Advertisement

ಪತ್ರಿಕೆಗಳ ಪ್ರಸರಣ ಪರಿಶೀಲನೆ ಹೊಣೆ ಇನ್ನು ಪಿಐಬಿಗೆ

09:25 AM Sep 22, 2017 | Karthik A |

ಹೊಸದಿಲ್ಲಿ: ಪತ್ರಿಕೆಗಳು ಎಷ್ಟು ಪ್ರಮಾಣದಲ್ಲಿ ಪ್ರಸರಣ ಹೊಂದಿವೆ ಎನ್ನುವುದನ್ನು ಇನ್ನು ಮುಂದೆ ಕೇಂದ್ರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಪ್ರಸ್‌ ಇನ್ಫೋರ್ಮೇಷನ್‌ ಬ್ಯೂರೋ (ಪಿಐಬಿ) ಗಮನಿಸಲಿದೆ. ಇದುವರೆಗೆ ರಿಜಿಸ್ಟ್ರಾರ್‌ ಜನರಲ್‌ ಆಫ್ ನ್ಯೂಸ್‌ಪೇಪರ್ಸ್‌ ಆಫ್ ಇಂಡಿಯಾ (ಆರ್‌ಎನ್‌ಐ) ಪ್ರಸರಣ ಎಷ್ಟು ಹೊಂದಿದೆ ಎನ್ನುವುದನ್ನು ಗಮನಿಸುತ್ತಿತ್ತು. ಕೆಲ ದಿನಗಳ ಹಿಂದಷ್ಟೇ ಈ ಬಗ್ಗೆ ಸರಕಾರ ಆದೇಶ ಹೊರಡಿಸಿತ್ತು. ಅದರಲ್ಲಿ ಅನುಮೋದನೆಗೆ ಒಳಪಟ್ಟ ಪಿಐಬಿ ಅಧಿಕಾರಿಗಳು ಇರುತ್ತಾರೆ. ಕೇಂದ್ರ ಸರಕಾರದ ಜಾಹೀರಾತುಗಳನ್ನು ಪಡೆಯಲು ಡೈರೆಕ್ಟರೇಟ್‌ ಆಫ್ ಅಡ್ವರ್ಟೈಸಿಂಗ್‌ ಆ್ಯಂಡ್‌ ವಿಶ್ಯುವಲ್‌ ಪಬ್ಲಿಸಿಟಿ (ಡಿಎವಿಪಿ)ಗೆ ಪತ್ರಿಕೆಗಳು ಸರ್ಕ್ಯುಲೇಶನ್‌ನ ಮಾಹಿತಿ ನೀಡಬೇಕಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next