗದ ಅವಶ್ಯಕತೆ ಇದೆ: ಕೇವಲ ಬಾಡಿಗೆ ವಿಚಾರವಲ್ಲದೇ, ಯುವಜನ ಇಲಾಖೆಯಿಂದ ಆಯೋಜಿಸುವ ಅನೇಕ ಕಾರ್ಯಕ್ರಮಗಳಿಗೆ ವ್ಯವಸ್ಥಿತ ಸ್ಥಳಾವಕಾಶವಿಲ್ಲ. ರಾಜ್ಯದ ವಿವಿಧ ಭಾಗದಿಂದ ಆಗಮಿಸುವ ಕ್ರೀಡಾರ್ಥಿಗಳಿಗೆ ಉಳಿದುಕೊಳ್ಳಲು ಜಾಗವಿಲ್ಲ. ಆದರಿಂದ ನಾಟಕ ಶಾಲೆಯ ಜಾಗದಲ್ಲಿ ನಮ್ಮ ಕಾರ್ಯಕ್ರಮ ಆಯೋಜಿಸಲು ಚಿಂತನೆ ನಡೆಸಿರುವುದರಿಂದ ಕಟ್ಟಡ ವಾಪಾಸ್‌ ಪಡೆಯಲಾಗಿದೆ. ಮುಂದಿನ ದಿನದಲ್ಲಿ ನಾಟಕ ಶಾಲೆಗೆ ಸಾಂಸ್ಕೃತಿಕ ಚಟುವಟಿಕೆಗೆ ಭವನದ ಅಗತ್ಯವಿದ್ದರೆ ನೀಡಲು ಸಿದ್ಧ. ಅದರೆ ಪೂರ್ಣ ಪ್ರಮಾಣದಲ್ಲಿ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದರು.

Advertisement

ಭವನದ ದುಃಸ್ಥಿತಿ ರಾಷ್ಟ್ರೀಯ ನಾಟಕ ಶಾಲೆ ಕೇಂದ್ರದ ಅಧಿಕಾರಿಗಳು ಅನಧಿಕೃತವಾಗಿ ಗುರುನಾನಕ್‌ ಭವನವನ್ನು ಇತರ ಸಂಸ್ಥೆ
ಗಳಿಗೆ ದಿನಕ್ಕೆ 50 ಸಾವಿರದಂತೆ ಬಾಡಿಗೆಗೆ ನೀಡುತ್ತಿರುವುದು ಕಂಡು ಬಂದಿದೆ. ಭವನದಲ್ಲಿ ಅನಧಿಕೃತವಾಗಿ ವ್ಯಕ್ತಿಗಳು
ವಾಸವಾಗಿರುವ ಹಾಗೂ ಅಡುಗೆ ತಯಾರಿಸುತ್ತಿರುವ ಬಗ್ಗೆ ದಾಖಲೆ ಇದೆ. 10ವರ್ಷದಿಂದ ಗುರುನಾನಕ್‌ ಭವನವನ್ನು ಬಳಸಿಕೊಳ್ಳುತ್ತಿದ್ದರೂ, ಕಟ್ಟಡದ ಛಾವಣಿ ಸೋರುತ್ತಿರುವುದು, ಆಡಿಟೋರಿಯಂ ಸೀಟುಗಳು ಹರಿದಿರುವುದು, ವಿವಿಧ ಸಾಮಗ್ರಿಗಳನ್ನು ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ಎಸೆಯಲಾಗಿದೆ. ನಿರ್ವಹಣೆ ಇಲ್ಲದೇ, ಭವನ ಅತ್ಯಂತ ದುಃಸ್ಥಿತಿಯಲ್ಲಿ ಇರುವುದು ಕಂಡು ಬಂದಿದೆ. ಭವನದ ಆವರಣದಲ್ಲಿ ಅಪಾರ ಪ್ರಮಾಣದಲ್ಲಿ ಖಾಲಿ ಮದ್ಯದ ಬಾಟಲಿಗಳು ಕಂಡು ಬಂದಿವೆ ಎಂದು ಅನುಪಮ್‌ ಅಗರ್‌ವಾಲ್ ‌ಆರೋಪಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬಳಸಿಕೊಳ್ಳಲು ನಮ್ಮ ಅಭ್ಯಂತರವಿಲ್ಲ. ಆದರೆ, ಸುವ್ಯವಸ್ಥಿತ ಕಟ್ಟಡವನ್ನು ಹಾಳು ಮಾಡಲಾಗಿದೆ. ಸರ್ಕಾರದ ಅನುಮತಿ ಇಲ್ಲದೆ ಬೇರೆ ಸಂಸ್ಥೆಗಳಿಗೆ ಬಾಡಿಗೆಗೆ ಕೊಡಲಾಗುತ್ತಿದೆ. ವೆಬ್‌ಸೈಟ್‌ನಲ್ಲಿ ಗುರುನಾನಕ್‌ ಭವನವನ್ನು ಸಿಟಿ ಕ್ಯಾಂಪಸ್‌ ಎಂದು ತೋರಿಸಿ, ಕಾನೂನು ಉಲ್ಲಂ ಸಲಾಗಿದೆ.
– ಅನುಪಮ್‌ ಅಗರ್‌ವಾಲ್‌, ನಿರ್ದೇಶಕ,
ಯುವಜನ ಸಬಲೀಕರಣ-ಕ್ರೀಡಾ ಇಲಾಖೆ.

Advertisement

Udayavani is now on Telegram. Click here to join our channel and stay updated with the latest news.

Next