Advertisement

ಮಹಾತ್ಮ ಗಾಂಧೀಜಿ ಎದೆ ಬಡಿತ ಮರುಸೃಷ್ಟಿ

08:10 AM Oct 01, 2018 | Karthik A |

ನವದೆಹಲಿ: ಮಹಾತ್ಮ ಗಾಂಧಿಯವರ 150ನೇ ಜನ್ಮದಿನದ ಪ್ರಯುಕ್ತ, ಇಲ್ಲಿನ ರಾಷ್ಟ್ರೀಯ ಗಾಂಧಿ ಮ್ಯೂಸಿಯಂನಲ್ಲಿ ಅ. 2ರಂದು ಗಾಂಧೀಜಿಯವರ ಬಗೆಗಿನ ಅನೇಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ನಡೆಯಲಿದೆ.  ಗಾಂಧಿಯವರ ಇಸಿಜಿ (ಎಲೆಕ್ಟ್ರಾನಿಕ್‌ ಕಾರ್ಡಿಯೋಗ್ರಾಂ) ದಾಖಲೆಗಳನ್ನು ಸಂಪಾದಿಸಲಾಗಿದ್ದು, ಅವುಗಳಲ್ಲಿನ ದತ್ತಾಂಶಗಳನ್ನು ಆಧರಿಸಿ ಅವರ ಹೃದಯದ ಬಡಿತವನ್ನು ಡಿಜಿಟಲ್‌ ತಂತ್ರಜ್ಞಾನದ ಮೂಲಕ ಮರುಸೃಷ್ಟಿಸಲಾಗಿದ್ದು, ಇದನ್ನು ಎಲ್ಲರೂ ಆಲಿಸಬಹುದು ಎಂದು ಮ್ಯೂಸಿಯಂನ ನಿರ್ದೇಶಕ ಎ. ಅಣ್ಣಾಮಲೈ ತಿಳಿಸಿದ್ದಾರೆ.

Advertisement

ಈ ಮ್ಯೂಸಿಯಂಗೆ ಭೇಟಿ ನೀಡುವವರಿಗೆ ನೀಡಲಾಗುವ ಪೆನ್‌ಡ್ರೈವ್‌ನಲ್ಲಿ ‘ಡಿಜಿಟಲ್‌ ಮಲ್ಟಿ ಮೀಡಿಯಾ ಕಿಟ್‌’ ಇರಲಿದ್ದು, ಇದರಲ್ಲಿ ಗಾಂಧಿ ಬಗೆಗಿನ 10 ಪುಸ್ತಕಗಳ ಡಿಜಿಟಲ್‌ ರೂಪ ಇರಲಿದೆ. ಜತೆಗೆ ಗಾಂಧೀಜಿಯವರ ಬಗೆಗಿನ ಕಿರುಚಿತ್ರ, ಗಾಂಧೀಜಿಯ ಜೀವನ ಘಟ್ಟಗಳ 100 ಪ್ರಮುಖ ಚಿತ್ರಗಳು, ಗಾಂಧೀಜಿಯವರ ಧ್ವನಿಯಲ್ಲಿನ ಭಾಷಣಗಳು, ಅವರ ಆಶ್ರಮಗಳ ಬಗ್ಗೆ ಕಿರುನೋಟ, ಅವರ ಅಚ್ಚುಮೆಚ್ಚಿನ ಭಜನೆಗಳು ಇರಲಿವೆ.

Advertisement

Udayavani is now on Telegram. Click here to join our channel and stay updated with the latest news.

Next