Advertisement

ಇಡೀ ಕುಟುಂಬಕ್ಕೆ ಈಗ ಒಂದೇ ಕ್ಯುಆರ್‌ ಕೋಡ್‌!

04:25 PM Dec 07, 2022 | Team Udayavani |

ಬೆಂಗಳೂರು: “ನಮ್ಮ ಮೆಟ್ರೋ’ದಲ್ಲಿ ಪ್ರಯಾಣಿಸಲು ಇನ್ಮುಂದೆ ಒಂದು ಕುಟುಂಬಕ್ಕೆ ಒಂದೇ ಕ್ಯುಆರ್‌ ಕೋಡ್‌ ಸಾಕು! ಹೌದು, ಕರ್ನಾಟ ಕ ರಾಜ್ಯೋತ್ಸವದಂದು ಪರಿಚಯಿಸಿದ್ದ ಕ್ಯುಆರ್‌ ಕೋಡ್‌ ಆಧಾರಿತ ಪ್ರಯಾಣ ಸೌಲಭ್ಯಕ್ಕೆ ಒಂದೇ ತಿಂಗಳಲ್ಲಿ ನಿರೀಕ್ಷೆ ಮೀರಿ ಸ್ಪಂದನೆ ದೊರೆತ ಬೆನ್ನಲ್ಲೇ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌)ವು ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಒಂದೇ ಕ್ಯುಆರ್‌ ಕೋಡ್‌ನ‌ಲ್ಲಿ ನಾಲ್ಕೈದು ಜನ ಗುಂಪಾಗಿ ಪ್ರಯಾಣಿಸುವ ವ್ಯವಸ್ಥೆ ಜಾರಿಗೊಳಿಸಲು ಉದ್ದೇಶಿಸಿದೆ.

Advertisement

ಈಗಾಗಲೇ ಈ ನಿಟ್ಟಿನಲ್ಲಿ ಪ್ರಯೋಗಗಳು ನಡೆದಿದ್ದು, ಹೊಸ ವರ್ಷಕ್ಕೆ ಅಂದರೆ ಜನವರಿ ಮಧ್ಯೆ ಅವಧಿಯಲ್ಲಿ ಮೆಟ್ರೋ ಪ್ರಯಾ ಣಿಕರು ಒಂದೇ ಕ್ಯುಆರ್‌ ಕೋಡ್‌ ತೋರಿಸಿ ಗರಿಷ್ಠ 6 ಜನ ಒಟ್ಟಿಗೇ ಸ್ವಯಂಚಾಲಿತ ಶುಲ್ಕ ಸಂಗ್ರಹ (ಎಎಫ್ಸಿ) ದ್ವಾರಗಳನ್ನು ಪ್ರವೇಶಿಸಲಿ ದ್ದಾರೆ. ಇದರಿಂದ ಕುಟುಂ ಬದ ಸದಸ್ಯರೆಲ್ಲರೂ ಒಂದೇ ಕ್ಯುಆರ್‌ ಕೋಡ್‌ನ‌ಲ್ಲಿ ತೆರಳಬಹುದು. ಮತ್ತಷ್ಟು ಸಮಯ ಉಳಿತಾಯ ಕೂಡ ಆಗಲಿದೆ. ಪ್ರ

ಸ್ತುತ ವ್ಯವಸ್ಥೆಯಲ್ಲಿ ಮೊಬೈಲ್‌ನಲ್ಲಿ ಒಂದು ಕ್ಯುಆರ್‌ ಕೋಡ್‌ನ‌ಲ್ಲಿ ಒಬ್ಬರು ಮಾತ್ರ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಅದರಂತೆ ಪ್ರಯಾಣಿಕರು ಬಿಎಂಆರ್‌ಸಿಎಲ್‌ನ ವ್ಯಾಟ್ಸ್‌ಆ್ಯಪ್‌ ಸಂಖ್ಯೆ 8105556677ಕ್ಕೆ “ಹಾಯ್‌’ ಎಂಬ ಸಂದೇಶ ಕಳುಹಿಸುವ ಮೂಲಕ ಕ್ಯುಆರ್‌ ಟಿಕೆಟ್‌ ಪಡೆದುಕೊಳ್ಳಬಹುದು ಅಥವಾ ಆ್ಯಂಡ್ರಾಯ್ಡ ಫೋನ್‌ನಲ್ಲಿ “ನಮ್ಮ ಮೆಟ್ರೋ’ ಆ್ಯಪ್‌ ಡೌನ್‌ಲೋಡ್‌ ಮಾಡಿ ಅಲ್ಲಿಂ ದಲೂ ಕ್ಯುಆರ್‌ ಆಧಾರಿತ ಟಿಕೆಟ್‌ ಸ್ವೀಕರಿಸಬಹುದಾಗಿದೆ. ಹೊಸ ವ್ಯವಸ್ಥೆಯಲ್ಲಿ ಇದೇ ಪ್ಲಾಟ್‌ಫಾರಂನಲ್ಲಿ ಒಟ್ಟಿಗೆ ಗರಿಷ್ಠ ಆರು ಜನರಿಗೆ ಟಿಕೆಟ್‌ ಪಡೆಯುವ ಸೌಲಭ್ಯ ಇರಲಿದೆ.

ಸಾಮಾನ್ಯವಾಗಿ ಕುಟುಂಬದ ಸದಸ್ಯರೆಲ್ಲರೂ ಮೆಟ್ರೋದಲ್ಲಿ ಪ್ರಯಾ ಣಿಸುವಾಗ ಈಗಿರುವ ಕ್ಯುಆರ್‌ ಟಿಕೆಟ್‌ ನಿರೀಕ್ಷಿತ ಮಟ್ಟದಲ್ಲಿ ಅನುಕೂಲ ಆಗುವುದಿಲ್ಲ. ಮಕ್ಕಳು, ಮಹಿಳೆಯರು ಅಥವಾ ಹಿರಿಯ ನಾಗರಿಕರು ಪ್ರತ್ಯೇಕವಾಗಿ ಟಿಕೆಟ್‌ ಪಡೆಯಬೇಕಿದೆ. ಆಗ ಅಂತಹ ಸಂದರ್ಭದಲ್ಲಿ ಟೋಕನ್‌ ಮೊರೆಹೋಗಬೇಕಾಗಿದೆ ಅಥವಾ ವಿವಿಧ ಮಾದರಿ ಅಂದರೆ ಒಬ್ಬರು ಸ್ಮಾರ್ಟ್‌ಕಾರ್ಡ್‌ ಮತ್ತೂಬ್ಬರು ಕ್ಯುಆರ್‌ ಇನ್ನೊಬ್ಬರು ಸರದಿ ಯಲ್ಲಿ ನಿಂತು ಟೋಕನ್‌ ಪಡೆಯಬೇಕಾಗುತ್ತದೆ. ಇದು ತುಸು ಕಿರಿಕಿರಿ ಅನಿಸಬಹುದು. ಇವರೆಲ್ಲರಿಗೂ ಒಂದೇ ಕ್ಯುಆರ್‌ನಲ್ಲಿ ಪ್ರಯಾಣಿಸು ವಂತಾದರೆ ಹೆಚ್ಚು ಅನುಕೂಲ ಎಂಬ ಕಾರಣಕ್ಕೆ ಕ್ಯುಆರ್‌ನಲ್ಲಿ ಗುಂಪು ಟಿಕೆಟ್‌ ವ್ಯವಸ್ಥೆ ಪರಿಚಯಿಸಲು ಉದ್ದೇಶಿಸಲಾಗಿದೆ ಎಂದು ಬಿಎಂಆರ್‌ ಸಿಎಲ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಹೆಚ್ಚಲಿದೆ ಬಳಕೆದಾರರ ಸಂಖ್ಯೆ?: “ಗುಂಪು ಟಿಕೆಟ್‌ ವ್ಯವಸ್ಥೆ ಪರಿಚಯಿಸುವ ನಿಟ್ಟಿನಲ್ಲಿ ಪ್ರಯೋಗಗಳು ನಡೆದಿವೆ. ಈಗಿರುವ ಎಎಫ್ಸಿಯಲ್ಲೇ ಒಂದು ಕ್ಯುಆರ್‌ನಲ್ಲಿ ಒಬ್ಬರಿಗಿಂತ ಹೆಚ್ಚು ಪ್ರಯಾಣಿಕರು ಪ್ರಯಾಣಿಸಲು ಅವಕಾಶ ಇದೆ. ಜನವರಿ ಮಧ್ಯೆ ಅವಧಿಯಲ್ಲಿ ಜಾರಿಗೊಳಿಸುವ ಚಿಂತನೆ ಇದೆ. ಪ್ರಸ್ತುತ ನಿತ್ಯ ಸುಮಾರು 10 ಸಾವಿರ ಜನ ಕ್ಯುಆರ್‌ ಬಳಕೆ ಮಾಡುತ್ತಿದ್ದು, ಅಂದಾಜು ಮಾಸಿಕ 2ರಿಂದ 3 ಲಕ್ಷ ರೂ. ಆದಾಯ ಈ ಮೂಲದಿಂದ ಬರುತ್ತಿದೆ. ಗುಂಪು ಟಿಕೆಟಿಂಗ್‌ ವ್ಯವಸ್ಥೆಯಿಂದ ಬಳಕೆದಾರರ ಸಂಖ್ಯೆ ಮತ್ತಷ್ಟು ಏರಿಕೆ ಆಗಲಿದೆ’ ಎಂದು ಬಿಎಂಆರ್‌ಸಿಎಲ್‌ ನಿರ್ದೇಶಕ (ಕಾರ್ಯಾಚರಣೆ ಮತ್ತು ನಿರ್ವಹಣೆ) ಎ.ಎಸ್‌. ಶಂಕರ್‌ “ಉದಯವಾಣಿ’ಗೆ ತಿಳಿಸಿದರು. ನವೆಂಬರ್‌ ಅಂತ್ಯಕ್ಕೆ 2.11 ಲಕ್ಷ ಜನ ಕ್ಯುಆರ್‌ ಆಧಾರಿತ ಟಿಕೆಟ್‌ ಪಡೆದು ಪ್ರಯಾಣಿಸಿದ್ದಾರೆ. ಇದರಲ್ಲಿ ಶೇ. 58.5ರಷ್ಟು ಜನ ವ್ಯಾಟ್ಸ್‌ಆ್ಯಪ್‌ ಮೂಲಕ ಟಿಕೆಟ್‌ ಹೊಂದಿದ್ದರೆ, ಶೇ. 41.4ರಷ್ಟು ಜನ ಆ್ಯಪ್‌ನಲ್ಲಿ ಕ್ಯುಆರ್‌ ಟಿಕೆಟ್‌ ಪಡೆದು ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ಇದಲ್ಲದೆ, ಸುಮಾರು 1.4 ಲಕ್ಷ ಪ್ರಯಾಣಿಕರು ಸ್ಮಾರ್ಟ್‌ಕಾರ್ಡ್‌ ರಿಚಾರ್ಜ್‌ ಉದ್ದೇಶಕ್ಕೆ ಕ್ಯುಆರ್‌ ಕೋಡ್‌ ಸೌಲಭ್ಯ ಬಳಸಿದ್ದಾರೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next