ಹೊಸದಿಲ್ಲಿ: ಕೊರೊನಾ ಮೂರನೇ ಅಲೆ ಬಾಧಿ ಸದ ಪರಿ ಣಾಮ ನವೆಂಬ ರ್ ನಲ್ಲಿ ದೇಶದ ಅರ್ಥ ವ್ಯ ವಸ್ಥೆ ಮತ್ತಷ್ಟು ಸುಧಾ ರಿ ಸಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕಳೆದ ತಿಂಗಳ ಜಿಎ ಸ್‌ಟಿ ಸಂಗ್ರಹ ದಾಖಲೆಯ 1,31,526 ಕೋಟಿ ರೂ. ಆಗಿದೆ.
ಜಿಎಸ್‌ಟಿ ವ್ಯವಸ್ಥೆ ಜಾರಿಗೆ ಬಂದ ಅನಂತರ ಅತ್ಯಧಿಕ ಮೊತ್ತ ಸಂಗ್ರಹವಾಗುತ್ತಿರುವುದು ಇದು ಎರಡನೇ ಬಾರಿ.
ಜಿಎಸ್‌ಟಿ ಹೆಚ್ಚಳದಿಂದಾ ಗಿ ಶೇ. 25ರಷ್ಟು ಆದಾಯ ಹೆಚ್ಚಳವಾಗಿದೆ. ದೇಶದ ಅರ್ಥವ್ಯವಸ್ಥೆ ನಿಧಾನಕ್ಕೆ ಸರಿದಾರಿಗೆ ಬರುತ್ತಿದೆ ಎಂಬುದನ್ನು ಈ ಅಂಶ ಪುಷ್ಟೀಕರಿಸುತ್ತಿದೆ ಎಂದು ಕೇಂದ್ರ ವಿತ್ತ ಸಚಿವಾಲಯ ಬುಧವಾರ ಹೇಳಿಕೊಂಡಿದೆ.
ಇದರ ಜತೆಗೆ ಸತತ 5ನೇ ಬಾರಿಗೆ ಜಿಎಸ್‌ಟಿ ಸಂಗ್ರಹ 1 ಲಕ್ಷ ಕೋಟಿ ರೂ. ಮೊತ್ತ ದಾಟಿರುವುದು ವಿಶೇಷ. ಅಕ್ಟೋಬರ್‌ನಲ್ಲಿ 1.30 ಲಕ್ಷ ಕೋಟಿ ರೂ. ಸಂಗ್ರಹವಾಗಿತ್ತು. ಹೀಗಾಗಿ ಸತತ 2ನೇ ಬಾರಿಗೆ ಜಿಎಸ್‌ಟಿ ಮೊತ್ತ ಸಂಗ್ರಹವಾಗಿದೆ.
ಇದನ್ನೂ ಓದಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 8 ರೂ. ಇಳಿಕೆ
ಕಳೆದ ಎಪ್ರಿಲ್‌ನಲ್ಲಿ 1.41 ಲಕ್ಷ ಕೋಟಿ ರೂ. ಸಂಗ್ರಹವಾದದ್ದು ಇದುವರೆಗಿನ ಅತ್ಯಂತ ದೊಡ್ಡ ಮೊತ್ತದ ಜಿಎಸ್‌ಟಿ ಸಂಗ್ರಹವಾಗಿದೆ. ಮತ್ತೊಂದು ಪ್ರಧಾನ ಅಂಶವೆಂದರೆ ಕಳೆದ ತಿಂಗಳು ಸಂಗ್ರಹವಾಗಿರುವ ಆದಾಯ 2020ರ ನವೆಂಬರ್‌ಗೆ ಹೋಲಿಸಿದರೆ ಶೇ. 25ರಷ್ಟು ಅಧಿಕ. 2019-20ನೇ ಸಾಲಿಗೆ ಹೋಲಿಸಿದರೆ ಶೇ. 27ರಷ್ಟು ಹೆಚ್ಚು ಎಂದು ಸರಕಾರ ತಿಳಿಸಿದೆ.