Advertisement
ಇದೇ ವೇಳೆ ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ್ ನಾಯಕ್ ಮಾತನಾಡಿ, ಕೇಂದ್ರ ಸರಕಾರವು 2004ರಲ್ಲಿ ಅವೈಜ್ಞಾನಿಕ ಸಿದ್ಧಾಂತ ಹಾಗೂ ಅಭದ್ರತೆಯಿಂದ ಕೂಡಿದ ಎನ್‌ಪಿಎಸ್ ಯೋಜನೆಯನ್ನು ಜಾರಿಗೊಳಿಸಿದ ಮೇಲೆ 2006ರಲ್ಲಿ ರಾಜ್ಯ ಸರಕಾರ ಈ ಯೋಜನೆಯನ್ನು ಅಳವಡಿಸಿರುತ್ತದೆ. ಆದರೆ ರಾಜ್ಯದಲ್ಲಿನ ಸರಕಾರಿ ಪಿಂಚಣಿ ಸೌಲಭ್ಯದಲ್ಲಿ ಹಲವು ನ್ಯೂನ್ಯತೆಗಳಿವೆ. ಟ್ರಸ್ಟ್ ಮ್ಯಾನೇಜ್ ಮೆಂಟ್‌ನವರು ನಿರ್ವಹಿಸುವ ಇದರ ಆರ್ಥಿಕ ಕಾರ್ಯನಿರ್ವಹಣೆಯಲ್ಲಿ ಯಾವುದೇ ಬದ್ಧತೆಗಳು ಇಲ್ಲದೆ, ಅನಿಶ್ಚಿತ ಪಿಂಚಣಿ ಯೋಜನೆ ಇದಾಗಿದೆ. ಇದರಿಂದ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು 1.80 ಲಕ್ಷ ಸರಕಾರಿ ನೌಕರರು ಅನೇಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ಹೇಳಿದರು.
ಹಳೆಯ ಪಿಂಚಣಿ ಯೋಜನೆಯಲ್ಲಿ ನಿಶ್ಚಿತ ಪಿಂಚಣಿ ಸೌಲಭ್ಯ, ಜಿಪಿಎಫ್ ಸೌಲಭ್ಯವಿತ್ತು. ಆದರೆ ಹೊಸ ಪಿಂಚಣಿ ಯೋಜನೆಯಲ್ಲಿ ಇದಿಲ್ಲ. ಅಲ್ಲದೆ 33 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದರೂ ಕೂಡ ಟ್ರಸ್ಟ್ ಮ್ಯಾನೇಜ್‌ಮೆಂಟ್‌ನವರು ಕಡಿಮೆ ಪಿಂಚಣಿ ನಿಗದಿಪಡಿಸುತ್ತಾರೆ. ಪಿಂಚಣಿಗಾಗಿ ವೇತನದಲ್ಲಿ ಶೇ.10ರಷ್ಟು ಕಡಿತಗೊಳಿಸಲಾಗುತ್ತದೆ. ಕುಟುಂಬ ಪಿಂಚಣಿ ಕೂಡ ಲಭ್ಯವಿಲ್ಲ. ತುಟ್ಟಿಭತ್ಯೆ ಕೂಡ ಸಿಗುವುದಿಲ್ಲ ಎಂದರು. ಮನವಿ ಸಲ್ಲಿಕೆ
ಇದೇ ವೇಳೆ ನಿಶ್ಚಿತ ಪಿಂಚಣಿ ನಮ್ಮ ಹಕ್ಕು ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಗೊಳಿಸುವಂತೆ ಕೋರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
Related Articles
ಸಂಚಾಲಕ ಅಕ್ಷಯ್ ಭಂಡಾರ್‌ಕಾರ್, ರಾಜ್ಯ ಪರಿಷತ್ ಸದಸ್ಯ ಡಾಲ್ಫಿ ಸಿಕ್ವೇರಾ, ಉಪಾಧ್ಯಕ್ಷ ಪಿ.ಕೆ. ಕೃಷ್ಣ, ಎಂ.ಬಿ. ದೇವದಾಸ್, ಅಗ್ನೇಲ್ ಪಿಂಟೊ, ಅಶ್ವಿನ್ ಕುಮಾರ್, ಕ್ರೀಡಾ ಕಾರ್ಯದರ್ಶಿ ನಾಗೇಶ್ ಉಪಸ್ಥಿತರಿದ್ದರು.
Advertisement