Advertisement
ಸಂಪ್ರದಾಯವಾದಿ ದೇಶದಲ್ಲಿ ಸುಧಾರಣಾ ಕ್ರಮಗಳನ್ನು ಘೋಷಿಸುತ್ತಿರುವ ಭಾವೀ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಕಳೆದ ಸೆಪ್ಟಂಬರ್‌ನಲ್ಲಿ ವಾಹನ ಚಾಲನೆಗಿದ್ದ ನಿರ್ಬಂಧವನ್ನು ರದ್ದು ಮಾಡಿದ್ದರಲ್ಲದೆ, ಮುಂದಿನ ಜೂನ್‌ನಿಂದ ಮಹಿಳೆಯರೂ ಚಾಲನೆ ಮಾಡ ಬಹುದು ಎಂದಿದ್ದರು. ಇದೀಗ ಶನಿವಾರ ಸೌದಿ ಸಂಚಾರ ಪ್ರಧಾನ ನಿರ್ದೇಶಕರು ಹೊಸ ನಿಯಮಗಳ ಕುರಿತ ವಿವರಗಳನ್ನು ಪ್ರಕಟಿ ಸಿದ್ದು, ವಾಹನ ಚಾಲನೆಗೆ ಸಂಬಂಧಿಸಿ ಮಹಿಳೆ ಯರು ಹಾಗೂ ಪುರುಷರಿಗೆ ಸಮಾನ ಅವಕಾಶ ಗಳು ಇರಬೇಕು ಎನ್ನುವುದು ದೊರೆಗಳ ನಿರ್ಧಾರವಾಗಿದೆ. ಹಾಗಾಗಿ, ಇನ್ನು ಮಹಿಳೆ ಯರು ಮೋಟಾರು ಬೈಕ್, ಟ್ರಕ್ ಸಹಿತ ಎಲ್ಲ ವಿಧದ ವಾಹನಗಳನ್ನೂ ಚಲಾಯಿಸಬಹುದು ಎಂದಿದ್ದಾರೆ. ಜತೆಗೆ, ಮಹಿಳೆಯರು ಚಲಾಯಿ ಸುವ ವಾಹನಗಳಿಗೆ ವಿಶೇಷ ಲೈಸೆನ್ಸ್ ಪ್ಲೇಟ್‌ನ ಅಗತ್ಯವಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ಆದರೆ, ಮಹಿಳೆಯರಿಂದಾಗುವ ಅಪಘಾತ, ಸಂಚಾರ ನಿಯಮ ಉಲ್ಲಂಘನೆಯಂಥ ಪ್ರಕರಣಗಳ ವಿಚಾರಣೆಗಾಗಿ ಪ್ರತ್ಯೇಕ ಕೇಂದ್ರಗಳನ್ನು ತೆರೆಯಲಾಗುವುದು ಎಂದಿದ್ದಾರೆ. Advertisement
ಸೌದಿ ನಾರಿಯರ ದಿಲ್‌ಖುಷ್
06:10 AM Dec 17, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.