ಹೊಸದಿಲ್ಲಿ: ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಯಲ್ಲಿ 2019ರ ಚುನಾವಣೆಗೆ ರಾಹುಲ್ ಗಾಂಧಿಯವರೇ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಿತ್ತು. ಆದರೆ ಪಕ್ಷದ ವತಿಯಿಂದಲೇ ಅದನ್ನು ಬದಲು ಮಾಡಲು ಸಿದ್ಧತೆ ನಡೆದಿದೆ. ಆರ್‌ಎಸ್‌ಎಸ್ ಹಿನ್ನೆಲೆ ಇಲ್ಲದೇ ಇರುವ ಪ್ರತಿಪಕ್ಷಗಳ ಯಾವುದೇ ನಾಯಕರನ್ನು ಪ್ರಧಾನಿಯಾಗಿ ಒಪ್ಪಿಕೊಳ್ಳಲು ಸಿದ್ಧವಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.
ಉತ್ತರ ಪ್ರದೇಶದಲ್ಲಿ ಮೈತ್ರಿ ಮಾಡಿಕೊಳ್ಳಲು ತಾನು ಹೇಳಿದ ಸಂಖ್ಯೆಯ ಸ್ಥಾನ ನೀಡದಿದ್ದರೆ ಪ್ರಸ್ತಾಪ ಒಪ್ಪಿಕೊಳ್ಳುವುದಿಲ್ಲ ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ಹೇಳಿದ ಬೆನ್ನಲ್ಲೇ ನಿಲುವು ಬದಲಾವಣೆಯಾಗಿದೆ. ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಹೆಸರು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಈ ನಿಲುವು ಪ್ರಮುಖವಾಗಿದೆ.
ಚುನಾವಣೆಗಾಗಿ ಇತರ ಪಕ್ಷಗಳ ಜತೆಗೆ ಮೈತ್ರಿ ಮಾಡಿಕೊಳ್ಳಲು ರಾಹುಲ್‌ಗೆ ಸಿಡಬ್ಲೂéಸಿ ಅಧಿಕಾರ ನೀಡಿದೆ.
ಇನ್ನು ಬಿಹಾರ ಮತ್ತು ಉತ್ತರ ಪ್ರದೇಶಗಳಲ್ಲಿ ಬಿಜೆಪಿ ವಿರೋಧಿ ಮಹಾಮೈತ್ರಿ ಕೂಟ ರಚನೆಯಾದರೆ ಶೇ.22 ಸ್ಥಾನಗಳನ್ನು ಪಡೆಯಲು ಅನುಕೂಲವಾಗುತ್ತದೆ ಎನ್ನುವುದು ಕಾಂಗ್ರೆಸ್ ಲೆಕ್ಕಾಚಾರ. ಬಿಜೆಪಿ ವಿರುದ್ಧ ಟಿಡಿಪಿ, ಶಿವಸೇನೆ ಮುನಿಸಿಕೊಂಡಿ ರುವುದನ್ನೂ ತನಗೆ ಧನಾತ್ಮಕವಾಗಿಸಲು ಅದು ಮುಂದಾಗಿದೆ.