Advertisement

ಇಸ್ರೇಲ್‌ ಪ್ರಧಾನಿ ಭೇಟಿಯಾಗಿ ಮಾತುಕತೆ ನಡೆಸಿದ ಅಜಿತ್‌ ದೋವಲ್‌ 

09:37 AM Mar 03, 2017 | |

ಜೆರುಸಲೇಂ: ಇಸ್ರೇಲ್‌ ಪ್ರವಾಸದಲ್ಲಿರುವ  ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರು ಬುಧವಾರ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದರು. 

Advertisement

ಪ್ರಧಾನಿ ನರೇಂದ್ರ ಮೋದಿ ಅವರು ವರ್ಷದ ಮಧ್ಯದಲ್ಲಿ ಇಸ್ರೇಲ್‌ ಪ್ರವಾಸ ಕೈಗೊಳ್ಳಲಿದ್ದು ಅದಕ್ಕೂ ಮುನ್ನ ನಡೆದ ದೋವಲ್‌ ಅವರ ಭೇಟಿ ಮಹತ್ವ ಪಡೆದುಕೊಂಡಿದೆ. 

ದೋವಲ್‌ ಅವರನ್ನು ಜೆರುಸಲೇಂನ ಕಚೇರಿಗೆ ಕರೆಸಿಕೊಂಡ ನೆತನ್ಯಾಹು ಅವರು ಕೆಲ ಹೊತ್ತು ಮಹತ್ವದ ವಿಚಾರಗಳ ಚರ್ಚೆ ನಡೆಸಿದ್ದಾರೆ ಎಂದು ವರದಿಯಾಗಿದೆ.  ಈ ವೇಳೆ ಇಸ್ರೇಲ್‌ನ ಭದ್ರತಾ ಸಲಹೆಗಾರ, ಜಾಕೋಬ್‌ ನಾಗೇಲ್‌ ಅವರೊಂದಿಗೂ ಮಾತುಕತೆ ನಡೆಸಿದರು. 

ಉಭಯ ದೇಶಗಳು ರಾಜತಾಂತ್ರಿಕ ಸಂಬಂಧದ 25 ನೇ ವರ್ಷಾಚರಣೆಯಲ್ಲಿದ್ದು, ನೆತನ್ಯಾಹು ಅವರು ಈ ವರ್ಷದ ಕೊನೆಯಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next