Advertisement
ದಿಲ್ಲಿಯಲ್ಲಿನ ಮಾಲಿನ್ಯಕ್ಕೆ ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳ ರೈತರೂ ಕಾರಣ ಎಂದು ಹೇಳಲಾಗಿದ್ದು, ಈ ಹಿನ್ನೆಲೆಯಲ್ಲಿ ಈ ಎರಡೂ ರಾಜ್ಯಗಳ ಜತೆ ಮಾತುಕತೆ ನಡೆಸಲು ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಮುಂದಾಗಿದ್ದಾರೆ. ಈ ಬಗ್ಗೆ ಸೋಮವಾರವೇ ಕೇಜ್ರಿವಾಲ್ ಟ್ವೀಟ್ ಮೂಲಕ ಪ್ರಸ್ತಾಪಿಸಿದ್ದು, ಇದಕ್ಕೆ ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಒಪ್ಪಿಗೆ ನೀಡಿದ್ದರು. ಆದರೆ, ಬುಧವಾರ ಚಂಡೀಗಡಕ್ಕೆ ಬರುವುದಾಗಿ ಹೇಳಿದ್ದ ಕೇಜ್ರಿವಾಲ್, ಈ ಮಾತುಕತೆಗೆ ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ಅವರನ್ನೂ ಆಹ್ವಾನಿಸಿದ್ದಾರೆ.
Related Articles
Advertisement
ಈ ಮಧ್ಯೆ ದ್ವಿಚಕ್ರ ವಾಹನಗಳೇ ದಿಲ್ಲಿ ಮಾಲಿನ್ಯಕ್ಕೆ ಹೆಚ್ಚು ಕಾರಣ ಎಂಬುದು ಗೊತ್ತಾಗಿದೆ. ಇದನ್ನು ಕಂಡೂ ಮತ್ತೆ ಮತ್ತೆ ಅವುಗಳಿಗೇ ವಿನಾಯಿತಿ ಕೋರುವುದು ಎಷ್ಟು ಸರಿ ಎಂದು ಎನ್‌ಜಿಟಿ ತೀಕ್ಷ್ಣವಾಗಿ ಪ್ರಶ್ನಿಸಿತು.
ಬೆಳೆಗೆ ಬೆಂಕಿ ಹಾಕುವ ರೈತರ ವಿರುದ್ಧ ಕ್ರಮದ ಎಚ್ಚರಿಕೆಈ ಮಧ್ಯೆ ಹೊಲಗಳಲ್ಲಿನ ಬೆಳೆ ಸುಡುತ್ತಿರುವ 300 ರೈತರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳುವುದಾಗಿ ಹರ್ಯಾಣ ಸರಕಾರ ಹೇಳಿದೆ. ಅಲ್ಲದೆ ಹೊಲಗಳಲ್ಲಿ ಬೆಂಕಿ ಹಚ್ಚದಂತೆ ರೈತರಲ್ಲಿ ಅಲ್ಲಿನ ಸರಕಾರ ಮನವಿಯನ್ನೂ ಮಾಡಿದೆ. ಬೆಳೆಗೆ ಬೆಂಕಿ ಹಚ್ಚುವುದರಿಂದ ಮುಂದಿನ ಬಾರಿ ಇಳುವರಿಯೂ ಹೆಚ್ಚಾಗಿ ಬರುವುದಿಲ್ಲ ಎಂದು ಹರ್ಯಾಣ ಪರಿಸರ ಸಚಿವರು ಹೇಳಿದ್ದಾರೆ. ಅಲ್ಲದೆ 244 ರೈತರ ವಿರುದ್ಧ ಪ್ರಕರಣ ದಾಖಲಿಸಿರುವ ಹಾಗೂ ಅವರಿಂದ 18.65 ಲಕ್ಷ ದಂಡ ವಸೂಲಿ ಮಾಡಿರುವ ಬಗ್ಗೆಯೂ ಅವರು ಮಾಹಿತಿ ನೀಡಿದ್ದಾರೆ. ಈ ವರ್ಷವೇ ಇಂಥ 1586 ರೈತರ ವಿರುದ್ದ ಕ್ರಮ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.